Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Wedding Trend ಬದಲಾಯ್ತು ಭಾರತೀಯ ಮದುವೆ ಟ್ರೆಂಡ್! ಕೈತುಂಬಾ ದುಡ್ಡು ಕೊಡುವ ವಿದೇಶಿ ಅತಿಥಿಗಳು‌!
ಅನಾವರಣಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್ವಿದೇಶವೈರಲ್

Wedding Trend ಬದಲಾಯ್ತು ಭಾರತೀಯ ಮದುವೆ ಟ್ರೆಂಡ್! ಕೈತುಂಬಾ ದುಡ್ಡು ಕೊಡುವ ವಿದೇಶಿ ಅತಿಥಿಗಳು‌!

Share
2 Min Read
SHARE

https://youtube.com/shorts/kIkAyfI4sxw?si=aggVueBL3fodeELS

Subscribe ನ್ಯೂಸಿಕ್ಸ್ ಕನ್ನಡ

newsics.com

ಮದುವೆ ಈಗ ಮೊದಲಿನಂತಿಲ್ಲ. ಕಾಲ ಬದಲಾಗಿದೆ. ನಿಮ್ಮ ಮನೆಯ ಮದುವೆಯೇ ನಿಮಗೆ ಲಕ್ಷಾಂತರ ರೂಪಾಯಿ ಸಂಪಾದಿಸಿ ಕೊಡಬಲ್ಲದು. ಹೌದು, ಭಾರತದಲ್ಲೀಗ ‘ವೆಡ್ಡಿಂಗ್ ಟೂರಿಸಂ’ ಹೊಸ ಸಂಚಲನ ಮೂಡಿಸುತ್ತಿದೆ.

ವಿದೇಶಿ ಅತಿಥಿಗಳನ್ನು ನಿಮ್ಮ ಮದುವೆಗೆ ಆಹ್ವಾನಿಸುವ ಮೂಲಕ ಮದುವೆಯ ಟೆಂಟ್ ಮತ್ತು ಅಡುಗೆಯ ಬಿಲ್ ಅನ್ನು ಅವರೇ ಪಾವತಿಸುವಂತೆ ಮಾಡುವ ವಿಶಿಷ್ಟ ಸಂಪ್ರದಾಯವೊಂದು ಶುರುವಾಗಿದೆ.

ಭಾರತೀಯ ವಿವಾಹ ಅಂದ್ರೆ ಅಲ್ಲಿ ಬಣ್ಣ ಬಣ್ಣದ ಉಡುಪುಗಳು, ತಮಟೆ ಸದ್ದು, ಸಖತ್ ಡ್ಯಾನ್ಸ್ ಮತ್ತು ಬಾಯಲ್ಲಿ ನೀರೂರಿಸುವ ಖಾದ್ಯಗಳಿರುತ್ತವೆ. ಈ ಸಂಭ್ರಮವನ್ನು ಸವಿಯಲು ವಿದೇಶಿ ಪ್ರವಾಸಿಗರು ಹಾತೊರೆಯುತ್ತಿದ್ದಾರೆ. ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಸುಸ್ತಾಗಿರುವ ಪ್ರವಾಸಿಗರಿಗೆ, ಭಾರತದ ಅಸಲಿ ಸಂಸ್ಕೃತಿ ತಿಳಿಯಲು ಆಸಕ್ತರಾಗಿದ್ದಾರೆ. ಇದಕ್ಕೆ ಮದುವೆಗಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ. ಅದಕ್ಕಾಗಿಯೇ ಅವರು ಸಂಬಂಧಿಕರಲ್ಲದಿದ್ದರೂ, ಅಪರಿಚಿತರ ಮದುವೆಯಲ್ಲಿ ಭಾಗವಹಿಸಲು ಭಾರೀ ಮೊತ್ತದ ಹಣವನ್ನು ‘ಟಿಕೆಟ್’ ರೂಪದಲ್ಲಿ ನೀಡಲು ಸಿದ್ಧರಿದ್ದಾರೆ.

ಈ ಅದ್ಭುತ ಐಡಿಯಾವನ್ನು ಸಾಕಾರಗೊಳಿಸುತ್ತಿರುವುದು ‘Join My Wedding’ ಎಂಬ ಆನ್‌ಲೈನ್ ಪೋರ್ಟಲ್. ಇದು ಮದುವೆ ಮಾಡಿಕೊಳ್ಳುವ ದಂಪತಿಗಳು ಮತ್ತು ಭಾರತೀಯ ಸಂಸ್ಕೃತಿ ಇಷ್ಟಪಡುವ ವಿದೇಶಿ ಪ್ರವಾಸಿಗರನ್ನು ಬೆಸೆಯುವ ಕೊಂಡಿ. ದಂಪತಿಗಳು ತಮ್ಮ ಮದುವೆಯ ದಿನಾಂಕ ಮತ್ತು ಸ್ಥಳವನ್ನು ಇಲ್ಲಿ ನೋಂದಾಯಿಸಿದರೆ, ಆಸಕ್ತ ವಿದೇಶಿಯರು ಟಿಕೆಟ್ ಖರೀದಿಸಿ ನಿಮ್ಮ ಮದುವೆಗೆ ಅತಿಥಿಗಳಾಗಿ ಬರುತ್ತಾರೆ. ಸಾಂಪ್ರದಾಯಿಕ ಭಾರತೀಯ ಉಡುಪು ಧರಿಸಿ, ಹಸೆಮಣೆಯ ಮುಂದೆ ನಿಂತು ನಿಮ್ಮ ಸಂಭ್ರಮವನ್ನು ದುಪ್ಪಟ್ಟು ಮಾಡುತ್ತಾರೆ.

