https://youtube.com/shorts/j6ilMdnEwVU?si=zmhmirtwo-4Y6IAU
Subscribe ನ್ಯೂಸಿಕ್ಸ್ ಕನ್ನಡ
newsics.com
ನಟಿ ಕಂಗನಾ ರಣಾವತ್ ಮತ್ತು ರಾಜಕಾರಣಿ ಚಿರಾಗ್ ಪಸ್ವಾನ್ ಸಂಸತ್ ಕಲಾಪಕ್ಕೆ ಒಟ್ಟಿಗೆ ಆಗಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ.
2011ರಲ್ಲಿ ಹಿಂದಿಯ ಮಿಲೇ ನಾ ಮಿಲೇ ಹಮ್ ಸಿನಿಮಾದಲ್ಲಿ ನಟಿ ಕಂಗನಾ ಹಾಗೂ ಚಿರಾಗ್ ಪಸ್ವಾನ್ ಜೊತೆಯಾಗಿ ನಟಿಸಿದ್ದರು. ಆದರೆ ಈಗ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಚಿರಾಗ್ ಬಿಹಾರದ ಹಾಜಿಪುರ ಕ್ಷೇತ್ರದ ಸಂಸದರಾಗಿದ್ದಾರೆ. ಸದ್ಯ ಇವರು ಮದುವೆಯಾಗಿಲ್ಲ.
ಇತ್ತ ಕಂಗನಾ ರಣಾವತ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದು, ಸಂಸದರಾಗಿದ್ದಾರೆ. ಇವರು ಕೂಡ ಅವಿವಾಹಿತರು. ಹೀಗಾಗಿ ಇವರಿಬ್ಬರು ಮೊದಲು ಲೋಕಸಭೆಯಲ್ಲಿ ಸಿಕ್ಕಾಗ ಇವರಿಬ್ಬರು ಪರಸ್ಪರ ಮಾತನಾಡಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅನೇಕರು ಇವರಿಗೆ ನೀವಿಬ್ಬರೂ ಜೊತೆಯಲ್ಲಿ ನಿಂತರೆ ಚೆನ್ನಾಗಿ ಕಾಣುತ್ತಿರಾ ಎಂದು ಇವರ ವೀಡಿಯೋಗಳಿಗೆ ಕಾಮೆಂಟ್ ಮಾಡಿದ್ದರು.
ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ನಟಿ ಸಂಸದೆ ಕಂಗನಾ ರಣಾವತ್ ಹಾಗೂ ಸಚಿವ ಚಿರಾಗ್ ಪಸ್ವಾನ್ ಜೊತೆಯಾಗಿ ಸಂಸತ್ ಕಲಾಪಕ್ಕೆ ಆಗಮಿಸುತ್ತಿರುವ ದೃಶ್ಯವಿದೆ. ಪ್ರಸ್ತುತ ಸಂಸತ್‌ನ ಅಧಿವೇಶನ ನಡೆಯುತ್ತಿದೆ. ಕಂಗನಾ ಕಪ್ಪು ಬಣ್ಣದ ಬ್ಯಾಗ್ ಕೈಯಲ್ಲಿ ಹಿಡಿದು ಬೂದು ಬಣ್ಣದ ಕೋಟ್ ಧರಿಸಿ ಬಂದಿದ್ದರೆ, ಚಿರಾಗ್ ಪಸ್ವಾನ್ ಅವರು ಬಿಳಿ ಜುಬ್ಬಾ ನೀಲಿ ಜೀನ್ಸ್ ಧರಿಸಿ ಶಾಲು ಸುತ್ತಿಕೊಂಡು ಆಗಮಿಸಿದ್ದರು.
https://www.instagram.com/reel/DUSHq9vDt4R/?igsh=NnZ2NHpmYTR2ajE=