Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಜೋ ಸೈಮನ್ ಪ್ರಶಸ್ತಿಗೆ ಅರ್ಜಿ ಹಾಕುವುದನ್ನೇ ಬಿಟ್ಟಿದ್ದರಂತೆ
ಕರ್ನಾಟಕಪ್ರಮುಖಮನರಂಜನೆ

ಜೋ ಸೈಮನ್ ಪ್ರಶಸ್ತಿಗೆ ಅರ್ಜಿ ಹಾಕುವುದನ್ನೇ ಬಿಟ್ಟಿದ್ದರಂತೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಕನ್ನಡ ಚಿತ್ರರಂಗ ಕಂಡ ಬಹುಮುಖ ಕಲಾವಿದರ ಜೋ ಸೈಮನ್ ವಿಶೇಷವಾಗಿಯೇ ಇದ್ದರು. ಕೇವಲ ಡೈರೆಕ್ಟರ್ ಆಗಿಯೇ ಇರಲಿಲ್ಲ. ಹಾಡುಗಳನ್ನ ಬರೆಯುತ್ತಿದ್ದರು. ಚಿತ್ರಕಥೆ ಬರೆದುಕೋಡೋರು. ನಟನೆ ಕೂಡ ಮಾಡ್ತಿದ್ದರು. ನಿರ್ದೇಶನ ಅಂತ ಬಂದ್ರೆ ಇವರು ಸಾಹಸ ಪ್ರಧಾನ ಚಿತ್ರಗಳನ್ನೆ  ಹೆಚ್ಚಾಗಿ ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ ಆಗಿದ್ದರೂ ಸಹ ಯಾವುದೇ ಸದ್ದಿಲ್ಲದೆ, ಸುದ್ದಿಗೆ ಹಪ-ಹಪಿಸದೆ ಸರಳವಾಗಿ ಬದುಕಿದ್ದರು, ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತಿದ್ದ ಅವರಿಗೆ ಯಾವುದೇ ಕೊರಗು ಇರಲಿಲ್ಲ, ಆದರೆ ಒಂದು ಸಣ್ಣ ಬೇಸರವಂತೂ ಇತ್ತು. ಆ ಬಗ್ಗೆ ಸಾಯುವ ಕೇವಲ ತಿಂಗಳ ಹಿಂದಷ್ಟೆ ಹೇಳಿಕೊಂಡಿದ್ದರು.

ವಾರಗಳ ಹಿಂದಷ್ಟೆ ಯೂಟ್ಯೂಬ್ ಚಾನೆಲ್​ ‘ಕಲಾಮಾಧ್ಯಮ’ಕ್ಕೆ ಸಂದರ್ಶನ ನೀಡಿದ್ದ ಜೋ ಸೈಮನ್, ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದರು. ಅದರಲ್ಲೂ ತಮ್ಮ ಆರೋಗ್ಯ, ತಮ್ಮ ಮನಸ್ಥಿತಿ, ತಮ್ಮ ದಿನಚರಿ ಇನ್ನಿತರೆ, ತಮ್ಮ ಸರಳತೆಗೆ ಕಾರಣ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದೇ ಸಂದರ್ಶನದಲ್ಲಿ ತಮಗಿರುವ ಸಣ್ಣ ಬೇಸರವನ್ನೂ ಸಹ ಹೊರಗೆ ಹಾಕಿದ್ದಾರೆ.

ತಮ್ಮ ಹಿರಿತನವನ್ನು, ತಾವು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡೆಗೆಯನ್ನು ಸರ್ಕಾರ ಗುರುತಿಸಲಿಲ್ಲ ಎಂಬ ಬೇಸರ ಜೋ ಸೈಮನ್ ಅವರಿಗೆ ಇದ್ದಂತಿತ್ತು.

ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಸೈಮನ್, ‘ಗೆಳೆಯರು ಪ್ರತಿ ಬಾರಿ ಹೇಳುತ್ತಾರೆ ರಾಜ್ಯೋತ್ಸವ ಪ್ರಶಸ್ತಿಗೆ ಪ್ರಯತ್ನಿಸಿ ಎಂದು. ನಮ್ಮ ಸಂಘದ ಕಡೆಯಿಂದ ಪ್ರತಿ ಬಾರಿಯೂ ನನ್ನ ಹೆಸರು ಕಳಿಸುತ್ತಾರೆ. ಸಂಸದ ತೇಜಸ್ವಿ ಸೂರ್ಯ ಸಹ ಒಮ್ಮೆ ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಿಸು ಮಾಡಿದ್ದರು. ಆದರೆ ಪ್ರತಿ ಬಾರಿ ಬೇರೆಯವರಿಗೆ ಪ್ರಶಸ್ತಿ ಬಂದಿರುತ್ತದೆ.

ಕಣಗಾಲ್ ಪ್ರಶಸ್ತಿ ಪಡೆಯುವ ಅರ್ಹತೆಯೂ ನನಗೆ ಇದೆಯೆಂಬ ಭಾವನೆ ಇದೆ. ಅದಕ್ಕೂ ಸಹ ಅರ್ಜಿ ಹಾಕಿದ್ದೆ ಆದರೆ ಅದಕ್ಕೂ ಸಹ ನನ್ನನ್ನು ಪರಿಗಣಿಸಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರು ಪ್ರಶಸ್ತಿಗೆ ಅರ್ಜಿ ಹಾಕುವುದನ್ನೇ ಬಿಟ್ಟಿದ್ದರಂತೆ. ‘ನೀವು ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಡಿ, ಸಿಗಲಿಲ್ಲ ಎಂದು ಬೇಸರ ಆಗುವುದು ಸರಿ ಎನಿಸುವುದಿಲ್ಲ. ನಿಮ್ಮನ್ನು ಜನ ಪ್ರೀತಿಸಿದ್ದಾರೆ. ಎಲ್ಲೇ ಹೋದರು ಗುರುತಿಸುತ್ತಾರೆ, ನಿಮ್ಮೊಂದಿಗೆ ಫೊಟೊ ತೆಗೆದುಕೊಳ್ಳುತ್ತಾರೆ ನನಗೆ ಅಷ್ಟು ಸಾಕು, ಪ್ರಶಸ್ತಿಗಳು ಬೇಡ ಎಂದರಂತೆ. ಪತ್ನಿಯ ಮಾತಿನಂತೆ ಪ್ರಶಸ್ತಿಗಳಿಗೆ ಅರ್ಜಿ ಹಾಕುವುದನ್ನೇ ನಿಲ್ಲಿಸಿದ್ದರಂತೆ ಜೋ ಸೈಮನ್.

ಜೋಸೈಮನ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದು, ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ. ಜೋಸೈಮನ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾಳೆ (ಫೆಬ್ರವರಿ 14) ರವೀಂದ್ರ ಕಲಾಕ್ಷೇತ್ರದಲ್ಲಿ ಜೋಸೈಮನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ

ಇಡಲಾಗುತ್ತಿದ್ದು, ಬೆಳಗ್ಗೆ 10 ಗಂಟೆಯಿಂದ ಒಂದು ಗಂಟೆ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ನಂತರ ನಾಳೆಯೇ ಕ್ರಿಶ್ಚಿಯನ್ ವಿಧಿ ವಿಧಾನಗಳ ಅನುಸಾರ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

https://www.newsics.com/2026/02/14/jhanvis-father-who-died-after-being-hit-by-a-police-vehicle-in-america-dies/

TAGGED:It seems like Joe Simon just gave up on applying for the award.
Share This Article
Facebook Twitter Copy Link Print
Previous Article ಅಮೆರಿಕದಲ್ಲಿ ‍ಪೊಲೀಸ್ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಜಾಹ್ನವಿ ತಂದೆ ಸಾವು
Next Article 80 ಪ್ರಯಾಣಿಕರನ್ನು ಹೊತ್ತ ಪ್ಯಾಸೆಂಜರ್ ವಿಮಾನದ ಎಂಜಿನ್ ಸ್ಫೋಟ

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?