Subscribe ನ್ಯೂಸಿಕ್ಸ್ ಕನ್ನಡ
newsics.com
ಮಹಾ ಶಿವರಾತ್ರಿ ಪೂಜೆ ವೇಳೆ ದೇಗುಲದಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ನಡೆದಿದೆ.
ದಸ್ತೂರಾಬಾದ್ ಮಂಡಲದ ಗೊಡಿಸೆರ್ಯಾಲ ಗ್ರಾಮದ ಶ್ರೀ ರಾಜರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶಿವ-ಪಾರ್ವತಿಯರ ಕಲ್ಯಾಣೋತ್ಸವವನ್ನು ಕಲ್ಯಾಣೋತ್ಸವ ನಡೆಯುತ್ತಿದ್ದ ಸಮಯದಲ್ಲಿ ಅಲ್ಲಿಗೆ ಬಂದ ನಾಗರಹಾವು ತನ್ನ ಹೆಡೆ ಬಿಚ್ಚಿ ದೀರ್ಘಕಾಲದವರೆಗೆ ಕಲ್ಯಾಣವನ್ನು ವೀಕ್ಷಿಸುತ್ತಾ ಕುಳಿತಿತ್ತು. ಸಾಕ್ಷಾತ್ ಶಿವನೇ ನಾಗೇಂದ್ರನ ರೂಪದಲ್ಲಿ ಶಿವ-ಪಾರ್ವತಿಯರ ಕಲ್ಯಾಣವನ್ನು ನೋಡಲು ಬಂದಿದ್ದಾನೆ ಎಂದು ಭಕ್ತರು ಭಕ್ತಿಯಿಂದ ಕೈಮುಗಿದು ನಮಸ್ಕರಿಸಿದರು.
ಬಹಳ ಹೊತ್ತು ಅಲ್ಲಿಯೇ ಇದ್ದ ಹಾವು, ನಂತರ ಪಕ್ಕದಲ್ಲಿದ್ದ ಗಿಡಗಳ ನಡುವೆ ಮರೆಯಾಯಿತು. ಭಕ್ತರು ಹಾವಿನ ಈ ಅಪರೂಪದ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
https://x.com/greatandhranews/status/2023281443221475833?ref_src=twsrc%5Etfw%7Ctwcamp%5Etweetembed%7Ctwterm%5E2023281443221475833%7Ctwgr%5Ecf45eb49d4c0d1b81885e22eb4f4e17bc984dd45%7Ctwcon%5Es1_c10&ref_url=https%3A%2F%2Fkannadadunia.com%2Fcobra-snake-seen-in-temple-during-maha-shivaratri-puja-video-goes-viral-watch-video%2F