Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪ್ರೇಯಸಿಯೊಂದಿಗೆ ಮಂಚದಲ್ಲಿದ್ದಾಗಲೇ ಪತಿರಾಯನನ್ನು ಪತ್ನಿ ರೆಡ್ಹ್ಯಾಂಡ್ ಆಗಿ ಲಾಕ್ ಮಾಡಿದ್ದಾಳೆ. ಜೆಡ್ರೆಲಾ ಜಾಕೂಬ್ ಆರೂಪ್, ಬೆಂಗಳೂರಿನ ಟೆಕ್ಕಿ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ಜೊತೆ ವಾಸವಿದ್ದ. ಈತನ ಪತ್ನಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಆರಂಭದಲ್ಲಿ ಆರೋಪಿಗೆ ಕೆಲಸ ಇರಲಿಲ್ಲ. ಹೀಗಾಗಿ ಪತ್ನಿ, ತನ್ನ ಕೆಲಸವನ್ನೇ ಪತಿಗೆ ಕೊಡಿಸಿದ್ದಳು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ತನ್ನ ಕೆಲಸವನ್ನ ಪತಿಗೆ ಕೊಡಿಸಿದ್ದಳು ಎನ್ನಲಾಗಿದೆ.
ಮಗು ಜನಿಸಿದ ಬಳಿಕ ಪತ್ನಿಯ ಮೇಲೆ ಜಾಕೂಬ್ ಜಾತಿ ನಿಂದನೆ ನಡೆಸಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಗರ್ಭಪಾತವಾಗುವ ರೀತಿಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ.
ಈ ನಡುವೆ ಪತ್ನಿಗೆ ತಿಳಿಯದೆ ಜಾಕೂಬ್ ಮತ್ತೊಬ್ಬ ಯುವತಿಯೊಂದಿಗೆ ಸಹವಾಸ ಬೆಳೆಸಿ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದ. ಈ ವಿಚಾರ ತಿಳಿದ ಪತ್ನಿ, ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಪತ್ನಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಎಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದಕ್ಕೆ ದಾಳಿ ನಡೆಸಿದಾಗ, ಪ್ರೇಯಸಿಯೊಂದಿಗೆ ಪಲ್ಲಂಗದ ಮೇಲೆಯೇ ಇದ್ದ ಜಾಕೂಬ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.