https://youtube.com/shorts/11hvM0bsJ2E?si=Q5TtqzkdIZKrnxiz
Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವಮೊಗ್ಗದ ಹೊಸನಗರ ತಾಲೂಕಿನ ವಿದ್ಯಾರ್ಥಿ ತನ್ನ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೇವಲ ಅವರ ಕಾಲಿನ ಬೆರಳು ಹಾಗೂ ಪಾದದ ವಿನ್ಯಾಸವನ್ನು ನೋಡಿ ನಿಖರವಾಗಿ ಗುರುತಿಸುತ್ತಾನೆ.
ಹೊಸನಗರದ ಗೇರುಪುರದ ಇಂದಿರಾ ವಸತಿ ಶಾಲೆಯ ಭುವನ್ ಎಸ್ ಎಂಬ ವಿದ್ಯಾರ್ಥಿ ತನ್ನ ವಿಶೇಷ ಪ್ರತಿಭೆಯ ಮೂಲಕ ಗಮನ ಸೆಳೆಯುತ್ತಿದ್ದಾನೆ. 10ನೇ ತರಗತಿ ಓದುತ್ತಿರುವ ಈತ, ಓದಿನಲ್ಲೂ ಚುರುಕಾಗಿದ್ದು ಕೇವಲ ಕಾಲು ಬೆರಳುಗಳನ್ನು ನೋಡಿಯೇ ಸುಮಾರು ನೂರಕ್ಕೂ ಸ್ನೇಹಿತರ ಹಾಗೂ ಶಿಕ್ಷಕರ ಹೆಸರು ಹೇಳುತ್ತಾನೆ. ಮಂಗರ್ಷಿಕೊಪ್ಪದ ನಿವಾಸಿಯಾದ ಈತ 6ನೇ ತರಗತಿಯಿಂದ ಇಲ್ಲಿ ಓದುತ್ತಿದ್ದಾನೆ..
ಶಾಲೆಯ ಆವರಣದಲ್ಲಿ ಭುವನ್ ಒಂದು ದಿಕ್ಕಿನಲ್ಲಿ ನಿಂತಿರುತ್ತಾನೆ. ಆತನ ಹಿಂದೆ ಸಾಲಾಗಿ ಬರುವ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ತಮ್ಮ ಪಾದಗಳನ್ನು ಭುವನ್ ಕಾಲಿನ ಮಧ್ಯೆ ಚಾಚುತ್ತಾರೆ. ಕೇವಲ ಒಂದು ಕ್ಷಣ ಆ ಕಾಲಿನ ಬೆರಳುಗಳು ಹಾಗೂ ಪಾದದ ವಿನ್ಯಾಸವನ್ನು ಗಮನಿಸುವ ಭುವನ್, ತಕ್ಷಣವೇ ಆ ವ್ಯಕ್ತಿಯ ಹೆಸರನ್ನು ಹೇಳುತ್ತಾನೆ.
ವಿದ್ಯಾರ್ಥಿಗಳು ತಮಾಷೆಗಾಗಿ ಅಥವಾ ಪರೀಕ್ಷಿಸಲು ತಮ್ಮ ಐಡಿ ಕಾರ್ಡ್ ಮುಚ್ಚಿಟ್ಟು ಪಾದ ತೋರಿಸಿದರೂ, ಭುವನ್ ಹೇಳುವ ಹೆಸರು ಶೇ. 100 ರಷ್ಟು ನಿಖರವಾಗಿರುತ್ತದೆ.
ಇದು ಹೇಗೆ ಸಾಧ್ಯ? ಎಂದು ಕೇಳಿದರೆ, ನಾನು ನಮ್ಮ ಶಾಲೆಯ ಶಿಕ್ಷಕರ ಜತೆ ಮಾತನಾಡುವಾಗ ತಲೆ ತಗ್ಗಿಸಿಕೊಂಡು ಇರುತ್ತೇನೆ. ಈ ವೇಳೆ ನಾನು ಹೆಚ್ಚಾಗಿ ಅವರ ಕಾಲುಗಳನ್ನೇ ನೋಡುತ್ತೇನೆ. ಹೀಗೆ ಅಭ್ಯಾಸವಾಯಿತು. ಇದಕ್ಕೆ ಸ್ಫೂರ್ತಿ ನಮ್ಮ ಶಿಕ್ಷಕರು. ನಾನು ಯಾವುದಾದರೂ ವಸ್ತುವನ್ನು ಕಂಡರೆ ಅದನ್ನು ನೆನಪಿಟ್ಟುಕೊಳ್ಳುತ್ತೇನೆ. ಒಬ್ಬ ಮನುಷ್ಯನ ರೀತಿ ಇನ್ನೊಬ್ಬ ಇರುವುದಿಲ್ಲ. ಅದೇ ರೀತಿ ಒಬ್ಬನ ಕಾಲಿನಂತೆ ಇನ್ನೊಬ್ಬನ ಕಾಲು ಇರುವುದಿಲ್ಲ. ಎಲ್ಲರ ಕಾಲುಗಳೂ ವಿಶೇಷ. ಅವರ ಬೆರಳುಗಳಲ್ಲಿನ ವಿಶೇಷತೆಯನ್ನು ಕಂಡುಕೊಂಡು ಗುರುತಿಟ್ಟುಕೊಳ್ಳುತ್ತೇನೆ. ನನ್ನಲ್ಲಿರುವ ಈ ಗುಣವನ್ನು ಶಿಕ್ಷಕರು ಹಾಗೂ ಸ್ನೇಹಿತರು ಕಂಡುಹಿಡಿದಿದ್ದು ಖುಷಿಯಾಗಿದೆ. ನಾನು ಮುಂದೆ ಇಂಜಿನಿಯರ್ ಆಗಬೇಕೆಂದುಕೊಂಡಿದ್ದೇನೆ” ಎಂದು ಭುವನ್.ಎಸ್ ಹೇಳಿದರು.
https://www.newsics.com/2026/02/14/bomb-threat-found-on-indigo-flight-in-kolkata/