https://youtube.com/shorts/kv9in5qxZnE?si=xMEQPbw5L2rTAx6o
Subscribe ನ್ಯೂಸಿಕ್ಸ್ ಕನ್ನಡ
newsics.com
ಚೆನ್ನೈ:ಚೆನ್ನೈನಾದ್ಯಂತ ವಿವಿಧ ಜಿಲ್ಲೆಗಳಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದು, ಹಕ್ಕಿ ಜ್ವರ ಹರಡುವ ಭೀತಿ ಎದುರಾಗಿದೆ. ಹೀಗಾಗಿ ರಾಜ್ಯದಾದ್ಯಂತ ಸರ್ಕಾರ ‘ಹೈ ಅಲರ್ಟ್’ ಘೋಷಿಸಿದೆ.
ನೂರಾರು ಕಾಗೆಗಳು ಸತ್ತಿರುವುದು ಕಂಡುಬಂದಿದ್ದು, ಪ್ರಯೋಗಾಲಯ ಪರೀಕ್ಷೆಯಿಂದ H5N1 ವೈರಸ್ ಪತ್ತೆಯಾಗಿರುವುದನ್ನು ದೃಢಪಡಿಸಿವೆ. ಇದು ಈ ಪ್ರದೇಶದಲ್ಲಿ ಹಕ್ಕಿ ಜ್ವರ ಹರಡುವಿಕೆಯ ಸೂಚನೆಯಾಗಿದೆ. ಆರೋಗ್ಯ ಅಧಿಕಾರಿಗಳು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಜ್ಜಾಗುತ್ತಿರುವುದರಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಸಾರ್ವಜನಿಕರು ಸತ್ತಿರುವ ಕಾಗೆಗಳನ್ನು ಮುಟ್ಟುವುದಾಗಲಿ ಅಥವಾ ಅವುಗಳನ್ನು ದಹನ ಮಾಡುವುದಾಗಲಿ ಮಾಡಬಾರದೆಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.
ಚೆನ್ನೈನಲ್ಲಿ ಕಾಗೆ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಪಶುಸಂಗೋಪನಾ ಸಚಿವಾಲಯ ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತಕ್ಷಣವೇ ಸ್ಥಳದ ಪರಿಶೀಲನೆ ನಡೆಸಿ ಹಕ್ಕಿ ಜ್ವರ ಹೆರಡದಂತೆ ಮುನ್ನೆಚ್ಚರಿಕೆ ಕ್ರಮೆ ತೆಗೆದುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದೆ.
H5N1 ಎಂಬುದು Influenza A ವೈರಸ್‌ನ ಅಧಿಕ ರೋಗಕಾರಕ ಸೋಂಕು, ಇದು ಆರಂಭಿಕವಾಗಿ ಪಕ್ಷಿಗಳಿಗೆ, ವಿಶೇಷವಾಗಿ ಕೋಳಿ ಮತ್ತು ಪಕ್ಷಿಗಳಿಗೆ ಸೋಂಕು ಹರಡುತ್ತದೆ. ಇದನ್ನು ಸಾಮಾನ್ಯವಾಗಿ “ಹಕ್ಕಿ ಜ್ವರ” ಎಂದು ಕರೆಯಲಾಗುತ್ತದೆ. ಈ ಎಚ್’ 5ಎನ್ 1 ಸೋಂಕು ಪಕ್ಷಿ ಸಂಕುಲಕ್ಕೆ ಶೀಘ್ರವಾಗಿ ಹರಡುತ್ತದೆ. ಈ ಸೋಂಕು ತಗುಲಿದ ಹಕ್ಕಿಗಳು ಅನಾರೋಗ್ಯಕ್ಕೆ ಒಳಗಾಗಿ, ಸಾವನ್ನಪ್ಪುತ್ತವೆ.
