Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸಾಫ್ಟ್‌ವೇರ್‌ ಸ್ಟಾಕ್‌ಗಳ ಸಾಮೂಹಿಕ ಹತ್ಯಾಕಾಂಡ!; ಆಂಥ್ರೋಪಿಕ್ ಬಿಟ್ಟ ಆ ಅಸ್ತ್ರವೇನು?
ಪ್ರಮುಖವಿದೇಶ

ಸಾಫ್ಟ್‌ವೇರ್‌ ಸ್ಟಾಕ್‌ಗಳ ಸಾಮೂಹಿಕ ಹತ್ಯಾಕಾಂಡ!; ಆಂಥ್ರೋಪಿಕ್ ಬಿಟ್ಟ ಆ ಅಸ್ತ್ರವೇನು?

Share
6 Min Read
SHARE

https://youtube.com/shorts/2Z4I0oFUbOQ?si=2AWNIubhEa82xcJv

Subscribe ನ್ಯೂಸಿಕ್ಸ್ ಕನ್ನಡ

newsics.com

ಆಂಥ್ರೋಪಿಕ್ ರಿಲೀಸ್‌ ಮಾಡಿರುವ ಹೊಸ ಎಂಟರ್‌ಪ್ರೈಸ್‌ ಎಐ ಟೂಲ್‌ಗಳು ಗ್ಲೋಬಲ್‌ ಇನ್ವೆಸ್ಟರ್‌ಗಳ ನಿದ್ದೆಗೆಡಿಸಿವೆ. ಇವು ಕೇವಲ ಸಾಮಾನ್ಯ ಅಪ್‌ಡೇಟ್‌ಗಳಲ್ಲ, ಬದಲಾಗಿ ಐಟಿ ಕಂಪನಿಗಳನ್ನೇ ನುಂಗಿಹಾಕಬಲ್ಲ ಸಾಮರ್ಥ್ಯವಿರುವ ಏಜೆಂಟ್‌ಗಳು ಎಂಬ ಭಯ ಈಗ ಆವರಿಸಿದೆ. ಕಳೆದ ರಾತ್ರಿ ನ್ಯಾಸ್ಡಾಕ್‌ ತೀವ್ರವಾಗಿ ಕುಸಿದಿದ್ದು, ಅಮೆರಿಕದ ಟೆಕ್‌ ಸ್ಟಾಕ್‌ಗಳಿಗೆ ಬೆಂಕಿ ಬಿದ್ದಿತ್ತು. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಕಳೆದ ರಾತ್ರಿ ನಡೆದಿದ್ದನ್ನು ವಿಶ್ಲೇಷಕರು ಸಾಸ್‌ಪೋಕ್ಯಾಲಿಪ್ಸ್ ಎಂದು ಕರೆಯುತ್ತಿದ್ದಾರೆ. ಅಂದರೆ, ಸಾಫ್ಟ್‌ವೇರ್ ಸ್ಟಾಕ್‌ಗಳ ಸಾಮೂಹಿಕ ಹತ್ಯಾಕಾಂಡ. ಆಂಥ್ರೋಪಿಕ್ ಸಂಸ್ಥೆಯು ತನ್ನ ಜನಪ್ರಿಯ ಕ್ಲಾಡ್ ಚಾಟ್‌ಬಾಟ್‌ಗಾಗಿ ಹೊಸ ಪ್ಲಗಿನ್‌ಗಳನ್ನು ಬಿಡುಗಡೆ ಮಾಡಿದ ತಕ್ಷಣ, ಹೂಡಿಕೆದಾರರು ಭೀತಿಯಿಂದ ಷೇರುಗಳನ್ನು ಮಾರಾಟ ಮಾಡಲು ಮುಗಿಬಿದ್ದರು. ಒಂದೇ ಒಂದು ಟ್ರೇಡಿಂಗ್ ಸೆಷನ್‌ನಲ್ಲಿ ಸಾಫ್ಟ್‌ವೇರ್, ಲೀಗಲ್ ಟೆಕ್ ಮತ್ತು ಫೈನಾನ್ಷಿಯಲ್ ಸರ್ವಿಸಸ್ ಕಂಪನಿಗಳ ಸುಮಾರು 285 ಬಿಲಿಯನ್ ಡಾಲರ್‌ ಗೋವಿಂದ ಆಗಿದೆ.
ಥಾಮ್ಸನ್ ರಾಯಿಟರ್ಸ್ ಶೇ.15 ಕ್ಕಿಂತ ಹೆಚ್ಚು ಕುಸಿದರೆ, ಲೆಕ್ಸಿಸ್‌ನೆಕ್ಸಿಸ್‌ನ ಮಾಲೀಕತ್ವ ಹೊಂದಿರುವ ಆರ್‌ಇಎಲ್‌ಎಕ್ಸ್‌ ಶೇ.14 ರಷ್ಟು ಕುಸಿಯಿತು. ಲೀಗಲ್ ಟೆಕ್ ಕಂಪನಿ ಲೀಗಲ್‌ಜೂಮ್ ಬರೋಬ್ಬರಿ ಶೇ.20 ರಷ್ಟು ಪತನಗೊಂಡಿತು. ಅಮೆರಿಕದ ನ್ಯಾಸ್ಡಾಕ್ ಶೇ.1.4 ರಷ್ಟು ಕುಸಿಯಿತು. ಇದರ ನೇರ ಪರಿಣಾಮ ಭಾರತದ ಮೇಲೂ ಆಗಿದ್ದು, ಇನ್ಫೋಸಿಸ್‌ನ ಎಡಿಆರ್‌ಗಳು (ADR) ಶೇ.5.5 ರಷ್ಟು ಮತ್ತು ವಿಪ್ರೋ ಸುಮಾರು ಶೇ.5 ರಷ್ಟು ಕುಸಿದವು. ಇದೆಲ್ಲದಕ್ಕೂ ಮೂಲ ಕಾರಣ ಆಂಥ್ರೋಪಿಕ್ ಬಿಡುಗಡೆ ಮಾಡಿದ ಆ 11 ಪ್ಲಗಿನ್‌ಗಳು ಎಂದರೇ ನೀವು ನಂಬಲೇಬೇಕು. 285 ಬಿಲಿಯನ್‌ ಡಾಲರ್‌ ಅಂದ್ರೇ ಬರೋಬ್ಬರಿ 2.57 ಲಕ್ಷ ಭಾರತೀಯ ರೂಪಾಯಿ ಮಾರ್ಕೆಟ್‌ನಿಂದ ಮಂಗಮಾಯವಾಗಿದೆ. ಅಷ್ಟರ ಮಟ್ಟಿಗೆ ಈ ಆಂಥ್ರೋಪಿಕ್ ಎಐ ಟೂಲ್‌ನ ಅಬ್ಬರ ಮಾರುಕಟ್ಟೆಯಲ್ಲಿತ್ತು. ಅಕ್ಷರಶಃ ಟೆಕ್‌ ಸ್ಟಾಕ್‌ಗಳನ್ನು ಆಂಥ್ರೋಪಿಕ್‌ ಒಂದೇ ಏಟಿಗೆ ಹೊಡೆದೊಡೆದು ಹಾಕಿದೆ. ಇದರ ಎಫೆಕ್ಟ್‌ ಭಾರತಕ್ಕೂ ತಟ್ಟಿದೆ.
ಆಂಥ್ರೋಪಿಕ್ ಬಿಟ್ಟ ಆ ಅಸ್ತ್ರವೇನು?

