Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಜ್ಯೋತಿಷಿ ಮಾತು ಕೇಳಿ ತಾಯಿಯನ್ನೇ ಕೊಲೆಗೈದ ಮಗಳು
ಪ್ರಮುಖಕರ್ನಾಟಕ

ಜ್ಯೋತಿಷಿ ಮಾತು ಕೇಳಿ ತಾಯಿಯನ್ನೇ ಕೊಲೆಗೈದ ಮಗಳು

Share
1 Min Read
SHARE

https://youtube.com/shorts/Z1cy8EQaCVE?si=MkoxaOvrskVdCGz3

Subscribe ನ್ಯೂಸಿಕ್ಸ್ ಕನ್ನಡ

newsics.com

ತುಮಕೂರು: ಹೆತ್ತ ತಾಯಿಯನ್ನೇ ಕೊಲೆಗೈದು ಹೃದಯಾಘಾತದಿಂದ ಸಾವು ಎಂದು ಕಥೆ ಕಟ್ಟಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದ ಮಗಳು ಕೊನೆಗೂ ಸಿಕ್ಕಿ ಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಬಂಡೇಪಾಳ್ಯ ಬಳಿಯ ಶ್ರೀನಗರ ನಿವಾಸಿ ಪುಷ್ಪಲತಾ ಕೊಲೆಯಾದ ಮಹಿಳೆ. ಸ್ವಂತ ಮನೆ ಕಟ್ಟಿಕೊಂಡು ಮಗಳು ಸುಚಿತ್ರಾ ಹಾಗೂ ಆಳಿಯನ ಜೊತೆ ವಾಸವಿದ್ದರು. ಕಳೆದ ಕೆಲ ದಿನಗಳಿಂದ ಮಂಡಿನೋವು ಎಂದು ಹಾಸಿಗೆ ಹಿಡಿದಿದ್ದರು.

ಫೆಬ್ರವರಿ 11 ರಂದು ರಾತ್ರಿ ನಿಗೂಢವಾಗಿ ಪುಷ್ಪಲತಾ ಸಾವನಪ್ಪಿದ್ದರು. ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು. ಈ ವೇಳೆ ಸ್ಥಳೀಯರಿಗೆ ಮಗಳ ವರ್ತನೆ ಅನುಮಾನ ತಂದಿತ್ತು. ಹಾಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಪುಷ್ಪಲತಾ ಮನೆಯಲ್ಲಿಯೇ ವಾಸವಿದ್ದರು. ಸುರೇಶ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದ. ಒಂದು ವರ್ಷದ ಹಿಂದೆ ಸುಚಿತ್ರ ತಂದೆ ಬಾಬು ನಾಯಕ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ತಂದೆಯನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸುಚಿತ್ರಾ ಜ್ಯೋತಿಷಿಯೊಬ್ಬರ ಭೇಟಿ ಮಾಡಿದ್ದಳು. ಈ ವೇಳೆ ಬಾಬು ಸಾವಿಗೆ ಆತನ ಪತ್ನಿಯೇ ಕಾರಣ. ಪುಷ್ಪಲತಾ ಮಾಟಮಂತ್ರ ಮಾಡಿಸಿದ್ದರು. ನಿನಗೂ ಅವರಿಂದ ಕಂಠಕ ಇದೆ ಎಂದು ಜ್ಯೋತಿಷಿ ಹೇಳಿದ್ದರಂತೆ.

ತಾಅಯಿಯೇ ತನ್ನ ತಂದೆ ಕೊಂದಿದ್ದಾಳೆ. ತನಗೂ ಆಕೆಯಿಂದ ಕಂಠಕವಿದೆ ಎಂಬುದನ್ನೇ ತಲೆಯಲ್ಲಿಟ್ಟುಕೊಂಡಿದ್ದ ಸುಚಿತ್ರಾ, ಫೆಬ್ರವರಿ 11ರ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಹಲ್ಲೆಯಿಂದ ಮುಖದಲ್ಲಿ ರಕ್ತದಕಲೆಗಳು ಕಂಡುಬಂದಿದ್ದವು. ವಿಷಯ ಗೊತ್ತಿದ್ದರೂ ಸುಚಿತ್ರಾ ಗಂಡ ಮೌನವಾಗಿದ್ದ.

ಇದೀಗ ಪೊಲೀಸರ ತನಿಖೆ ವೇಳೆ ಸುಚಿತ್ರಾ ಪತಿ ಸುರೇಶ್ ಕೂಡ ಶಾಮೀಲಾಗಿರುವುದು ಬಯಲಾಗಿದೆ. ಸದ್ಯ ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಅನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ.

https://www.newsics.com/2026/02/13/sudharani-is-the-ambassador-for-nandini-products-kmf-objects/

TAGGED:Daughter kills mother after listening to astrologer
Share This Article
Facebook Twitter Copy Link Print
Previous Article ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ರಾಯಭಾರಿ: ಕೆಎಂಎಫ್ ಆಕ್ಷೇಪ
Next Article ಹೆತ್ತ ತಂದೆ-ತಾಯಿಯನ್ನೇ ಕೊಂದಿದ್ಯಾಕೆ ಪುತ್ರ? ಅಸಲಿ ಕಾರಣವೇನು?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?