https://youtu.be/yWrDals90_k?si=YgVuBw0EmkSzsDVh
Subscribe ನ್ಯೂಸಿಕ್ಸ್ ಕನ್ನಡ
newsics.com
ವಾಟ್ಸಾಪ್ ತನ್ನ ಬಳಕೆದಾರರ ಮಾಹಿತಿಯನ್ನು ತನ್ನದೇ ಮಾತೃ ಸಂಸ್ಥೆಯಾದ ಮೆಟಾ ಜೊತೆ ಹಂಚಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಾಟ್ಸಾಪ್, ಮೆಟಾ ಮತ್ತು ಭಾರತೀಯ ಸ್ಪರ್ಧಾ ಆಯೋಗ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಂತ್ರಜ್ಞಾನ ಕಂಪನಿಗಳ ಡೇಟಾ ಹಂಚಿಕೆ ಮತ್ತು ಮಾರುಕಟ್ಟೆ ಪ್ರಾಬಲ್ಯದ ಕುರಿತು ಕೆಂಡಾಮಂಡಲವಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಅಮೆರಿಕ ಮೂಲದ ಈ ಸಂಸ್ಥೆಗೆ ಎಚ್ಚರಿಕೆ ನೀಡಿದರು. ನಮ್ಮ ದೇಶದ ಖಾಸಗಿತನದ ಜೊತೆ ಆಟವಾಡಲು ನಿಮಗೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ದತ್ತಾಂಶದ ಒಂದು ಸಣ್ಣ ಅಂಕಿಯನ್ನೂ ನೀವು ಇತರರೊಂದಿಗೆ ಹಂಚಿಕೊಳ್ಳಲು ನಾವು ಬಿಡುವುದಿಲ್ಲ. ಎಂದಿದ್ದಾರೆ. ಅಲ್ಲದೇ , ಒಂದು ವೇಳೆ ನೀವು ದೇಶದ ಕಾನೂನುಗಳನ್ನು ಪಾಲಿಸಲು ವಿಫಲರಾದರೆ, ನೀವು ಭಾರತವನ್ನು ಬಿಟ್ಟು ಹೋಗಬಹುದು, ಎಂದು ಎಚ್ಚರಿಸಿದ್ದಾರೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಈ ದೇಶದ ಜನರ ಖಾಸಗಿತನದ ವಿಷಯದಲ್ಲಿ ಆಟವಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ. ವಾಟ್ಸಾಪ್ ಸಂಗ್ರಹಿಸುವ ಬಳಕೆದಾರರ ವೈಯಕ್ತಿಕ ಮಾಹಿತಿ, ಚಾಟ್ ವಿವರ ಅಥವಾ ಇತರ ಡೇಟಾಗಳನ್ನು ವ್ಯವಹಾರಿಕ ಉದ್ದೇಶಕ್ಕಾಗಿ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಂತಹ ಮೆಟಾ ವೇದಿಕೆಗಳೊಂದಿಗೆ ಹಂಚಿಕೊಳ್ಳುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ.ಈ ತೀರ್ಪು ಭಾರತದ ಲಕ್ಷಾಂತರ ವಾಟ್ಸಾಪ್ ಬಳಕೆದಾರರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ. ಬಳಕೆದಾರರ ಅನುಮತಿ ಇಲ್ಲದೆ ಅವರ ಡೇಟಾ ದುರ್ಬಳಕೆಯಾಗುವುದನ್ನು ಇದು ತಡೆಯಲಿದೆ. ತಂತ್ರಜ್ಞಾನದ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕಾದ ಖಾಸಗಿತನವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಕಂಪನಿಗಳು ಭಾರತದ ಕಾನೂನು ಮತ್ತು ಜನರ ಗೌಪ್ಯತೆಯನ್ನು ಗೌರವಿಸಲೇಬೇಕು ಎಂದು ಕೋರ್ಟ್ ಹೇಳಿದೆ.