  • ಹಾಗಾದರೆ, ಆಂಥ್ರೋಪಿಕ್ ನಿಖರವಾಗಿ ಏನನ್ನು ಬಿಡುಗಡೆ ಮಾಡಿದ ಎಂಬುದನ್ನು ಗಮನಿಸಿದರೆ. ಜನವರಿ ತಿಂಗಳ ಆರಂಭದಲ್ಲಿ ಆಂಥ್ರೋಪಿಕ್ ಕ್ಲಾಡ್ ಕೋವರ್ಕ್ ಎಂಬ ಏಜೆಂಟಿಕ್ ಎಐ ಅಸಿಸ್ಟಂಟ್ ಅನ್ನು ಪರಿಚಯಿಸಿತ್ತು.
  • ಇದು ಕೇವಲ ಮಾತನಾಡುವ ಚಾಟ್‌ಬಾಟ್ ಅಲ್ಲ. ಇದು ಫೈಲ್‌ಗಳನ್ನು ಓದಬಲ್ಲದು, ಫೋಲ್ಡರ್‌ಗಳನ್ನು ಆರ್ಗನೈಸ್ ಮಾಡಬಲ್ಲದು, ಡಾಕ್ಯುಮೆಂಟ್‌ಗಳನ್ನು ಡ್ರಾಫ್ಟ್ ಮಾಡಬಲ್ಲದು ಮತ್ತು ಬಳಕೆದಾರರ ಅನುಮತಿಯೊಂದಿಗೆ ಮಲ್ಟಿ ಸ್ಟೆಪ್‌ ಟಾಸ್ಕ್‌ಗಳನ್ನು ತಾನೇ ನಿರ್ವಹಿಸಬಲ್ಲದು.
  • ಆದರೆ, ಶುಕ್ರವಾರ, ಜನವರಿ 30 ರಂದು ಆಂಥ್ರೋಪಿಕ್ ಈ ಟೂಲ್‌ಗೆ ಶಕ್ತಿ ತುಂಬುವ 11 ಓಪನ್ ಸೋರ್ಸ್ ಪ್ಲಗಿನ್‌ಗಳನ್ನು ಬಿಡುಗಡೆ ಮಾಡಿತು. ಇವು ಪ್ರೊಡಕ್ಟಿವಿಟಿ, ಸೇಲ್ಸ್, ಮಾರ್ಕೆಟಿಂಗ್, ಫೈನಾನ್ಸ್, ಡೇಟಾ ಅನಾಲಿಸಿಸ್ ಮತ್ತು ಕಸ್ಟಮರ್ ಸಪೋರ್ಟ್‌ ಕೆಲಸಗಳನ್ನು ಆಟೋಮ್ಯಾಟಿಕ್‌ ಮಾಡುತ್ತವೆ.
  • ಆದರೆ, ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿದ್ದು ಲೀಗಲ್ ಪ್ಲಗಿನ್ ಎಂಬ ಟೂಲ್‌. ಇದು ಕಾಂಟ್ರಾಕ್ಟ್‌ಗಳ ರಿವ್ಯೂ, ಎನ್‌ಡಿಎ ಪರಿಶೀಲನೆ, ಮತ್ತು ಲೀಗಲ್ ಬ್ರೀಫಿಂಗ್‌ಗಳನ್ನು ಕ್ಷಣಾರ್ಧದಲ್ಲಿ ಮಾಡಬಲ್ಲದು. ಇದು ಸಂಚಲನ ಸೃಷ್ಟಿಸಿತ್ತು. ಆದರೆ, ಇದರ ಔಟ್‌ಪುಟ್‌ಗಳನ್ನು ವಕೀಲರೇ ಪರಿಶೀಲಿಸಬೇಕು ಎಂದು ಆಂಥ್ರೋಪಿಕ್ ಹೇಳಿದ್ದರೂ, ಹೂಡಿಕೆದಾರರ ಭಯ ಮಾತ್ರ ಕಡಿಮೆಯಾಗಿಲ್ಲ.

