Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಖ್ಯಾತ ನಟ ರಾಜ್‌ಪಾಲ್ ಯಾದವ್‌ಗೆ ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶ – ಕಾರಣವೇನು?
ಮನರಂಜನೆದೇಶಪ್ರಮುಖ

ಪ್ರಖ್ಯಾತ ನಟ ರಾಜ್‌ಪಾಲ್ ಯಾದವ್‌ಗೆ ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶ – ಕಾರಣವೇನು?

Share
2 Min Read
SHARE

https://youtube.com/shorts/2Z4I0oFUbOQ?si=E_8G5fLxr2N6s9QC

Subscribe ನ್ಯೂಸಿಕ್ಸ್ ಕನ್ನಡ

newsics.com

ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಉದ್ದೇಶದಲ್ಲಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹೆಜ್ಜೆ ಹೆಜ್ಜೆಗೂ. ಮಹಾಮೋಸ ಮಾಡುತ್ತಾರೆ. ವಂಚನೆ ಮಾಡುತ್ತಾರೆ. ಹಣ ತೆಗೆದುಕೊಂಡು ಮರಳಿ ನೀಡದೇ ಸತಾಯಿಸುತ್ತಾರೆ. ಇಂತಹದ್ದೇ ಒಂದು ಪ್ರಕರಣದಲ್ಲಿ ಸದ್ಯ ಬಾಲಿವುಡ್‌ನ ಪ್ರಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್‌ ಅವರಿಗೆ ಹಿನ್ನೆಡೆಯಾಗಿದೆ. ನಾಳೆಯೇ (ಫೆಬ್ರವರಿ 4) ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶವನ್ನು ನೀಡಿದೆ.

2010 ರಲ್ಲಿ ರಾಜಪಾಲ್ ಯಾದವ್ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಹೆಸರು ಅತಾ ಪತಾ ಲಾಪತಾ. ಬಾಕ್ಸಾಫೀಸ್‌ನಲ್ಲಿ ಹೇಳ ಹೆಸರಿಲ್ಲದಂತೆ ಕಾಣೆಯಾದ ಈ ಚಿತ್ರಕ್ಕೆ ರಾಜ್ ಪಾಲ್ ಯಾದವ್ ಆ ಕಾಲದಲ್ಲಿ 5 ಕೋಟಿ ಸಾಲವನ್ನು ಮಾಡಿದ್ದರು. ಆದರೆ ಹಣ ಮರಳಿ ನೀಡುವಲ್ಲಿ ವಿಫಲರಾಗಿದ್ದರು.

ಆ ನಂತರ ಬಡ್ಡಿ ಸೇರಿ ಈ ಮೊತ್ತ 9 ಕೋಟಿಯಾಗಿತ್ತು. ಆಗಲೂ ಕೂಡ ಹಣ ಮರಳಿ ಬರಲಿಲ್ಲ. ಈ ಹಿನ್ನೆಲೆ ಬೇಸತ್ತು ಎಂ.ಎಸ್ ಮುರಳಿ ಪ್ರೊಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿತ್ತು. ಆಗ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಸೆಷನ್ಸ್ ನ್ಯಾಯಾಲಯ ಕೂಡ 2019ರಲ್ಲಿ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಆ ನಂತರ ಬೇರೆ ದಾರಿ ಇಲ್ಲದೆ ರಾಜ್‌ಪಾಲ್ ಯಾದವ್ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಮಯದಲ್ಲಿ ಹೈಕೋರ್ಟ್‌ನ ಪೀಠ ಶಿಕ್ಷೆಯ ಆದೇಶವನ್ನು ರದ್ದು ಮಾಡಿತ್ತು. ಈ ಹಣಕಾಸಿನ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳುವ ಭರವಸೆಯನ್ನು ಆಗ ರಾಜ್‌ಪಾಲ್ ಯಾದವ್ ನ್ಯಾಯಾಲಯಕ್ಕೆ ನೀಡಿದ್ದರು.

ಇಂದು (ಫೆಬ್ರವರಿ 3) ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರಣ ಕಾಂತ್ ಶರ್ಮಾ, ರಾಜ್‌ಪಾಲ್ ಯಾದವ್ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ನ್ಯಾಯಾಲಯ ಕಾಲಾವಕಾಶ ನೀಡಿದರೂ ಕೂಡ ತಮ್ಮ ಮಾತಿಗೆ ರಾಜ್‌ಪಾಲ್ ಯಾದವ್ ಬದ್ದರಾಗಲಿಲ್ಲ ಎಂದು ಹೇಳಿರುವ ಸ್ವರಣಕಾಂತ್ ಶರ್ಮಾ ಡಿಸೆಂಬರ್ 16, 2025 ರೊಳಗೆ ₹40 ಲಕ್ಷ ಮತ್ತು ಈ ವರ್ಷದ ಜನವರಿ 15 ರೊಳಗೆ ಉಳಿದ ₹2.1 ಕೋಟಿ. ಹಣ ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಹೇಳಿದ್ದರು ಆದರೆ ಇಲ್ಲಿಯವರೆಗೆ ಹಣ ಪಾವತಿಯಾಗಿಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಎರಡು ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ಜಮಾ ಮಾಡಲಾಗಿದ್ದರೂ, 9 ಕೋಟಿ ರೂಪಾಯಿ ಇನ್ನೂ ಬಾಕಿ ಇದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿರುವ ನ್ಯಾಯಾಧೀಶರು, ನ್ಯಾಯಾಲಯದ ಮುಂದೆ ನೀಡಲಾದ ಭರವಸೆಗಳನ್ನು ಪದೇ ಪದೇ ಉಲ್ಲಂಘಿಸಿದ, ಹಣವನ್ನು ಪಾವತಿ ಮಾಡದ ರಾಜ್‌ಪಾಲ್ ಯಾದವ್ ಉಲ್ಲಂಘನೆಯ ದೃಷ್ಟಿಯಿಂದ, ಜೈಲು ಅಧಿಕಾರಿಗಳ ಮುಂದೆ ನಾಳೆ (ಫೆಬ್ರವರಿ 4) ಸಂಜೆ 4 ಗಂಟೆಯೊಳಗೆ ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ಜಡ್ಜ್ ಸ್ವರಣ ಕಾಂತ್ ಶರ್ಮಾ ಆದೇಶಿಸಿದ್ದಾರೆ. ಫೆಬ್ರವರಿ 5ರಂದು ಮತ್ತೆ ವಿಚಾರಣೆಯನ್ನು ನಡೆಸುವುದಾಗಿ ಹೇಳಿದ್ದಾರೆ.

https://www.newsics.com/2026/02/04/mother-and-children-commit-suicide-on-railway-tracks-after-writing-a-death-note/

TAGGED:High Court orders famous actor Rajpal Yadav to surrender to police
Share This Article
Facebook Twitter Copy Link Print
Previous Article ಡೆತ್‌ನೋಟ್ ಬರೆದಿಟ್ಟು ರೈಲ್ವೇ ಹಳಿಯಲ್ಲಿ ತಾಯಿ- ಮಕ್ಕಳು ಆತ್ಮ*ಹತ್ಯೆಗೆ ಶರಣು
Next Article ಅಧಿಕಾರದ ಆಸೆಗೆ ಆರು ವರ್ಷದ ಮಗಳನ್ನುಕಾಲುವೆಗೆ ನೂಕಿ ಕೊಲೆ ಮಾಡಿದ ತಂದೆ

Popular Posts

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read

You Might Also Like

ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read
ಪ್ರಮುಖ

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read
ಪ್ರಮುಖ

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?