https://youtube.com/shorts/PRG7YTSZHd8?si=BMsmmRTf3CzVSrft
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಡಿಡಿ ವಾಹಿನಿಯ ಖ್ಯಾತ ನಿರೂಪಕಿ ಸರಳಾ ಮಹೇಶ್ವರಿ (71) ನಿಧನರಾಗಿದ್ದಾರೆ.
1980ರ ಕಾಲಘಟ್ಟದಲ್ಲಿ ಸರಳಾ ಮಹೇಶ್ವರಿ ಖ್ಯಾತ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು. ಹೆಸರಿಗೆ ತಕ್ಕಂತೆ ಸರಳವಾಗಿಯೇ ಕಾಣಿಸಿಕೊಳ್ಳುತ್ತಿದ್ದ ಸರಳಾ ಮಹೇಶ್ವರಿ ಅವರು, ತಮ್ಮ ವಾರ್ತಾ ವಾಚನದಿಂದಲೇ ಪ್ರಸಿದ್ಧರಾಗಿದ್ದರು.
1991ರಲ್ಲಿ ರಾಜೀವ್ ಗಾಂಧಿಯವರು ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗಿದ್ದಾಗ, ಇದೇ ಸರಳಾ ಅವರು ಇಡೀ ದೇಶಕ್ಕೆ ಈ ನೋವಿನ ಸುದ್ದಿ ಬಿತ್ತರಿಸಿದ್ದರು. ಅಲ್ಲದೇ ಸ್ಥಳಕ್ಕೇ ಧಾವಿಸಿ, ರಾಜೀವ್ ಹತ್ಯೆ ವರದಿಯನ್ನು ಜನರ ಮುಂದಿಟ್ಟಿದ್ದರು.
1997ರಲ್ಲಿ ನೊಬೇಲ್ ಪ್ರಶಸ್ತಿ ಪುರಸ್ಕೃತೆ ಮದರ್ ಥೆರೆಸಾ ಕೊನೆಯುಸಿರೆಳೆದಾಗಲೂ ಪಶ್ಚಿಮ ಬಂಗಾಳಕ್ಕೆ ತೆರಳಿ, ಅಂತ್ಯ ಸಂಸ್ಕಾರವನ್ನು ವರದಿ ಮಾಡಿದ್ದರು. ತಮ್ಮ ಯಶಸ್ಸಿನ ಹಿಂದೆ ತಂದೆಯವರ ಪ್ರೋತ್ಸಾಹವಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಸರಳಾ ಮಹೇಶ್ವರಿ ಅವರಿಗೆ ಡಿಡಿ ನ್ಯೂಸ್ ಸಂತಾಪ ಸೂಚಿಸಿ, ಎಕ್ಸ್ ಖಾತೆಯಲ್ಲಿ ಸರಳಾ ಅವರ ಫೋಟೋ ಶೇರ್ ಮಾಡಿಕೊಂಡಿದೆ.
ಸರಳಾ ಮಹೇಶ್ವರಿ ಅವರ ವಾರ್ತೆ ನಿರೂಪಣೆಗೂ ಇಂದಿನ ಆ್ಯಂಕರ್ ವಾಚನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸರಳ ಮಹೇಶ್ವರಿ ಅವರು ರಾಜ್ಯಸಭೆ ಮಾಜಿ ಸದಸ್ಯರಾಗಿದ್ದರು.
ಡಿಡಿ ನ್ಯೂಸ್ ನಿರೂಪಕಿ
ಆಗಿನ್ನೂ ಟಿವಿ ಎಲ್ಲರ ಮನೆಗೂ ಕಾಲಿಡುತ್ತಿದ್ದ ಸಮಯ. ಎಲ್ಲರ ಮನೆಯಲ್ಲಿಯೂ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿ ಸಾಮಾನ್ಯವಾಗಿ ಇರುತ್ತಿತ್ತು. ಎಲ್ಲಿಯೋ ಊರಲ್ಲಿ ಒಂದಿಬ್ಬರ ಮನೆಯಲ್ಲಿ ಟಿವಿ ಇರುತ್ತಿತ್ತು. ಅದರಲ್ಲಿಯೂ ಕಲರ್ ಟಿವಿ ಅಂದ್ರೆ ಸಾಮಾನ್ಯವಾಗಿ ಎಟುಕದ ನಕ್ಷತ್ರ. ಅಂಥ ಟೈಮಲ್ಲಿ ವಾರದಲ್ಲೊಮ್ಮೆ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರಾವಾಹಿಗಳ ಜತೆ ದಿನಕ್ಕೊಂದೆರಡು ಸಲ ಪ್ರಸಾರವಾಗುವ ಬುಲೆಟಿನ್ಸ್‌ಗೆ ಜನರು ಕಾತುರದಿಂದ ಕಾಯುತ್ತಿದ್ದರು.
ಜರ್ನಲಿಸಂ ಅಂದ್ರೆ ಹೆಣ್ಣು ಮಕ್ಕಳು ದೂರವೇ ಉಳಿಯುತ್ತಿದ್ದ ಕಾಲದಲ್ಲಿ, ಎಲ್ಲರಿಗೂ ನ್ಯೂಸ್ ಆ್ಯಂಕರ್ ಆಗಬೇಕೆಂಬ ಆಸೆ ಹುಟ್ಟಿಸಿದ ಕೆಲವೇ ಕೆಲವು ನ್ಯೂಸ್ ರೀಡರ್‌ಗಳಲ್ಲಿ ಸರಳ ಪ್ರಮುಖರು.
ದೂರದರ್ಶನದಲ್ಲಿ ಸ್ಕ್ರೀನ್ ರೈಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಸರಳಾ ಮಹೇಶ್ವರಿಯವರು, ಅಲ್ಲಿಯೇ ನ್ಯೂಸ್ ರೀಡರ್ ಆಗಿ ಮುಂದುವರಿದರು. ನಂತರ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದ ಸರಳಾ ಅವರು, ಸಂಜೆ ವೇಳೆ ದೂರದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 80ರ ದಶಕದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಯಿಂದ ಕಲರ್ ಟಿವಿಗೆ ಜನರು ಶಿಫ್ಟ್ ಆಗುತ್ತಿದ್ದ ವೇಳೆಯಲ್ಲಿ ಭಾರತದಲ್ಲಿ ನಡೆದ ಏಷ್ಯನ್ ಗೇಮ್ಸ್ ಅನ್ನು ರಸವತ್ತಾಗಿ ಆ್ಯಂಕರಿಂಗ್ ಮಾಡಿದ್ದರು.
https://x.com/i/status/2021864049206800805
Vijay Mallya ತಕ್ಷಣ ಭಾರತಕ್ಕೆ ಮರಳಿ: ವಿಜಯ್ ಮಲ್ಯಗೆ ಕೊನೆ ಅವಕಾಶ ನೀಡಿದ ಕೋರ್ಟ್