ಇನ್ನು, ಅಮೆರಿಕದಲ್ಲಿನ ಬೆಳವಣಿಗೆ ಭಾರತದ ಮೇಲೆ ಏಕೆ ಎಫೆಕ್ಟ್‌ ಎಂಬುದನ್ನು ಗಮನಿಸಿದೆ, ಭಾರತೀಯ ಐಟಿ ಕಂಪನಿಗಳು ಕುಸಿಯಲು ಪ್ರಬಲ ಕಾರಣವಿದೆ. ಆಂಥ್ರೋಪಿಕ್‌ನ ಈ ಟೂಲ್‌ಗಳು ಬಹುರಾಷ್ಟ್ರೀಯ ಕಂಪನಿಗಳು ಸಾಮಾನ್ಯವಾಗಿ ಭಾರತೀಯ ಐಟಿ ಸೇವಾ ಪೂರೈಕೆದಾರರಿಗೆ ಹೊರಗುತ್ತಿಗೆ ನೀಡುವ ಕೆಲಸಗಳನ್ನೇ ಟಾರ್ಗೆಟ್ ಮಾಡಿವೆ. ಡಾಕ್ಯುಮೆಂಟ್ ಪ್ರೊಸೆಸಿಂಗ್, ಕಂಪ್ಲೈಯನ್ಸ್ ಚೆಕ್ಸ್, ಆಪರೇಷನಲ್ ಅನಾಲಿಸಿಸ್ ಮತ್ತು ಇತರ ಬ್ಯಾಕ್ ಆಫೀಸ್ ಕಾರ್ಯಗಳನ್ನು ಈ ಎಐ ಏಜೆಂಟ್‌ಗಳು ಈಗ ಅಗ್ಗದ ದರದಲ್ಲಿ ಮತ್ತು ವೇಗವಾಗಿ ಮಾಡಬಲ್ಲವು ಎಂಬುದು ಸ್ಪಷ್ಟವಾಗಿದೆ. ಇಷ್ಟು ದಿನ ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ಗೆ ಇಂಥ ಕೆಲಸಗಳಿಂದಲೇ ದೊಡ್ಡ ಆದಾಯ ಬರುತ್ತಿತ್ತು. ಆದರೆ, ಆಂಥ್ರೋಪಿಕ್‌ನ ಘೋಷಣೆ ಹೊರಬಿದ್ದ ತಕ್ಷಣ, ಅಮೆರಿಕದ ಹೂಡಿಕೆದಾರರು ಸಾಂಪ್ರದಾಯಿಕ ಐಟಿ ಸೇವೆಗಳ ಮೇಲಿನ ಹೂಡಿಕೆಯನ್ನು ಕಡಿತಗೊಳಿಸಲು ಪ್ರಾರಂಭಿಸಿದರು. ಇನ್ನು ಮುಂದೆ ಈ ಕೆಲಸಗಳಿಗೆ ಮನುಷ್ಯರು ಬೇಕಿಲ್ಲ, AI ಸಾಕು ಎಂಬ ಮೆಸೇಜ್‌ ಪಾಸ್‌ ಆಗಿತ್ತು. ಈ ಭಯ ತಕ್ಷಣದ ರಿಯಾಲಿಟಿಯಲ್ಲದಿದ್ದರೂ ಷೇರು ಮಾರುಕಟ್ಟೆ ಯಾವಾಗಲೂ ಭವಿಷ್ಯದ ಭಯದ ಮೇಲೆಯೇ ನಡೆಯುತ್ತದೆ. ಹೀಗಾಗಿಯೇ, ಭಾರತೀಯ ಮಾರುಕಟ್ಟೆಗಳು ತೆರೆಯುವ ಹೊತ್ತಿಗೆ ಸೆಲ್ಲಿಂಗ್‌ ಪ್ರೆಸರ್‌ ಜಾಸ್ತಿಯಾಗಿತ್ತು.

