Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಳ್ಳಾರಿ: ಬಳ್ಳಾರಿಯ ಬ್ಯಾನರ್ ಗಲಾಟೆ ಮಾಸೋ ಮುನ್ನವೇ ಮತ್ತೊಂದು ಕೃತ್ಯವನ್ನು ಎಸಗಲಾಗಿದೆ. ಜಿಲ್ಲೆಯ ಜಿ ಸ್ಕ್ರೈರ್ ಲೇಔಟ್ ನಲ್ಲಿ ಇರುವಂತ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದಂತ ಮಾಡೆಲ್ ಹೌಸ್ ಗೆ ಬೆಂಕಿ ಇಡಲಾಗಿದೆ.
ಕೈ ಶಾಸಕ ಭರತ್ ರೆಡ್ಡಿ ಬೆಂಬಲಿಗರೇ ಇನ್ನು ಮಾಡಿರುವುದು ಎಂಬುದಾಗಿ ಬಳ್ಳಾರಿಯಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ಶಾಸಕ ಭರತ್ ರೆಡ್ಡಿ ವಿರುದ್ಧ ಸೋಮಶೇಖರ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಕಿ ಹಚ್ಚಿದಂತ ಘಟನಾ ಸ್ಥಳಕ್ಕೆ ಪೊಲೀಸರು ಕೂಡಲೇ ಬಂದಿದ್ದಾರೆ. ಇದನ್ನು ನಾವು ಬಿಡಲ್ಲ. ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದಿದ್ದಾರೆ.