https://youtube.com/shorts/2dkIPQOWaBI?si=cdUsYCqLlm8EKSlH
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ, ಗನ್ ತೋರಿಸಿ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ದಾಸನಪುರದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ದಾಸನಪುರದಲ್ಲಿ ರಾಮದೇವ್ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ,ಅಂಗಡಿ ಮಾಲೀಕನಿಗೆ ಪ್ಲಾಸ್ಟಿಕ್ ಗನ್ ತೋರಿಸಿ 27 ಗ್ರಾಂ ಚಿನ್ನದ ಸರ, 50 ಸಾವಿರ ನಗದು ದರೋಡೆ ಮಾಡಿ, ದರೋಡೆಕೋರರು ಪರಾರಿ ಯಾಗಿದ್ದಾರೆ.
ಬೈಕ್ ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಕೃತ್ಯವೆಸಗಿದ್ದಾರೆ. ದರೋಡೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.newsics.com/2026/01/28/how-to-use-apple-peels-to-make-your-face-glow/