ಭಾರತೀಯ ಐಟಿ ಷೇರುಗಳು ಈಗಾಗಲೇ ದುಬಾರಿ ವ್ಯಾಲ್ಯುವೇಷನ್‌ನಲ್ಲಿ ವಹಿವಾಟು ನಡೆಸುತ್ತಿದ್ದವು. ಡೀಲ್‌ಗಳ ಏರಿಕೆ ನಿಧಾನವಾಗಿತ್ತು, ಜಾಗತಿಕ ಕ್ಲೈಂಟ್‌ಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದರು ಮತ್ತು ಅಮೆರಿಕ ಹಾಗೂ ಯುರೋಪ್‌ನಲ್ಲಿ ಟೆಕ್ ಸ್ಪೆಂಡಿಂಗ್ ಇನ್ನೂ ದುರ್ಬಲವಾಗಿತ್ತು. ಇಷ್ಟೆಲ್ಲಾ ಆತಂಕ ಸಿಸ್ಟಮ್‌ನಲ್ಲಿ ಮೊದಲೇ ಇದ್ದಾಗ, ಒಂದು ಸಣ್ಣ ನೆಗೆಟಿವ್‌ ಸುದ್ದಿಯೂ ದೊಡ್ಡ ಕುಸಿತಕ್ಕೆ ಕಾರಣವಾಗಬಲ್ಲದು. ಆದರೆ, ಬಂದಿದ್ದು ಸಣ್ಣ ಸುದ್ದಿಯಲ್ಲ, ನಡೆದಿದ್ದು ಜಾಗತಿಕ ಆಘಾತ. ಜೆಫರೀಸ್ ಈ ಮಾರಾಟದ ಭರಾಟೆಯನ್ನು ಗೆಟ್-ಮೀ-ಔಟ್ ಸ್ಟೈಲ್‌ನ ಟ್ರೇಡಿಂಗ್ ಎಂದು ಕರೆದಿದೆ. ಅಂದರೆ, ಹೂಡಿಕೆದಾರರು ಏನೇ ಆಗಲಿ, ಮೊದಲು ತಮ್ಮ ಷೇರು ಮಾರಿ ಹೊರಬರಲು ಯೋಚಿಸುತ್ತಿದ್ದಾರೆ. ಸಾಫ್ಟ್‌ವೇರ್ ಕಂಪನಿಗಳಿಗೆ ಎಐ ಸಹಾಯ ಮಾಡುತ್ತದೆ ಎಂಬುದು ಹಳೆಯ ಕಥೆಯಾಯಿತು, ಈಗ ಎಐ ಸಾಫ್ಟ್‌ವೇರ್ ಕಂಪನಿಗಳನ್ನೇ ಬದಲಾಯಿಸುತ್ತದೆ ಎಂಬ ಹೊಸ ನೆರೇಟಿವ್‌ ಸೃಷ್ಟಿಯಾಗಿದೆ.

