https://youtube.com/shorts/yWrDals90_k?si=qTyTxtvMLgrsr7gN
Subscribe ನ್ಯೂಸಿಕ್ಸ್ ಕನ್ನಡ
newsics.com
ಕೊಣಾಜೆ: ಚಿತ್ರ ಕಲಾವಿದ, ಸಂಗೀತ ಸಂಯೋಜಕ ಮುಡಿಪು ನಿವಾಸಿ ಸತೀಶ್ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮುಡಿಪು ಮಿತ್ತಬರೆ ಸಮೀಪ ನಡೆದಿದೆ.
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕುಟುಂಬದ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಶಯಿಸಲಾಗಿದೆ.
ಮುಡಿಪುವಿನಲ್ಲಿ ಸುಮಾರು ಮೂರೂವರೆ ದಶಕಗಳಿಂದ ‘ಸ್ವಾತಿ ಆರ್ಟ್ಸ್’ ಹೆಸರಿನಲ್ಲಿ ಬ್ಯಾನರ್ ಬರೆಯುವುದು ಸಹಿತ ಲಲಿತ ಕಲೆಗೆ ಸಂಬಂಧಿಸಿ ಸೃಜನಶೀಲ ಚಟುವಟಿಕೆಗಳನ್ನು ನಡೆಸುತ್ತಿದ್ದ ಅವರು ಗುರುಮುಖೇನ ಚಿತ್ರ ಅಥವಾ ಸಂಗೀತ ಕಲಿತವರಲ್ಲ. ಸ್ವಯಂ ಆಸಕ್ತಿಯಿಂದ ಚಿತ್ರಕಲೆ ಹಾಗೂ ಸಂಗೀತ ಕಲಿತು ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ಜೀವನ ಸಾಗಿಸುತ್ತಿದ್ದರು. ಸ್ವತಃ ಕೀಬೋರ್ಡ್ ಪ್ಲೇಯರ್ ಆಗಿ ಸಾವಿರಾರು ಕಾರ್ಯಕ್ರಮಗಳಿಗೆ ಸಂಗೀತ ಸಾಥ್ ನೀಡುತ್ತಿದ್ದರು. ಸ್ವತಃ ಸಂಗೀತ ಸಂಯೋಜಕರೂ ಆಗಿದ್ದರು. ಕೀಬೋರ್ಡ್ ತರಗತಿ ನಡೆಸಿ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣವನ್ನೂ ನೀಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪರದೆ ಸಹಿತ ರಂಗಸಜ್ಜಿಕೆ, ಮೇಕಪ್, ಸಿಮೆಂಟ್ ಶಿಲ್ಪ, ಕ್ರಾಫ್ಟಿಂಗ್, ಬ್ಯಾನರ್ ಕ್ಷೇತ್ರಗಳಲ್ಲೂ ದುಡಿದ ಸೃಜನಶೀಲರಾಗಿದ್ದರು.
ಕರ್ನಾಟಕದ 8 ಮಂದಿ ಸಹಿತ 131 ಮಂದಿಗೆ ಪದ್ಮ ಗೌರವ; ಮಮ್ಮುಟ್ಟಿಗೆ ಪದ್ಮಭೂಷಣ