Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಫಿನಾಲೆ ತಲುಪಿದ್ದ ಮ್ಯೂಟಂಟ್ ರಘು ಅವರ ಜರ್ನಿ ಐದನೇ ಸ್ಥಾನಕ್ಕೆ ಕೊನೆಯಾಗಿದೆ. ವೀಕ್ಷಕರ ಮತಯುದ್ಧದಲ್ಲಿ ರಘು ಅವರಿಗೆ ಐದನೇ ಸ್ಥಾನ ಲಭಿಸಿದೆ. ಧನುಷ್ ಗೌಡ ಅವರು ಆರನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್-12 ರ ಅಂತಿಮ 6 ಸ್ಪರ್ಧಿಗಳ ಪೈಕಿಯಲ್ಲಿ ಮ್ಯೂಟಂಟ್ ರಘು ಕೂಡ ಒಬ್ಬರಾಗಿದ್ದರು. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯ ಶೈವ, ಧನುಷ್ ಗೌಡ ಫೈನಲಿಸ್ಟ್ ಸ್ಪರ್ಧಿಗಳಾಗಿದ್ದರು. ಇದೀಗ ಧನುಷ್ 6ನೇ ಸ್ಥಾನ ಪಡೆದುಕೊಂಡ್ರೆ ರಘು ಅವರು ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರು. ಮ್ಯುಟೆಂಟ್ ರಘು ಅವರ ಪೂರ್ಣ ಹೆಸರು ರಾಘವೇಂದ್ರ ಎಸ್ ಹೊಂಡಕೇರಿ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ ಶೋನಲ್ಲಿ ಇವರು ವಿನ್ನರ್ ಆಗಿದ್ದರು. ಅಲ್ಲಿಂದ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು.