https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ಇತ್ತೀಚಿಗೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಡಯಾಬಿಟಿಸ್ ಸಮಸ್ಯೆ ಕಂಡು ಬರುತ್ತಲೇ ಇದೆ. ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ. ಇದೇ ಡಯಾಬಿಟಿಸ್ ಬರಲು ಮುಖ್ಯ ಕಾರಣವಾಗುತ್ತದೆ. ಒಮ್ಮೆ ಡಯಾಬಿಟಿಸ್ ಬಂದ ಮೇಲೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.
ಬದಲಾಗಿ ನಿಯಂತ್ರಣದಲ್ಲಿಟ್ಟು ಆರೋಗ್ಯಪೂರ್ಣ ಜೀವನ ನಡೆಸಬಹುದು. ಡಯಾಬಿಟಿಸ್ ಕಂಡುಬಂದ ಸಂದರ್ಭದಲ್ಲಿ ನಾವು ಆರೋಗ್ಯಪೂರ್ಣ ಜೀವನ ನಡೆಸಬಹುದು.ನೀವು ನಿಮ್ಮ ಶುಗರ್ ಲೆವೆಲ್ ಪರಿಶೀಲಿಸುತ್ತೀರಿ ಅದು ಸರಿಯಾಗಿಯೇ ಇರುತ್ತದೆ, ಆದರೆ ಆಯಾಸ ಮಾತ್ರ ಕಡಿಮೆಯಾಗುವುದಿಲ್ಲ. ನೀವು ಅದನ್ನು ಚಿಕ್ಕ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತೀರಿ, ಆದ್ರೆ ಇದರಿಂದ ಮುಂದೆ ನೀವು ದೊಡ್ಡ ಬೆಲೆ ತೆರಬೇಕಾಗಿ ಬರಬಹುದು.
ಗಾಜಿಯಾಬಾದ್‌ನ ಜಿಲ್ಲಾ ಆಸ್ಪತ್ರೆಯ ಡಾ. ಸಂತ್ರಮ್ ವರ್ಮಾ ಹೇಳುವ ಪ್ರಕಾರ, ಅನೇಕರ ಶುಗರ್ ಲೆವೆಲ್ ವರದಿ ಸಾಮಾನ್ಯವಾಗಿರುತ್ತದೆ, ಆದರೆ ಅವರಿಗೆ ಇನ್ಸುಲಿನ್ ಪ್ರತಿರೋಧವಿರುತ್ತದೆ. ಇದರರ್ಥ ವರದಿಯಲ್ಲಿನ ಸಕ್ಕರೆ ಮಟ್ಟವು ಸರಿಯಾಗಿ ಕಾಣಿಸಬಹುದು, ಆದರೆ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ, ರಕ್ತದಲ್ಲಿನ ಸಕ್ಕರೆ ಸ್ವಲ್ಪ ಸಮಯದ ವರೆಗೆ ಸಾಮಾನ್ಯವಾಗಿ ಕಾಣಿಸಬಹುದು, ಆದರೆ ದೇಹದ ಜೀವಕೋಶಗಳು ಗ್ಲೂಕೋಸ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಗ್ಲೂಕೋಸ್‌ನ ಅಸಮರ್ಪಕ ಬಳಕೆಯಿಂದಾಗಿ, ದೇಹದಲ್ಲಿ ಮಧುಮೇಹದ ಇತರ ಕೆಲವು ಲಕ್ಷಣಗಳ ಜೊತೆಗೆ ಆಯಾಸವೂ ಕಂಡುಬರುತ್ತದೆ.
- ನಿರಂತರ ಆಯಾಸ
- ಆಹಾರ ಸೇವನೆ ಮಾಡಿದ ನಂತರ ತುಂಬಾ ನಿದ್ದೆ ಬರುತ್ತಿರುವಂತೆ ಅನಿಸುವುದು
- ಹೊಟ್ಟೆಯ ಸುತ್ತ ಕೊಬ್ಬಿನ ಅಂಶ ಹೆಚ್ಚಾಗುವುದು
- ಪದೇ ಪದೇ ಸಿಹಿತಿಂಡಿಗಳನ್ನು ತಿನ್ನುವ ಹಂಬಲ
- ಸ್ವಲ್ಪ ಮಸುಕಾದ ದೃಷ್ಟಿ
- ಚರ್ಮದ ಮೇಲೆ, ವಿಶೇಷವಾಗಿ ಕುತ್ತಿಗೆ ಮತ್ತು ಕೆನ್ನೆಯ ಭಾಗದಲ್ಲಿ ಕಪ್ಪು ಕಲೆಗಳು
ಡಾ. ಸಂತ್ರಮ್ ಹೇಳುವ ಪ್ರಕಾರ, ಅನೇಕರು ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಮಟ್ಟವನ್ನು ಮಾತ್ರ ಪರಿಶೀಲಿಸುತ್ತಾರೆ ಆದರೆ ಅವರ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳುವುದಿಲ್ಲ. ಆದರೆ ಈ ಪರೀಕ್ಷೆಯು ಸಹ ಮುಖ್ಯವಾಗಿದೆ. ಈ ರೋಗಲಕ್ಷಣಗಳೊಂದಿಗೆ HbA1c ಮಟ್ಟವು 6.6 ಕ್ಕಿಂತ ಹೆಚ್ಚಿದ್ದರೆ, ನೀವು ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಇನ್ಸುಲಿನ್ ಪ್ರತಿರೋಧವನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದಲ್ಲಿ ನಿಮ್ಮ ಸಕ್ಕರೆ ಮಟ್ಟ ಈಗ ಸರಿಯಾಗಿದ್ದರೂ ಸಹ, ಅದು ನಂತರ ಮಧುಮೇಹಕ್ಕೆ ಕಾರಣವಾಗಬಹುದು.
https://www.newsics.com/2026/02/16/those-who-do-reels-in-public-places-should-read-this-news/