ಎಚ್ 5ಎನ್ 1 ಸೋಂಕು ಮುಖ್ಯವಾಗಿ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೊಮ್ಮೆ ಇದು ವಿರಳವಾಗಿ ಮನುಷ್ಯನ ಮೇಲೂ ಪರಿಣಾಮ ಬೀರುತ್ತದೆ. ಈ ಸೋಂಕು ಮನುಷ್ಯನ ಮೇಲೆ ಪರಿಣಾಮ ಬೀರುವುದು ವಿರಳವಾದರು ಕೂಡ ಇದು ಗಂಭೀರ ಸ್ವರೂಪದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಹಕ್ಕಿ ಜ್ವರ ಹರಡದಂತೆ ಸೂಕ್ಷ್ಮವಾಗಿ ನಿಗಾವಹಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಎಚ್ 5 ಎನ್ 1 ಸೋಂಕು ತುಂಬಾ ಅಪಾಯಕಾರಿಯಾದದ್ದು. ಹಕ್ಕಿಗಳ ಮೇಲೆ ಇದು ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುವ ಮೂಲಕ ಅಧಿಕ ಸಾವು ಸಂಭವಿಸುತ್ತದೆ. ಕೋಳಿಗಳಿಗೆ ಈ ಸೋಂಕು ತಗುಲಿದರು ಕೂಡಾ ಸಾವಿರಾರು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನುಷ್ಯನಿಗೆ ಈ ಸೋಂಕು ತಗುಲಿದ ವೇಳೆ ಗಂಭೀರವಾದ ಶ್ವಾಸಕೋಶದ ಅನಾರೋಗ್ಯ ಸಂಭವಿಸಿ ಇದು ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ. ಅಲ್ಲದೇ ಇದು ಸಾಮಾನ್ಯ ಫೂಗಿಂತಲೂ ಮಾರಕವಾಗಿದ್ದು, ಸಾವಿಗೆ ಕಾರಣವಾಗುತ್ತದೆ ಎಂದು ವರದಿ ತಿಳಿಸಿದೆ.
ರೋಗ ಲಕ್ಷಣ ಏನೇನು?
ಮನುಷ್ಯರಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ, ಚಳಿಯ ಅನುಭವ, ತಲೆ ನೋವು, ಮೈಕೈ ನೋವು, ಕೆಮ್ಮು, ಉಸಿರಾಟ ತೊಂದರೆ, ಗಂಟಲು ನೋವು, ಭೇದಿ, ಹೊಟ್ಟೆನೋವು, ಮೂಗು / ಒಸಡಿನಲ್ಲಿ ರಕ್ತ ಸ್ರಾವ, ಕೆಂಗಣ್ಣು ಬಾಧಿಸುತ್ತದೆ.
ಕೋಳಿಗಳಲ್ಲಿ ಸೋಂಕಿನ ಲಕ್ಷಣಗಳು ತಕ್ಷಣಕ್ಕೆ ಕಾಣಿಸಿಕೊಳ್ಳುವುದಿಲ್ಲ. ಅವು ಬಹುಬೇಗ ಹರಡುವುದರಿಂದ ರೋಗ ಪತ್ತೆ ಕಷ್ಟ. ಸಾಮಾನ್ಯವಾಗಿ ಸೋಂಕಿತ ಕೋಳಿಗಳು ಆಹಾರ ತಿನ್ನುವುದಿಲ್ಲ. ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚು ಓಡಾಡುವುದಿಲ್ಲ. ಕಣ್ಣುಗಳು ತೇವಗೊಂಡಿರುತ್ತವೆ. ರೆಕ್ಕೆಗಳು ಕೆದರಿರುತ್ತವೆ. ನೆತ್ತಿ ಮತ್ತು ಜೋಲು ದೊಗಲುವಿನಲ್ಲಿ (ಕುತ್ತಿಗೆಯಲ್ಲಿ ಜೋಲಾಡುವ ಭಾಗ) ದ್ರವ ಸಂಗ್ರಹವಾಗುತ್ತದೆ. ಕೆಮ್ಮೂ ಕಾಡಬಹುದು. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು. ದಿಢೀರ್ ಸಾವು ಕೂಡ ಸಂಭವಿಸುತ್ತದೆ.
ಇಸ್ಲಾಮಾಬಾದ್‌ನಲ್ಲಿ ಆತ್ಮಾಹುತಿ ದಾಳಿ: 69 ಮಂದಿ ಸಾವು, 169 ಮಂದಿ ಗಾಯ