ಈ ಟ್ರೆಂಡ್ ಕೇವಲ ಬೆಂಗಳೂರು, ಮುಂಬೈ ಅಥವಾ ದೆಹಲಿಯಂತಹ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ. ಅಚ್ಚರಿಯ ವಿಷಯವೆಂದರೆ, ಪಾಟ್ನಾ ಮತ್ತು ಬರೇಲಿಯಂತಹ ಸಣ್ಣ ನಗರಗಳ ಮದುವೆಗಳಿಗೂ ವಿದೇಶಿ ಅತಿಥಿಗಳು ಆಗಮಿಸುತ್ತಿದ್ದಾರೆ.

ಕಳೆದ ಡಿಸೆಂಬರ್ ಒಂದೇ ತಿಂಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಮದುವೆಗಳು ಈ ಪೋರ್ಟಲ್‌ನಲ್ಲಿ ನೋಂದಣಿಯಾಗಿವೆ. ಇದರಿಂದ ಬರುವ ಆದಾಯವು ಮದುವೆಯ ಅದ್ಧೂರಿ ಅಲಂಕಾರ ಅಥವಾ ಅಡುಗೆಯ ವೆಚ್ಚ ಸರಿದೂಗಿಸಲು ದಂಪತಿಗಳಿಗೆ ನೆರವಾಗುತ್ತಿದೆ.

ನಿಮ್ಮ ಮದುವೆಗೂ ವಿದೇಶಿ ಅತಿಥಿಗಳು ಬರಲಿ, ಹೆಚ್ಚಿನ ಆದಾಯ ಬರಲಿ ಎಂದು ನೀವು ಬಯಸಿದರೆ, ನೀವು https://www.joinmywedding.com ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಮದುವೆಯ ಸಂಪೂರ್ಣ ವಿವರಗಳನ್ನು ಅಲ್ಲಿ ಪಟ್ಟಿ ಮಾಡಬೇಕು. ಅಲ್ಲಿ ನಿಗದಿಪಡಿಸಿದ ಟಿಕೆಟ್ ದರವನ್ನು ಪ್ರವಾಸಿಗರು ಪಾವತಿಸುತ್ತಾರೆ. ಈ ಹಣವು ನೇರವಾಗಿ ನಿಮ್ಮ ಕೈ ಸೇರುತ್ತದೆ. ಇದರಿಂದ ನಿಮಗೆ ಆರ್ಥಿಕ ಲಾಭದ ಜತೆಗೆ, ವಿದೇಶಿ ಸ್ನೇಹಿತರನ್ನು ಸಂಪಾದಿಸುವ ಹೊಸ ಅನುಭವವೂ ಸಿಗುತ್ತದೆ.

ಆಯುಷ್ಮಾನ್ ಭಾರತ್ ಯೋಜನೆ: ಸಂತಾನೋತ್ಪತ್ತಿ ಚಿಕಿತ್ಸೆ ಸೇರ್ಪಡೆ

ನಾ ಡ್ರೈವರಾ… ಹಾಡಿಗೆ ಸೊಂಟ ಕುಣಿಸಿದ ಶ್ರೇಯಾಂಕಾ; ಬಿದ್ದುಬಿದ್ದು ನಕ್ಕ ಸ್ಮೃತಿ ಮಂಧನಾ, ವೈರಲ್ ವಿಡಿಯೋ ನೋಡಿ

TAGGED:Indian wedding trend has changed! Foreign guests who pay a lot of money!
Share This Article
Facebook Twitter Copy Link Print
Previous Article 75 ವರ್ಷದ ಸಂಪ್ರದಾಯ ಮುರಿಯುತ್ತಾರಾ ನಿರ್ಮಲಾ ಸೀತಾರಾಮನ್?
Next Article ತ್ರಿವಳಿ ಹತ್ಯೆ; ಗುಂಡಿಗೆ ಶವ ಹಿಡಿಸ್ಲಿಲ್ಲ ಎಂದು ತಂದೆ ಕಾಲೇ ಕತ್ತರಿಸಿದ ಪಾಪಿ ಪುತ್ರ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?