https://youtube.com/shorts/tAQS6h_SZWA?si=vAoxcVAHQglCsru5
Subscribe ನ್ಯೂಸಿಕ್ಸ್ ಕನ್ನಡ
newsics.com
ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು ಸಂಸತ್ತಿನಲ್ಲಿ ದೆಹಲಿಯ ಜಿಬಿ ರೋಡ್‌ಗೆ ಸಂಬಂಧಿಸಿದ ಪ್ರಕರಣವೊಂದನ್ನು ಪ್ರಸ್ತಾಪಿಸಿದ್ದು, ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬೇಸ್‌ಮೆಂಟ್‌ನಲ್ಲಿ ಬಚ್ಚಿಟ್ಟಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ರಕ್ಷಿಸಿದಾಗ, ಆಕೆ ನೋಡಲು 30 ವರ್ಷದ ಮಹಿಳೆಯಂತೆ ಕಾಣುತ್ತಿದ್ದಳು.
ಆದರೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಯ ಅಸಲಿ ವಯಸ್ಸು ಕೇವಲ 14 ವರ್ಷ ಎಂದು ತಿಳಿದುಬಂದಿದೆ. 9 ವರ್ಷವಿರುವಾಗಲೇ ಬಾಲಕಿಯನ್ನು ಮಾರಾಟ ಮಾಡಲಾಗಿತ್ತು ಮತ್ತು ದೇಹವನ್ನು ಬೇಗನೆ “ದೊಡ್ಡದಾಗಿ” ಕಾಣುವಂತೆ ಮಾಡಲು ಪ್ರತಿದಿನ ಆಕ್ಸಿಟೋಸಿನ್ ಇಂಜೆಕ್ಷನ್ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಏನಿದು ಆಕ್ಸಿಟೋಸಿನ್?
ಗೈನಾಕಾಲಜಿಸ್ಟ್ ಕವಿತಾ ಅವರ ಪ್ರಕಾರ, ಆಕ್ಸಿಟೋಸಿನ್ ನಮ್ಮ ಮೆದುಳಿನ ಹೈಪೋಥಾಲಮಸ್‌ನಲ್ಲಿ ಉತ್ಪತ್ತಿಯಾಗಿ ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆಯಾಗುವ ಹಾರ್ಮೋನ್. ಇದನ್ನು ಸಾಮಾನ್ಯವಾಗಿ “ಲವ್ ಹಾರ್ಮೋನ್” ಎಂದು ಕರೆಯಲಾಗುತ್ತದೆ. ಇದು ಭಾವನಾತ್ಮಕ ಸಂಬಂಧ, ನಂಬಿಕೆ ಮತ್ತು ಮಾತೃತ್ವದ ಭಾವನೆಗಳಿಗೆ ಕಾರಣವಾಗುತ್ತದೆ. ತಾಯಿ ತನ್ನ ಮಗುವನ್ನು ಎತ್ತಿಕೊಂಡಾಗ ಅಥವಾ ಎದೆಹಾಲು ಉಣಿಸುವಾಗ ಈ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಆದರೆ ಇದೇ ಹಾರ್ಮೋನ್ ವೈದ್ಯಕೀಯ ರೂಪದಲ್ಲಿ ಇಂಜೆಕ್ಷನ್ ಆಗಿಯೂ ಲಭ್ಯವಿದೆ.
ಎಲ್ಲೆಲ್ಲಿ ಬಳಕೆಯಾಗುತ್ತೆ?
ವೈದ್ಯರ ಪ್ರಕಾರ, ಆಕ್ಸಿಟೋಸಿನ್ ಅನ್ನು ಮುಖ್ಯವಾಗಿ ಹೆರಿಗೆಯ ಸಮಯದಲ್ಲಿ ಬಳಸಲಾಗುತ್ತದೆ.
ಹೆರಿಗೆ ನೋವು ಹೆಚ್ಚಿಸಲು: ಗರ್ಭಿಣಿಯರಿಗೆ ಸಹಜವಾಗಿ ಹೆರಿಗೆ ನೋವು ಬರದಿದ್ದಾಗ ಇದನ್ನು ನೀಡಲಾಗುತ್ತದೆ.
ರಕ್ತಸ್ರಾವ ತಡೆಯಲು: ಹೆರಿಗೆಯ ನಂತರ ಅತಿಯಾದ ರಕ್ತಸ್ರಾವವಾಗುವುದನ್ನು (PPH) ತಡೆಯಲು ಗರ್ಭಾಶಯವು ಸಂಕುಚಿತಗೊಳ್ಳಲು ಇದು ಸಹಾಯ ಮಾಡುತ್ತದೆ.
ಹಾಲುಣಿಸಲು: ಇದು ಹಾಲಿನ ಹರಿವನ್ನು ಹೆಚ್ಚಿಸಲು ನೆರವಾಗುತ್ತದೆ.
