newsics.com
ದೇಶದಲ್ಲಿ ಏಪ್ರಿಲ್ ನಿಂದ ನೂತನ ಐಟಿ ಕಾಯ್ದೆ ಜಾರಿಗೆ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ವಿದೇಶ ಯಾತ್ರೆ ಇನ್ಮುಂದೆ ಅಗ್ಗವಾಗಲಿದೆ. ಐಟಿ ರಿಟರ್ನ್ ಮಾಡಲು ಜುಲೈ 31ರವರೆಗೆ ಅವಕಾಶ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇ. 100 ರಷ್ಟು ದಂಡ. ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೋಟಾರು ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ. ಶಿಕ್ಷಣ, ಆರೋಗ್ಯ, ಕ್ಷೇತ್ರದಲ್ಲಿ ಶೇ. 2 ರಷ್ಟು TCS ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.
ಯಾವ ವಸ್ತುಗಳ ಬೆಲೆ ಇಳಿಕೆ? ಯಾವ ವಸ್ತುಗಳ ಬೆಲೆ ಏರಿಕೆ
ಮದ್ಯ ಪ್ರಿಯರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಮದ್ಯದ ಬೆಲೆಯಲ್ಲಿ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬೀಡಿ, ಪಾದರಕ್ಷೆ, ಬ್ಯಾಟರಿ ದರ ಇಳಿಕೆಯಾಗಿದೆ.
ಕ್ಯಾನ್ಸರ್ ನ 17 ಔಷಧಗಳ ಬೆಲೆಯಲ್ಲಿ ಇಳಿಕೆಯಾಗಿದೆ.
ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ಯ ಆರಂಭಿಸಲಾಗುವುದು. ಒನ್ ಪ್ರೊಡಕ್ಟ್ ಒನ್ ಸ್ಟೇಟ್ ಯೋಜನೆ ಆರಂಭಿಸಲಾಗುವುದು, ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು. ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ವ್ಯವಸ್ಥೆ ಜಾರಿ, ಹಣಕಾಸು ಹಂಚಿಕೆಗೆ ಕ್ರೆಡಿಟ್ ಗ್ಯಾರಂಟಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಸಾಲದ ನೆರವು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೇಂದ್ರೀಯ ಔಷಧಿ ನಿಯಂತ್ರಣವನ್ನು ಜಾರಿಗೆ ತರುತ್ತಿದ್ದೇವೆ. ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.
AI ಮಿಷನ್ ಮೂಲಕ ದೇಶದಲ್ಲಿ ದೊಡ್ಡ ಕ್ರಾಂತಿ, ವಿದ್ಯಾರ್ಥಿಗಳು, ರೈತರಿಗೆ ಇದರಿಂದ ಅನುಕೂಲವಾಗಲಿದೆ. ಹೊಸದಾಗಿ 3 ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಮಧುಮೇಹ, ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಮಾಡಲಾಗುವುದು, ಪ್ರತಿ ಜಿಲ್ಲೆಗಳಲ್ಲೂ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಎಂದು ಹೇಳಿದ್ದಾರೆ.