Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ನೂ ಒಂದು ವಾರ ಮುಂದುವರೆಯಲಿದೆ ಚಳಿ
ಕರ್ನಾಟಕಪ್ರಮುಖ

ಇನ್ನೂ ಒಂದು ವಾರ ಮುಂದುವರೆಯಲಿದೆ ಚಳಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ರಾಜ್ಯದಲ್ಲಿ ಮುಂದಿನ ಒಂದು ವಾರ ಚಳಿಯ ವಾತಾವರಣ ಮುಂದುವರಿಯಲಿದ್ದು, ಅಲ್ಲಲ್ಲಿ ತುಂತುರು ಮಳೆ ಬೀಳಲಿದೆ ಹಾಗೆಯೇ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಹಲವೆಡೆ ತೀವ್ರ ಚಳಿ ಮತ್ತು ಒಣಹವೆಯ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದಿರಬೇಕೆಂದು ಹವಾಮಾನ ಇಲಾಖೆ ಸಲಹೆ ನೀಡಿದೆ.

ಬೆಂಗಳೂರಿನಲ್ಲಿ ಚಳಿಯ ವಾತಾವರಣ ಇರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬೆಚ್ಚಗಿನ ಉಡುಪು ಧರಿಸುವಂತೆ ಹಾಗೂ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣಹವೆ ಮುಂದುವರಿದಿದ್ದು, ಇಂದೂ ಇದೇ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಇದೇ ರೀತಿ ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಮಾಹಿತಿ ನೀಡಲಾಗಿದೆ.
ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ತೀವ್ರ ಚಳಿಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಜನರು ಬೆಚ್ಚಗಿನ ಹೊದಿಕೆ ಬಳಸಿ, ಬಿಸಿ ಆಹಾರ ಸೇವನೆ ಮಾಡುವಂತೆ ಹಾಗೂ ಸಮತೋಲನ ಆಹಾರಕ್ಕೆ ಒತ್ತು ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಗುಡ್ ನ್ಯೂಸ್: ಮತ್ತೆ ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ

TAGGED:The weather department has said that cold weather will continue in the state for the next weekwith scattered showers and dry weather.
Share This Article
Facebook Twitter Copy Link Print
Previous Article Health ಫ್ಯಾಮಿಲಿ ಪ್ಲ್ಯಾನಿಂಗ್‌ಗೆ ಬೆಸ್ಟ್ ಟೈಮ್ ಯಾವುದು? ತಜ್ಞರು ಹೇಳೋದೇನು? ನಿಮ್ಮ ಪ್ಲ್ಯಾನ್ ಏನು?
Next Article ಅನಸೂಯ ಮೈಕ್ ಬಿಸಾಕಿ ಹೋದಳು, ರಶ್ಮಿ ಈ ರೀತಿ ಹೇಳಿದ್ಯಾಕೆ?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?