ಆದರೆ ಇದರ ಅಲ್ಪ ಪ್ರಮಾಣದ ಏರುಪೇರು ಕೂಡ ಮಾರಣಾಂತಿಕವಾಗಬಹುದು. ಆದ್ದರಿಂದ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲೇ ಇದನ್ನು ನೀಡಬೇಕು.
ಲೈಂಗಿಕ ಪ್ರಚೋದನೆ ಮತ್ತು ದುರ್ಬಳಕೆ
ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಪ್ರಚೋದಿಸಲು ಮತ್ತು ಅವರನ್ನು ಶೀಘ್ರವಾಗಿ ಲೈಂಗಿಕವಾಗಿ ಪ್ರಬುದ್ಧರನ್ನಾಗಿ ಮಾಡಲು ಈ ಇಂಜೆಕ್ಷನ್ ಅನ್ನು ಗುಟ್ಟಾಗಿ ನೀಡುತ್ತಾರೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸಿ, ಬಾಲಕಿಯರ ದೇಹವನ್ನು ಬಲವಂತವಾಗಿ ಸಿದ್ಧಪಡಿಸುತ್ತದೆ.
ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ
ವೈಜ್ಞಾನಿಕವಾಗಿ ಆಕ್ಸಿಟೋಸಿನ್ ನೇರವಾಗಿ ಎತ್ತರ ಅಥವಾ ಮೂಳೆಗಳ ವಯಸ್ಸನ್ನು ಹೆಚ್ಚಿಸುವುದಿಲ್ಲ (ಅದಕ್ಕೆ ಗ್ರೋತ್ ಹಾರ್ಮೋನ್ ಕಾರಣ). ಆದರೆ, ನಿರಂತರವಾಗಿ ಇಂತಹ ಹೊರಗಿನ ಹಾರ್ಮೋನ್‌ಗಳನ್ನು ನೀಡಿದಾಗ ದೇಹದ ನೈಸರ್ಗಿಕ ಸಮತೋಲನ ಹದಗೆಡುತ್ತದೆ. ಇದರಿಂದ ದೇಹದಲ್ಲಿ ಅಸಹಜ ಊತ, ದೈಹಿಕ ಬದಲಾವಣೆ ಅಥವಾ ಮುಟ್ಟಿನ ಚಕ್ರದಲ್ಲಿ ಏರುಪೇರು ಕಂಡುಬರುತ್ತದೆ.
ಅಪ್ರಾಪ್ತೆಯರ ಮೇಲೆ ದುಷ್ಪರಿಣಾಮಗಳು
ಹಾರ್ಮೋನ್ ಅಸಮತೋಲನ ಮತ್ತು ಗರ್ಭಾಶಯಕ್ಕೆ ಕಾಯಂ ಹಾನಿ.
ಭವಿಷ್ಯದಲ್ಲಿ ಗರ್ಭಧರಿಸಲು ಸಮಸ್ಯೆ.
ಹೃದಯ ಮತ್ತು ಮೂತ್ರಪಿಂಡದ ಮೇಲೆ ಒತ್ತಡ.
ನರಗಳ ಊತ ಮತ್ತು ಗಂಭೀರ ಸೋಂಕುಗಳು.
ಮಾನಸಿಕ ಪರಿಣಾಮಗಳು
ದೈಹಿಕ ಹಾನಿಯ ಜೊತೆಗೆ, ಬಾಲಕಿಯರು ತೀವ್ರ ಮಾನಸಿಕ ಆಘಾತಕ್ಕೆ (PTSD) ಒಳಗಾಗುತ್ತಾರೆ. ಖಿನ್ನತೆ, ಆತ್ಮ*ಹತ್ಯೆಯ ಆಲೋಚನೆಗಳು ಮತ್ತು ಸಮಾಜದ ಮೇಲೆ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕಾನೂನು ಏನನ್ನುತ್ತದೆ?
ಭಾರತದಲ್ಲಿ ವೈದ್ಯರ ಚೀಟಿ ಇಲ್ಲದೆ ಆಕ್ಸಿಟೋಸಿನ್ ನೀಡುವುದು ಗಂಭೀರ ಅಪರಾಧ. ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಇದರ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳಿವೆ. ಲೈಂಗಿಕ ಶೋಷಣೆಗೆ ಬಳಸಿದರೆ ಪೋಕ್ಸೋ (POCSO) ಅಡಿಯಲ್ಲಿ ಕಠಿಣ ಶಿಕ್ಷೆಯಾಗುತ್ತದೆ.
.https://www.newsics.com/2026/02/19/women-shocked-by-taliban-law-that-allows-husbands-to-beat-their-wives-until-their-bones-are-broken/