Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 24 ಮಂದಿ ರಕ್ಷಣೆ!
ಕರ್ನಾಟಕಪ್ರಮುಖ

ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 24 ಮಂದಿ ರಕ್ಷಣೆ!

Share
1 Min Read
SHARE

https://youtube.com/shorts/Z1cy8EQaCVE?si=-_cWMt02yPVoM0xd

Subscribe ನ್ಯೂಸಿಕ್ಸ್ ಕನ್ನಡ

newsics.com

ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತದಂತೆ ದುಡಿಸಿಕೊಳ್ಳಲಾಗುತ್ತಿದ್ದ ಒಡಿಶಾ ಮೂಲದ ಕಾರ್ಮಿಕರನ್ನು ಕಂದಾಯ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಐವರು ಬಾಲಕಾರ್ಮಿಕರು ಸೇರಿದಂತೆ ಒಟ್ಟು 24 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇಟ್ಟಿಗೆ ಭಟ್ಟಿಯಲ್ಲಿ ಅಮಾನವೀಯ ದುಡಿಮೆ
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಈರಪ್ಪ ಕುಂಬಾರ ಎಂಬ ವ್ಯಕ್ತಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದನು. ಒಡಿಶಾದಿಂದ ತರಿಸಲಾದ ಕಾರ್ಮಿಕರಿಗೆ ಆರಂಭದಲ್ಲಿ ಒಬ್ಬರಿಗೆ 25 ಸಾವಿರ, 50 ಸಾವಿರ ಹಾಗೂ 20 ಸಾವಿರ ರೂ.ಗಳಂತೆ ಒಟ್ಟು ಸುಮಾರು 10 ಲಕ್ಷ ರೂ. ಮುಂಗಡ ನೀಡಲಾಗಿತ್ತು. ನಂತರ ವಾರಕ್ಕೆ ಕೇವಲ 400 ರೂ. ಕೂಲಿ ಮಾತ್ರ ನೀಡಲಾಗುತ್ತಿತ್ತು.
ಮೂಲಭೂತ ಸೌಲಭ್ಯಗಳಿಲ್ಲ, ಅನಾರೋಗ್ಯದಲ್ಲೂ ಕೆಲಸ
ಕಾರ್ಮಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ, ಅನಾರೋಗ್ಯಕ್ಕೆ ಒಳಗಾದರೂ ಸಹ ಕೆಲಸಕ್ಕೆ ಒತ್ತಾಯಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಅಮಾನವೀಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದ ತಕ್ಷಣ ಇಳಕಲ್ ತಹಸೀಲ್ದಾರರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದರು.
24 ಕಾರ್ಮಿಕರ ರಕ್ಷಣೆ, ಕಾನೂನು ಕ್ರಮ
ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಐವರು ಬಾಲಕಾರ್ಮಿಕರು ಸೇರಿ ಒಟ್ಟು 24 ಜನರನ್ನು ರಕ್ಷಿಸಿ, ಅಗತ್ಯ ಕ್ರಮಗಳ ಬಳಿಕ ಅವರನ್ನು ಒಡಿಶಾಗೆ ಸುರಕ್ಷಿತವಾಗಿ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗೆ ಭಟ್ಟಿಯ ಮಾಲೀಕ ಈರಪ್ಪ ಕುಂಬಾರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಜೀತ ಪದ್ಧತಿ ನಿಷೇಧ ಕಾಯ್ದೆ ಅಡಿಯಲ್ಲಿ ಇಳಕಲ್ ಗ್ರಾಮೀಣ ಪೊಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭವಿಷ್ಯದಲ್ಲಿ ಇಂತಹ ಕಾನೂನು ಉಲ್ಲಂಘನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಾರ್ಮಿಕರ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಗೆ ಇಲಾಖೆ ಸದಾ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?

TAGGED:A total of 24 peopleincluding 5 child laborerswho were being held captive in a brick factory were rescued!
Share This Article
Facebook Twitter Copy Link Print
Previous Article ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?
Next Article ತೆಕ್ಕಲಕೋಟೆ ಉತ್ಖನನದ ವೇಳೆ ಶಿಲಾಯುಗ ಕಾಲದ 3ನೇ ಅಸ್ಥಿಪಂಜರ ಪತ್ತೆ

Popular Posts

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Modi and DK ಮುಖ್ಯಮಂತ್ರಿಯಾದ ಬಳಿಕ ಮೊದಲ‌ ಬಾರಿ ಮೋದಿ ಭೇಟಿಯಾದ ಡಿಕೆ: ಪ್ರಧಾನಿ ಜತೆ ಚರ್ಚಿಸಿದ್ದೇನು?

1 Min Read

Burude case ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್! ಕೇರಳದಿಂದ 200 ಕೋಟಿ ಫಂಡಿಂಗ್, ಚಿನ್ನಯ್ಯ ಹೇಳಿದ್ದೇನು?

4 Min Read

ಸಾಗರದಲ್ಲಿ ಪೆಟ್ರೋಲ್ ಕದಿಯೋ ಗ್ಯಾಂಗ್: ಬಸ್, ರೈಲ್ವೆ ನಿಲ್ದಾಣದ ಬೈಕ್ ಗಳೇ ಕಳ್ಳರ ಟಾರ್ಗೆಟ್!

1 Min Read

You Might Also Like

ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ದೇಶಪ್ರಮುಖ

ಸೊಸೆ ಮೇಲೆ ಮಾವನಿಂದಲೇ ಪದೇ ಪದೇ ಅತ್ಯಾಚಾರ: ಫೋನ್ ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ

2 Min Read
ಕರ್ನಾಟಕಪ್ರಮುಖ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ : ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ

1 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?