Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಎಂಟಿಸಿ ಬಸ್ ಯುವತಿಯ ಮೇಲೆ ಹರಿದು ಸ್ಥಳದಲ್ಲಿ ಯುವತಿ ಸಾವನಪ್ಪಿರುವ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.
ಮೃತರನ್ನು ಮಣಿಪುರ ಮೂಲದ ಯುವತಿಯ ಹನ್ನಾ ಇನಕಾ ಎಂದು ಗುರುತಿಸಲಾಗಿದೆ. ಈ ಘಟನೆ ನಿನ್ನೆ ನಡೆದಿದೆ.
ಯುವತಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ವೇಗವಾಗಿ ಬಂದ ಬಿಎಂಟಿಸಿ ಬಸ್ ಆಕೆಗೆ ಡಿಕ್ಕಿ ಹೊಡೆದಿದೆ. ದುರದೃಷ್ಟವಶಾತ್ ಆಕೆ ಕೆಳಗೆ ಬಿದ್ದಿದ್ದು, ಬಸ್ಸಿನ ಚಕ್ರ ಆಕೆಯ ತಲೆಯ ಮೇಲೆ ಹರಿದಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಹನ್ನಾ ಇನಕಾ. ಮಣಿಪುರ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಜೀವನೋಪಾಯಕ್ಕೋಸ್ಕರ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದ ಯುವತಿ ದಾರುಣವಾಗಿ ಮೃತಪಟ್ಟಿದ್ದಾರೆ.
ಕಿಲ್ಲರ್ ಬಿಎಂಟಿಸಿ: ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸ್ಥಳೀಯವಾಗಿ ಬಿಎಂಟಿಸಿ ಚಾಲಕರ ಅಜಾಗರೂಕತೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟಿನ್ ಫ್ಯಾಕ್ಟರಿ ಪ್ರದೇಶವು ಅತೀ ಹೆಚ್ಚು ಸಂಚಾರ ದಟ್ಟಣೆ ಹಾಗೂ ಅವ್ಯವಸ್ಥಿತ ರಸ್ತೆ ದಾಟುವಿಕೆಯಿಂದಾಗಿ ಪಾದಚಾರಿಗಳಿಗೆ ‘ಡೆತ್ ಟ್ರ್ಯಾಪ್’ ಆಗಿ ಪರಿಣಮಿಸುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ನಾಲ್ವರು ಶಿಕ್ಷಕರಿಂದ ವಿದ್ಯಾರ್ಥಿಗೆ ಹಲ್ಲೆ: ಎಂಟನೇ ತರಗತಿ ಬಾಲಕ ಪ್ರಜ್ಞೆ ಕಳೆದು ಆಸ್ಪತ್ರೆಗೆ ದಾಖಲು