ಇಲ್ಲಿ ಗಮನಿಸಬೇಕಾದ ರೋಚಕ ಅಂಶ ಏನೆಂದರೆ, ಆಂಥ್ರೋಪಿಕ್ ಬಿಡುಗಡೆ ಮಾಡಿದ ಲೀಗಲ್ ಪ್ಲಗಿನ್ ಯಾವುದೇ ವಿಶೇಷವಾದ ಕೇಸ್ ಲಾ ಇಂಜಿನ್‌ ಅಲ್ಲ.. ಇದರಲ್ಲಿ ಯಾವುದೇ ಪ್ರೊಪ್ರೈಟರಿ ಮಾಡೆಲ್ ಇಲ್ಲ. ವಿಶ್ಲೇಷಕರು ಹೇಳುವಂತೆ, ಇದು ಕೇವಲ ಪ್ರಾಂಪ್ಟ್‌ಗಳು ಮತ್ತು ಕಾನ್ಫಿಗರೇಶನ್‌ಗಳ ಸೆಟ್ ಅಷ್ಟೇ. ಅಂದರೆ ಕ್ಲಾಡ್‌ಗೆ ಕೆಲಸ ಮಾಡುವುದು ಹೇಗೆ ಎಂದು ಹೇಳಿಕೊಡುವ ಒಂದು ಸಿಸ್ಟಮೇಟಿಕ್‌ ವಿಧಾನ. ಆದರೆ, ಇದೇ ಅತಿ ದೊಡ್ಡ ಅಪಾಯ ಎನ್ನಲಾಗುತ್ತಿದೆ. ಥಾಮ್ಸನ್ ರಾಯಿಟರ್ಸ್‌ನಂತಹ ಕಂಪನಿಗಳು ಇಷ್ಟು ದಿನ ಕ್ಲಾಡ್ ಅಥವಾ ಓಪನ್ ಎಐ ಮೇಲೆ ತಮ್ಮ ಟೂಲ್‌ಗಳನ್ನು ಕಟ್ಟುತ್ತಿದ್ದವು. ಆದರೆ, ಈಗ ಆಂಥ್ರೋಪಿಕ್ ನೇರವಾಗಿ ರೆಡಿಮೇಡ್ ಸೊಲ್ಯೂಷನ್ ಕೊಡಲು ಶುರುಮಾಡಿದೆ. ಅಂದರೆ ಪ್ಲಾಟ್‌ಫಾರ್ಮ್ ಒದಗಿಸುವವರೇ ಈಗ ಸ್ಪರ್ಧಿಗಳಾಗಿದ್ದಾರೆ. ಹಾರ್ವೆ ಎಐ ಮತ್ತು ಲೆಗೋರಾದಂತಹ ಸ್ಟಾರ್ಟ್‌ಅಪ್‌ಗಳು ಆಂಥ್ರೋಪಿಕ್‌ನ ಮಾಡೆಲ್ ಮೇಲೆ ಅವಲಂಬಿತವಾಗಿವೆ. ಈಗ ಆಂಥ್ರೋಪಿಕ್ ತಾನೇ ಆಟಕ್ಕೆ ಇಳಿದಿರುವುದರಿಂದ, ಸಾಂಪ್ರದಾಯಿಕ ಕಂಪನಿಗಳು ಮತ್ತು ಹೊಸ ಸ್ಟಾರ್ಟ್‌ಅಪ್‌ಗಳು ಎರಡಕ್ಕೂ ಕಂಟಕ ಎದುರಾಗಿದೆ. ಕೇವಲ ಮೂರು ವಾರಗಳಲ್ಲಿ ಪ್ಲಗಿನ್ ಬಿಡುಗಡೆ ಮಾಡಿ, ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಕಂಪನಿಗಳು ತಿಂಗಳುಗಟ್ಟಲೆ ಮಾಡುವ ಕೆಲಸವನ್ನು ಆಂಥ್ರೋಪಿಕ್ ಕೆಲವೇ ದಿನಗಳಲ್ಲಿ ಮಾಡಿ ಮುಗಿಸಿದೆ.

