https://youtube.com/shorts/kv9in5qxZnE?si=PN7byw9veLqq499c
Subscribe ನ್ಯೂಸಿಕ್ಸ್ ಕನ್ನಡ
newsics.com
ದುಬೈಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಪ್ರಯಾಣಿಕರ ಲಗೇಜ್ ಬ್ಯಾಗ್‌ನಲ್ಲಿದ್ದ ಅಮೂಲ್ಯ ಚಿನ್ನ ಮತ್ತು ವಜ್ರಾಭರಣಗಳು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ವಜ್ರ ಕಳ್ಳತನವಾಗಿದೆ.
ಹುಬ್ಬಳ್ಳಿ ಮೂಲದ ಈ ಮಹಿಳೆ ಕಳೆದ ನವೆಂಬರ್ ತಿಂಗಳಲ್ಲಿ ದುಬೈ ಮೂಲಕ ಅಮೆರಿಕಾಗೆ ತೆರಳಿದ್ದರು. ಅಮೆರಿಕಾದಲ್ಲಿ ತನ್ನ ಮಗನೊಂದಿಗೆ ವಾಸವಾಗಿದ್ದ ಅವರು, ಇತ್ತೀಚೆಗೆ ರಾಜ್ಯಕ್ಕೆ ವಾಪಸ್ ಆಗಿದ್ದು, ಇದೀಗ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದಾರೆ. ಮಹಿಳೆ ಚೆಕ್-ಇನ್ ಪ್ರಕ್ರಿಯೆಯ ವೇಳೆ ಲಗೇಜ್ ಬ್ಯಾಗ್‌ನೊಳಗೆ ಚಿನ್ನಾಭರಣ ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿಗೆ ತೋರಿಸಿ, ನಿಯಮಾನುಸಾರ ಬ್ಯಾಗ್‌ಗೆ ಟ್ಯಾಗ್ ಮಾಡಿಸಿದ್ದರು. ನಂತರ ಆ ಬ್ಯಾಗ್ ಅನ್ನು ವಿಮಾನದ ಲಗೇಜ್ ವಿಭಾಗಕ್ಕೆ ಕಳುಹಿಸಲಾಗಿತ್ತು. ಆದರೆ ದುಬೈ ತಲುಪಿದ ಬಳಿಕ ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರೊಳಗೆ ಇರಿಸಿದ್ದ ಚಿನ್ನ ಮತ್ತು ವಜ್ರಾಭರಣಗಳು ಸಂಪೂರ್ಣವಾಗಿ ಮಾಯವಾಗಿರುವುದು ಗೊತ್ತಾಗಿದೆ.
ಕಳ್ಳತನಗೊಂಡ ವಸ್ತುಗಳಲ್ಲಿ ಸುಮಾರು 790 ಗ್ರಾಂ ಚಿನ್ನಾಭರಣ ಹಾಗೂ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ ಸೇರಿವೆ. ಒಟ್ಟಾರೆ ಈ ಕಳ್ಳತನದ ಮೌಲ್ಯ ಕೋಟಿ ರೂಪಾಯಿಗೆ ಸಮೀಪದಲ್ಲಿದೆ ಎಂದು ಅಂದಾಜಿಸಲಾಗಿದೆ. ಚೆಕ್-ಇನ್ ನಂತರ ಲಗೇಜ್ ವಿಮಾನಕ್ಕೆ ಸೇರಿಸುವ ಪ್ರಕ್ರಿಯೆಯ ಮಧ್ಯೆ ಈ ಕಳ್ಳತನ ನಡೆದಿರುವ ಸಾಧ್ಯತೆ ಹೆಚ್ಚಿರುವುದರಿಂದ, ವಿಮಾನ ನಿಲ್ದಾಣದ ಸಿಬ್ಬಂದಿಯಿಂದಲೇ ಚಿನ್ನಾಭರಣ ಕಳ್ಳತನವಾಗಿರಬಹುದೆಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಮಹಿಳೆ ಚೆಕ್ ಇನ್ ನಲ್ಲಿ ಚಿನ್ನ ತೋರಿಸಿ ಬ್ಯಾಗ್ ಗೆ ಟ್ಯಾಗ್ ಮಾಡಿದ್ದರು. ಲಗೇಜ್ ಬ್ಯಾಗ್ ನಲ್ಲಿಟ್ಟಿದ್ದ ಚಿನ್ನ ದುಬೈಗೆ ಹೋಗುವಷ್ಟರಲ್ಲಿ ಮಾಯವಾಗಿದೆ. ಏರ್ ಪೋರ್ಟ್ ಸಿಬ್ಬಂದಿಯೇ ಚಿನ್ನಾಭರಣ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.
790 ಗ್ರಾಂ ಚಿನ್ನ, 8 ಲಕ್ಷ ಬೆಲೆ ಬಾಳುವ ವಜ್ರಾಭರಣಗಳು ಇದ್ದವು. ಎಲ್ಲವೂ ಕಳ್ಳತನವಾಗಿದೆ. ಬೆಂಗಳೂರು ಏರ್ ಪೋರ್ಟ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.