Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸಾವಿಗೂ ಮುನ್ನ 9 ಪುಟದ ಡೆತ್‌ನೋಟ್‌ ಬರೆದಿದ್ದ ಸಿಜೆ ರಾಯ್‌
ಕರ್ನಾಟಕಪ್ರಮುಖ

ಸಾವಿಗೂ ಮುನ್ನ 9 ಪುಟದ ಡೆತ್‌ನೋಟ್‌ ಬರೆದಿದ್ದ ಸಿಜೆ ರಾಯ್‌

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಐಟಿ ದಾಳಿಯ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕಷ್ಟು ಬೆಳವಣಿಗೆಗಳಾಗಿದ್ದು, ಭಾನುವಾರ ಅವರ ಅಂತ್ಯಸಂಸ್ಕಾರ ಕೂಡ ನೆರವೇರಿದೆ.
ಇದರ ನಡುವೆ ಅವರು 9 ಪುಟಗಳ ಡೆತ್‌ನೋಟ್‌ ಬರೆದಿದ್ದಾರೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.
ಸಿ.ಜೆ. ರಾಯ್ ಆತ್ಮಹತ್ಯೆಗೂ ಮುನ್ನ 9 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಅವರ ಕುಟುಂಬದವರೇ ನೀಡಿದ್ದಾರೆ. ಈ ಪತ್ರದಲ್ಲಿ ಅವರು ಐಟಿ ದಾಳಿ, ಮಾನಸಿಕ ಒತ್ತಡ ಅಥವಾ ಉದ್ಯಮದಲ್ಲಿನ ಬಿಕ್ಕಟ್ಟುಗಳ ಬಗ್ಗೆ ಉಲ್ಲೇಖಿಸಿರಬಹುದು ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೂ ಮುನ್ನವೇ ಅವರು ಈ ಬಗ್ಗೆ ಕುಟುಂಬದವರಿಗೆ ಸುಳಿವು ನೀಡಿದ್ದರು ಎನ್ನಲಾಗಿದೆ.
ರಾಯ್ ಅವರ ಇಚ್ಛೆಯಂತೆಯೇ ಅವರಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ. ಅವರು ಇಷ್ಟಪಡುತ್ತಿದ್ದ ದುಬಾರಿ ಬ್ಲೇಜರ್, ಸನ್ ಗ್ಲಾಸ್ ಹಾಗೂ ಬ್ರ್ಯಾಂಡೆಡ್ ಶೂ ಧರಿಸಿಯೇ ಅವರ ಅಂತಿಮ ವಿಧಿವಿಧಾನ ಭಾನುವಾರ ನೆರವೇರಿದೆ.
ಜೀವನ ಸಾಗಿಸುವುದು ಕಷ್ಟ ಎಂದ ರಾಯ್‌ ಸಹೋದರ
“ನನ್ನ ಮತ್ತು ರಾಯ್ ನಡುವೆ ಜನವರಿ 30ರಂದು ಕೊನೆಯ ಮಾತುಕತೆಯಾಗಿತ್ತು. ನಾನು ಮದುವೆಗೆ ಹೋಗಿದ್ದಾಗ ಫೋನ್ ಮಾಡಿ ‘ಯಾವಾಗ ಬರ್ತೀಯಾ? ನಿನ್ನ ಜೊತೆ ಮಾತನಾಡಬೇಕು’ ಅಂದಿದ್ದರು. ಈಗ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ, ಜೀವನ ಸಾಗಿಸುವುದು ಕಷ್ಟವಾಗಿದೆ. ಸರ್ಕಾರ ಎಸ್‌ಐಟಿ (SIT) ರಚನೆ ಮಾಡಿದೆ, ತನಿಖೆಯಲ್ಲಿ ಸತ್ಯ ಹೊರಬರಲಿ ಎಂದು ಕಾಯುತ್ತಿದ್ದೇವೆ.” ಎಂದು ಸಹೋದರ ಬಾಬು ಹೇಳಿದ್ದಾರೆ.
ಕಾಂಗ್ರೆಸ್‌ ನಾಯಕ ಮೊಹಮದ್‌ ನಲಪಾಡ್‌, “ರಾಯ್ ಅವರ ಪುತ್ರ ರೋಹಿತ್ ಈಗ ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಅವರು ಮಾತನಾಡಲು ಶಕ್ತಿ ಇಲ್ಲದಷ್ಟು ಸುಸ್ತಾಗಿದ್ದಾರೆ. ಸದ್ಯಕ್ಕೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಅವರ ಕುಟುಂಬ ಇಲ್ಲ, ಮುಂದೊಂದು ದಿನ ಸುದ್ದಿಗೋಷ್ಠಿ ನಡೆಸಿ ಸತ್ಯವನ್ನು ತಿಳಿಸಲಿದ್ದಾರೆ’ ಎಂದರು. “ಕಷ್ಟದ ಸಮಯದಲ್ಲಿ ಸಹಕರಿಸಿದ ಮಾಧ್ಯಮಗಳಿಗೆ ಧನ್ಯವಾದಗಳು. ನಮ್ಮ ಕುಟುಂಬ ನಿಮ್ಮ ಸಹಕಾರಕ್ಕೆ ಆಭಾರಿಯಾಗಿದೆ.” ಎಂದು ಪುತ್ರ ರೋಹಿತ್‌ ಹೇಳಿದ್ದಾರೆ.
ಸರ್ಕಾರ ಈಗಾಗಲೇ ಈ ಹೈಪ್ರೊಫೈಲ್ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ. ಸಿ.ಜೆ. ರಾಯ್ ಅವರ 9 ಪುಟಗಳ ಡೆತ್ ನೋಟ್‌ನಲ್ಲಿ ಇರುವ ವಿಷಯಗಳೇನು? ಐಟಿ ಅಧಿಕಾರಿಗಳ ವಿಚಾರಣೆಯ ವೇಳೆ ಏನಾಯಿತು? ಎಂಬ ಪ್ರಶ್ನೆಗಳಿಗೆ ಎಸ್‌ಐಟಿ ಉತ್ತರ ಕಂಡುಕೊಳ್ಳಬೇಕಿದೆ.

ಅನಸೂಯ ಮೈಕ್ ಬಿಸಾಕಿ ಹೋದಳು, ರಶ್ಮಿ ಈ ರೀತಿ ಹೇಳಿದ್ಯಾಕೆ?

TAGGED:CJ Royinformed his family before his death!the businessman who wrote a 9-page death note
Share This Article
Facebook Twitter Copy Link Print
Previous Article ಅನಸೂಯ ಮೈಕ್ ಬಿಸಾಕಿ ಹೋದಳು, ರಶ್ಮಿ ಈ ರೀತಿ ಹೇಳಿದ್ಯಾಕೆ?
Next Article ಕಾನ್ಫಿಡೆಂಟ್ ಗ್ರೂಪ್‌ನ ಹೊಸ ನಾಯಕತ್ವ ಘೋಷಿಸಿದ ಕುಟುಂಬ

Popular Posts

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

You Might Also Like

ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?