Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 50 ವರ್ಷದಿಂದ ಈ ವ್ಯಕ್ತಿ ನಿದ್ರೆಯೇ ಮಾಡಿಲ್ಲವಂತೆ
ದೇಶಪ್ರಮುಖ

50 ವರ್ಷದಿಂದ ಈ ವ್ಯಕ್ತಿ ನಿದ್ರೆಯೇ ಮಾಡಿಲ್ಲವಂತೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

50 ವರ್ಷದಿಂದ ವ್ಯಕ್ತಿಯೊರ್ವ ನಿದ್ರೆ ಮಾಡಿರದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

ರೇವಾ ನಗರದ ಚಾಣಕ್ಯಪುರಿ ಕಾಲೋನಿಯ ನಿವಾಸಿ 75 ವರ್ಷದ ಮೋಹನ್ ಲಾಲ್ ದ್ವಿವೇದಿ ಅವರು ಸುಮಾರು 50 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆಶ್ಚರ್ಯದ ಸಂಗತಿ ಏನೆಂದರೆ ಇಷ್ಟು ದೀರ್ಘಾವಧಿಯ ನಿದ್ರಾಹೀನತೆಯ ನಡುವೆಯೂ, ಅವರು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿಲ್ಲ. ಎಲ್ಲರಂತೆ ಸಾಮಾನ್ಯವಾಗಿಯೇ ಬದುಕುತ್ತಿದ್ದಾರೆ.
ವೈದ್ಯರು ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ಕಾಲ ನಿದ್ರೆ ಅಗತ್ಯ ಎಂದು ಹೇಳುತ್ತಾರೆ. 7 ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೂಡ ಹೇಳುತ್ತಾರೆ. ಆದರೆ, ಈ ವ್ಯಕ್ತಿ 50 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲ ಎಂಬುದು ವೈದ್ಯರಿಗೂ ಆಶ್ಚರ್ಯ ಮೂಡಿಸಿದೆ.
ಮೋಹನ್ ಲಾಲ್ ಆರಂಭದಲ್ಲಿ ಮೋಹನ್ ಲಾಲ್ ತಾನು ನಿದ್ರೆ ಮಾಡುವುದಿಲ್ಲ ಎಂಬ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಅವರು ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದರು. ಆದರೂ ಅವರ ಕಣ್ಣುಗಳು ಉರಿಯುತ್ತಿರಲಿಲ್ಲ, ಅಥವಾ ಅದು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಈ ಬಗ್ಗೆ ಅವರು ತಮ್ಮ ಕುಟುಂಬಕ್ಕೆ ಹೇಳಿದಾಗ ಅವರು ಮೊದಲು ಭೂತೋಚ್ಚಾಟನೆ ಮಾಡಿಸಿದರು. ಆದರೂ ಏನೂ ಪ್ರಯೋಜನವಾಗದೆ ಇದ್ದಾಗ ದೆಹಲಿ ಮತ್ತು ಮುಂಬೈನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸಿದರು. ಮೋಹನ್ ಅವರ ಮೇಲೆ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ ಅವರ ನಿದ್ರೆಯ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.
ಹಾಗಂತ ಮೋಹನ್ ಲಾಲ್ ಸಾಮಾನ್ಯ ವ್ಯಕ್ತಿಯೇನಲ್ಲ. ಮೋಹನ್ ಲಾಲ್ ದ್ವಿವೇದಿ 1973ರಲ್ಲಿ ಉಪನ್ಯಾಸಕರಾಗಿದ್ದರು. ನಂತರ 1974ರಲ್ಲಿ MPPSCಯಲ್ಲಿ ಉತ್ತೀರ್ಣರಾದರು ಮತ್ತು ನಯಬ್ ತಹಶೀಲ್ದಾರ್ ಆದರು. ಅವರು 2001ರಲ್ಲಿ ಜಂಟಿ ಕಲೆಕ್ಟರ್ ಆಗಿ ನಿವೃತ್ತರಾದರು. ಅವರ ನಿದ್ರೆಯ ಸಮಸ್ಯೆಗಳು 1973ರ ಸುಮಾರಿಗೆ ಪ್ರಾರಂಭವಾದವು. ಅಂದಿನಿಂದ ಅವರು ನಿದ್ರಾಹೀನತೆಯನ್ನು ಅನುಭವಿಸುತ್ತಲೇ ಇದ್ದಾರೆ.

ಮೋಹನ್ ಲಾಲ್ ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ಅವರು ರಾತ್ರಿಯಲ್ಲಿ ಟೆರೇಸ್ ಮೇಲೆ ವಾಕಿಂಗ್ ಮಾಡುತ್ತಾ ಬೆಳಗಾಗುವುದನ್ನೇ ಕಾಯುತ್ತಾರೆ. ಕುತೂಹಲಕಾರಿಯಾಗಿ, ಅವರ ಪತ್ನಿ ಕೂಡ ದಿನಕ್ಕೆ 3ರಿಂದ 4 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಾರೆ. ಮೋಹನ್ ಅವರಿಗೆ ಮಾನಸಿಕ ಸಮಸ್ಯೆಯೂ ಇಲ್ಲ, ದೈಹಿಕ ಸಮಸ್ಯೆಯೂ ಇಲ್ಲ. ಹೀಗಿದ್ದರೂ ಅವರಿಗೆ ಯಾಕೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮಾತ್ರ ವೈದ್ಯರಿಗೆ ಇನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಹೇಳಿದ್ದೇನು?

TAGGED:This man looks like he hasn't slept in 50 years.
Share This Article
Facebook Twitter Copy Link Print
Previous Article ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಹೇಳಿದ್ದೇನು?
Next Article ಚಳಿಗಾಲದಲ್ಲಿ ದೇಹದಲ್ಲಿರುವ ಪ್ಲೇಟ್‌ಲೆಟ್‌ ಕಡಿಮೆಯಾಗುವುದಕ್ಕೆ ಕಾರಣವೇನು?

Popular Posts

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read
ಕರ್ನಾಟಕಪ್ರಮುಖ

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read
ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?