ಭಾರತೀಯ ಐಟಿ ಮಾದರಿ ಸಂಪೂರ್ಣವಾಗಿ ಬಳಕೆಯಲ್ಲಿಲ್ಲ ಎಂಬುದು ಈ ಪ್ಯಾನಿಕ್‌ನ ಅರ್ಥವಲ್ಲ. ಆದರೆ, ಹೂಡಿಕೆದಾರರು ಈಗ ಕ್ಲಾರಿಟಿಯನ್ನು ಬಯಸುತ್ತಿದ್ದಾರೆ. ಈ ಹೊಸ ಎಐ ಯುಗಕ್ಕೆ ಭಾರತೀಯ ಸಂಸ್ಥೆಗಳು ಎಷ್ಟು ವೇಗವಾಗಿ ಹೊಂದಿಕೊಳ್ಳಬಲ್ಲವು? ಎಂಬುದನ್ನು ನೋಡಲು ಮಾರ್ಕೆಟ್‌ ಕಾಯುತ್ತಿದೆ. ಕಂಪನಿಗಳು ಕ್ಲೌಡ್, ಆಟೊಮೇಷನ್ ಮತ್ತು ಎಐ ನೇತೃತ್ವದ ಸೇವೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೂ, ಭವಿಷ್ಯದ ಆದಾಯವನ್ನು ರಕ್ಷಿಸಲು ಈ ಬದಲಾವಣೆಗಳು ಸಾಕಷ್ಟು ವೇಗವಾಗಿ ನಡೆಯುತ್ತಿವೆಯೇ ಎಂಬ ಪ್ರಶ್ನೆ ಎದ್ದಿದೆ. ವಿಪರ್ಯಾಸವೆಂದರೆ, ಈ ವಲಯವು ಭಾರತದ ಅತ್ಯಂತ ಜಾಗತಿಕವಾಗಿ ಸ್ಪರ್ಧಾತ್ಮಕ ಕೈಗಾರಿಕೆಗಳಲ್ಲಿ ಒಂದಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಚಂಚಲತೆ ಇರಲಿದೆ. ಜಾಗತಿಕ ಆಟಗಾರರಿಂದ ಬರುವ ಪ್ರತಿಯೊಂದು ಹೊಸ ಎಐ ಪ್ರಕಟಣೆಯು ಮಾರುಕಟ್ಟೆಯ ನರನಾಡಿಗಳನ್ನು ಪರೀಕ್ಷಿಸುತ್ತದೆ. ಇಂದಿನ ಕೊಲ್ಯಾಪ್ಸ್‌ ತಂತ್ರಜ್ಞಾನದ ಬಗೆಗಿನ ಸೆಂಟಿಮೆಂಟ್ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸಿದೆ.

ಆಂಥ್ರೋಪಿಕ್‌ನ ಈ ನಡೆ ಷೇರು ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಎಐ ಇನ್ನು ಮುಂದೆ ಕೇವಲ ದೂರದ ಮಾತಲ್ಲ, ಅದು ಷೇರು ಬೆಲೆಗಳು, ಹೂಡಿಕೆದಾರರ ನಿರ್ಧಾರಗಳು ಮತ್ತು ದೀರ್ಘಾವಧಿಯ ವಲಯದ ನಿರೀಕ್ಷೆಗಳ ಮೇಲೆ ರಿಯಲ್‌ ಟೈಮ್‌ನಲ್ಲಿ ಪ್ರಭಾವ ಬೀರುತ್ತಿದೆ. ಡಾಕ್ಯುಸೈನ್, ಸೇಲ್ಸ್‌ಫೋರ್ಸ್, ಅಡೋಬ್‌ನಂತಹ ಕಂಪನಿಗಳೂ ಈ ಸುಳಿಗೆ ಸಿಲುಕಿವೆ. ಭಾರತೀಯ ಐಟಿ ಕಂಪನಿಗಳು ಈಗ ಎಐ ಒಂದು ಥ್ರೆಟ್‌ ಅಲ್ಲ, ಬದಲಾಗಿ ತಮ್ಮ ಜಾಗತಿಕ ಸ್ಥಾನವನ್ನು ಬಲಪಡಿಸುವ ಅವಕಾಶ ಎಂದು ಸಾಬೀತುಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ನಿಜ.. ಇಲ್ಲದಿದ್ದರೆ, ಷೇರು ಮಾರುಕಟ್ಟೆಯಲ್ಲಿ ಇಂತಹ ರಕ್ತಸಿಕ್ತ ಅಧ್ಯಾಯಗಳು ರಿಪೀಟ್‌ ಆಗುತ್ತಲೇ ಇರುತ್ತವೆ.

ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿಯದ ಮದುವೆ ಅಸಿಂಧು : ಸುಪ್ರೀಂ

TAGGED:Massacre of software stocks!; What is that weapon left by Anthropic?
Share This Article
Facebook Twitter Copy Link Print
Previous Article ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿಯದ ಮದುವೆ ಅಸಿಂಧು : ಸುಪ್ರೀಂ
Next Article ಶಾಲಾ ಯೂನಿಫಾರಂನಲ್ಲಿಯೇ ಎಣ್ಣೆ ಹೊಡೆದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?