Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಂಡನ ಸಾವಿನ ಸುದ್ದಿ ಕೇಳಿ ಮನನೊಂದು ಪತ್ನಿ ಆತ್ಮಹತ್ಯೆ
ಕರ್ನಾಟಕಪ್ರಮುಖ

ಗಂಡನ ಸಾವಿನ ಸುದ್ದಿ ಕೇಳಿ ಮನನೊಂದು ಪತ್ನಿ ಆತ್ಮಹತ್ಯೆ

Share
1 Min Read
SHARE

https://youtube.com/shorts/j6ilMdnEwVU?si=zmhmirtwo-4Y6IAU

Subscribe ನ್ಯೂಸಿಕ್ಸ್ ಕನ್ನಡ

newsics.com

ಗಂಡನ ಅಕಾಲಿಕ ಸಾವಿನ ಬೆನ್ನಲ್ಲೇ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮೃತರನ್ನು ರಾಜು (48) ಹಾಗೂ ಅವರ ಪತ್ನಿ ಮೀನಾ (40) ಎಂದು ಗುರುತಿಸಲಾಗಿದೆ.

ದಂಪತಿಗಳು ಮೂಲತಃ ಕುಣಿಗಲ್ ನಿವಾಸಿಗಳಾಗಿದ್ದು, ಕಳೆದ 20 ವರ್ಷಗಳಿಂದ ನೆಲಮಂಗಲ ನಗರದಲ್ಲಿ ವಾಸವಿದ್ದರು.
ನೆಲಮಂಗಲದ ಜಕ್ಕಸಂದ್ರದಲ್ಲಿ ಮನೆ ಲೀಸ್ ಪಡೆದು ವಾಸವಾಗಿದ್ದ ಈ ದಂಪತಿಯ ಜೀವನದಲ್ಲಿ ದುರಂತ ಮಂಗಳವಾರ ಸಂಜೆ ಸಂಭವಿಸಿದೆ. ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದ ರಾಜು, ಗ್ಯಾಸ್ ಗೀಸರ್‌ನಿಂದ ಉಸಿರುಗಟ್ಟಿದ ಪರಿಣಾಮ ಮೃತಪಟ್ಟಿದ್ದಾರೆ.
ಒಂದು ಗಂಟೆಗೂ ಹೆಚ್ಚು ಸಮಯವಾದರೂ ಬಾತ್‌ರೂಮ್‌ನಿಂದ ಹೊರಬರದ ಹಿನ್ನೆಲೆಯಲ್ಲಿ ಮಗ ಬಾಗಿಲು ಒಡೆದು ನೋಡಿದಾಗ ರಾಜು ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ರಾಜು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
ತಂದೆಯ ಸಾವಿನ ವಿಷಯವನ್ನು ಮಗ ತನ್ನ ತಾಯಿ ಮೀನಾಗೆ ತಿಳಿಸಿದ್ದಾನೆ. ಈ ಸುದ್ದಿ ಕೇಳಿ ತೀವ್ರವಾಗಿ ಮನನೊಂದ ಮೀನಾಗೆ ಗಂಡನ ಶವದ ಮುಖವನ್ನು ಕೂಡ ನೋಡಲು ಮನಸ್ಸಾಗಿಲ್ಲ ಎನ್ನಲಾಗಿದೆ. ನಂತರ ಕೆಲಸದಿಂದ ನೇರವಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ.ಶ್ರೀನಿವಾಸಪುರದ ಮನೆಯೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್‌ನಲ್ಲಿ, “ನನ್ನ ಗಂಡನನ್ನು ಬಿಟ್ಟು ಒಂದು ನಿಮಿಷವೂ ನಾನು ಬದುಕಿರುವುದಿಲ್ಲ” ಎಂದು ಉಲ್ಲೇಖಿಸಿರುವ ಮೀನಾ, ತಮ್ಮ ಬಳಿಯಿರುವ ವಸ್ತುಗಳನ್ನು ಯಾರ್ಯಾರಿಗೆ ಕೊಡಬೇಕೋ ಅವರಿಗೆ ಕೊಟ್ಟುಬಿಡಿ, ನನ್ನನ್ನು ಕ್ಷಮಿಸಿಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಂಡ-ಹೆಂಡತಿಯ ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಕೆಲವರು ಏಕೆ ಬೇಗ ‘ಎಮೋಷನಲ್’ ಆಗ್ತಾರೆ ?

TAGGED:Heartbroken wife commits suicide after hearing the news of her husband's death
Share This Article
Facebook Twitter Copy Link Print
Previous Article ಕೆಲವರು ಏಕೆ ಬೇಗ ‘ಎಮೋಷನಲ್’ ಆಗ್ತಾರೆ ?
Next Article ಒಟ್ಟಿಗೆ ಕಲಾಪಕ್ಕೆ ಆಗಮಿಸಿದ ಕಂಗನಾ ರಣಾವತ್ ಮತ್ತು ಚಿರಾಗ್ ಪಸ್ವಾನ್; ವೈರಲ್ ವಿಡಿಯೋ ನೋಡಿ

Popular Posts

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?