Subscribe ನ್ಯೂಸಿಕ್ಸ್ ಕನ್ನಡ
newsics.com
ಸೋಶಿಯಲ್ ಮಿಡೀಯಾದಲ್ಲಿ ಇತ್ತೀಚಿಗೆ ಲೈಕ್, ಕಾಮೆಂಟ್, ಫಾಲೋಗೋಸ್ಕರ ಹಲವಾರು, ಅನೇಕ ರೀತಿಯ ಸರ್ಕಸ್, ರಿಸ್ಕ್ ಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬಳು ತಾಯಿ ಮಕ್ಕಳ ಪ್ರಾಣದ ಜತೆ ಆಟ ಆಡಿದ್ದಾಳೆ.
ಮಹಿಳೆಯ ಹುಚ್ಚುತನದ ರೀಲ್ಸ್‌ನ್ನು ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮ ಹುಚ್ಚುತನದ ಪರಮಾವಧಿ! ಬಾವಿಯ ಅಂಚಿನಲ್ಲಿ ನಿಂತಿರುವ ಮಕ್ಕಳ ವೀಡಿಯೊಗಳನ್ನು ಮಾಡುವುದು ಸಾಹಸವಲ್ಲ. ಅದು ಮೂರ್ಖತನ. ಅದು ಆತ್ಮ*ಹತ್ಯಾ ಸನ್ನಿವೇಶ. ಸಾವಿನ ಅಂಚಿನಲ್ಲಿ ನಿಂತಿರುವ ಮಕ್ಕಳನ್ನು ರಕ್ಷಿಸಬೇಕಾದ ವಯಸ್ಕರನ್ನು ನೋಡಿದಾಗ, ಸಮಾಜ ಎಲ್ಲಿಗೆ ಹೋಗುತ್ತಿದೆ ಎಂದು ನಮಗೆ ಅರ್ಥವಾಗುವುದಿಲ್ಲ. ಸಾಮಾಜಿಕ ಮಾಧ್ಯಮ ಹುಚ್ಚುತನವನ್ನು ನಿಮ್ಮ ಜೀವನದ ಮೇಲೆ ತೆಗೆದುಕೊಳ್ಳಬೇಡಿ. ಇಂತಹ ಹುಚ್ಚು ಕೃತ್ಯಗಳನ್ನು ಪ್ರೋತ್ಸಾಹಿಸಬೇಡಿ ಎಂದು ಸಜ್ಜನರ್ ಬರೆದುಕೊಂಡಿದ್ದಾರೆ.
ಮಹಿಳೆಯೊಬ್ಬಳು ಬಾವಿ ಗೋಡೆಯ ಮೇಲೆ ನಿಂತಿರೋದನ್ನು ನೋಡಬಹುದು. ಆಕೆಯ ಪಕ್ಕ ಸುಮಾರು ಮೂರರಿಂದ ನಾಲ್ಕು ವರ್ಷದ ಮಕ್ಕಳಿವೆ. ಎರಡೂ ಕೈಗಳಲ್ಲಿ ಮಕ್ಕಳನ್ನು ಹಿಡಿದುಕೊಂಡು ಅವರನ್ನು ಬಾವಿಗೆ ಇಳಿಸಿದ ಮಹಿಳೆ ಅಲ್ಲಿಯೇ ನಿಂತುಕೊಂಡು ಸೊಂಟ ಬಳುಕಿಸಿದ್ದಾಳೆ. 30 ಸೆಕೆಂಡ್‌ನ ವಿಡಿಯೋದಲ್ಲಿ ಕೊನೆ ಕ್ಷಣ ಮಕ್ಕಳಿಬ್ಬರ ಕೈಯನ್ನು ಬಿಟ್ಟು ಮಹಿಳೆ ಡ್ಯಾನ್ಸ್ ಮಾಡಲು ಮುಂದಾಗುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.newsics.com/2026/02/08/a-lot-of-people-led-me-astray-arjun-sarja/