https://youtu.be/yWrDals90_k?si=Dm2hNd9sW0zpqle6
Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ ಬಾಸ್ ಕಾವು ಅಲಿಯಾಸ್ ಕಾವ್ಯ ಅಭಿಮಾನಿಗಳ ಪ್ರೀತಿಗೆ ಋಣಿಯಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಇಷ್ಟೆಲ್ಲ ಪ್ರೀತಿ ಸಿಗುತ್ತೆ ಎನ್ನುವ ನಿರೀಕ್ಷೆಯನ್ನು ಕಾವ್ಯ ಮಾಡಿರಲಿಲ್ಲ. ಆದ್ರೆ ಬಿಗ್ ಬಾಸ್ ಮುಗಿದು ಎರಡು ವಾರವಾದ್ರೂ ಇನ್ನೂ ಕಾವ್ಯ ಹುಡುಕಿಕೊಂಡು ಫ್ಯಾನ್ಸ್ ಮನೆಗೆ ಬರ್ತಿದ್ದಾರೆ. ಕಾವ್ಯ ಸ್ವಭಾವ ಹೊಗಳ್ತಿದ್ದಾರೆ. ಇದು ಕಾವ್ಯ ಸಂತೋಷವನ್ನು ಡಬಲ್ ಮಾಡಿದೆ.
ಇದೀಗ ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ಕಾವ್ಯ ಶೈವ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಜತೆಗೆ ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ತಿಳಿಸಿದ್ದಾರೆ.
ಬಿಗ್‌ಬಾಸ್‌ಗೆ ಹೋಗುವ ಮೊದಲು ಒಂದಷ್ಟು ಜನರು ಪಿಆರ್‌ಗಳು ಇಲ್ಲದೇ ಜನರನ್ನು ತಲುಪುವುದಿಲ್ಲ ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಆದರೂ ಧೈರ್ಯ ಮಾಡಿ ಎಷ್ಟು ಜನಕ್ಕಾದರೂ ತಲುಪಲಿ ಎಂದು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಆದರೆ ಹೊರಗಡೆ ಬಂದು ನೋಡಿದ ಮೇಲೆ ನನಗೆ ಅಚ್ಚರಿ ಆಯ್ತು. ನನ್ನ ಕುರಿತಾದ ವಿಡಿಯೊಗಳು, ಫೋಟೊಗಳನ್ನು ನೋಡಿ ಖುಷಿಯಾಗಿದೆ. ಅದಕ್ಕೆ ನಿಮಗೆ ಧನ್ಯವಾದ ತಿಳಿಸುತ್ತೇನೆ’ ಎಂದರು.
‘ಟ್ಯಾಟೂ ಹಾಕಿಸಿಕೊಂಡವರ ಬಗ್ಗೆ ಮಾತನಾಡಲೇಬೇಕು. ನಾನು ಇದಕ್ಕೆ ಬೆಂಬಲ ನೀಡುತ್ತಿಲ್ಲ. ಜೀವನ ಪೂರ್ತಿ ನಿಮ್ಮ ಚರ್ಮದ ಮೇಲೆ ಉಳಿದುಕೊಳ್ಳುತ್ತದೆ. ಅದರ ಬಗ್ಗೆ ಅಷ್ಟು ಖುಷಿಯಾಗುತ್ತದೆ. ಅಷ್ಟೇ ಬೇಸರ ಕೂಡ ಆಗುತ್ತದೆ. ನೀವುಗಳು ಖುಷಿಯಿಂದ ಮಾತನಾಡಿಸುತ್ತೀರ. ಅದೇ ಸಾಕು. ದಯವಿಟ್ಟು ಟ್ಯಾಟೂ ಹಾಕಿಸಿಕೊಳ್ಳಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
https://www.newsics.com/2026/02/03/get-pass-for-30000-oracle-employees/