Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇಂದು ಭಾನುವಾರ (ಜನವರಿ 11) ವರಿಷ್ಠ ಯೋಗ, ನವಪಂಚಮ ಯೋಗ, ಸುಕರ್ಮ ಯೋಗದ ಜತೆ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ. ಇದು ಈ ದಿನದ ಮಹತ್ವ ಹೆಚ್ಚಿಸಲಿದೆ. ಭಾನುವಾರ ರೂಪುಗೊಳ್ಳುವ ಈ ಶುಭ ಯೋಗಗಳ ಪ್ರಭಾವವನ್ನು ಕೆಲವು ರಾಶಿಗಳ ಮೇಲೆ ಕಾಣಬಹುದು. ಜ್ಯೋತಿಷ್ಯದ ಪ್ರಕಾರ, ಈ ದಿನದಂದು ರೂಪುಗೊಳ್ಳುವ ಶುಭ ಯೋಗದಿಂದ ಕೆಲವು ರಾಶಿಗೆ ಸೇರಿದ ಜನರು ಹೆಚ್ಚಿನ ಪ್ರಯೋಜನ ಪಡೆಯುವರು.
ಮೇಷ
ಮೇಷ ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಪ್ರಗತಿ ದೊರಕುವುದರೊಂದಿಗೆ ಜೀವನದಲ್ಲಿ ಅತ್ಯಂತ ಹೆಚ್ಚಿನ ಸಂತೋಷದ ಆಗಮನವಾಗುವುದು. ಈ ಅವಧಿಯಲ್ಲಿ ಮೇಷ ರಾಶಿಗೆ ಸೇರಿದ ಜನರ ಕುಟುಂಬ ಜೀವನ ಸುಖಮಯವಾಗಿರುವುದು. ಹಾಗೆ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಪಡೆಯುವ ಯೋಗವಿದೆ. ಇದರೊಂದಿಗೆ ಪಾಲುದಾರಿಕೆಯಲ್ಲಿ ಕೆಲಸವನ್ನು ಮಾಡುವ ಜನರಿಗೆ ಬಹಳಷ್ಟು ಪ್ರಯೋಜನಗಳಾಗುವುದು. ಜೊತೆಗೆ ನಿಮಗೆ ಅತ್ಯಂತ ಹೆಚ್ಚಿನ ಲಾಭ ದೊರಕುವ ಅವಕಾಶ ಕೂಡ ಲಭಿಸಲಿದೆ. ಕೆಲಸ ಮತ್ತು ವ್ಯಾಪಾರ ಮಾಡುವ ಮೇಷ ರಾಶಿಗೆ ಸೇರಿದವರಿಗೆ ಈ ಅವಧಿಯಲ್ಲಿ ಪ್ರಗತಿಗಾಗಿ ಉತ್ತಮ ಅವಕಾಶ ದೊರಕುವುದರೊಂದಿಗೆ ನಿಮ್ಮ ಆದಾಯದೊಂದಿಗೆ ಗೌರವ, ಖ್ಯಾತಿ ಕೂಡ ಹೆಚ್ಚಾಗುವುದು.
ಕರ್ಕಾಟಕ
ಕರ್ಕಾಟಕ ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಶುಭವಾಗಿರುವುದು. ಈ ರಾಶಿಗೆ ಸೇರಿದ ಜನರ ಸುಖ, ಸಮೃದ್ಧಿಯಲ್ಲಿ ಬಹಳಷ್ಟು ವೃದ್ದಿಯಾಗಲಿದೆ. ಮನೆ ಅಥವಾ ವಾಹನ ಖರೀದಿಸಬೇಕು ಎಂಬ ಕನಸನ್ನು ಕಾಣುತ್ತಿರುವ ಕರ್ಕಾಟಕ ರಾಶಿಯವರ ಆಸೆಯು ಈ ಅವಧಿಯಲ್ಲಿ ಈಡೇರುವ ಯೋಗವಿದೆ. ಈ ಸಂದರ್ಭದಲ್ಲಿ ನಿಮಗೆ ಸಾಕಷ್ಟು ಶುಭವಾಗಲಿದೆ. ಹಾಗೆ ನಾಳೆ ನಿಮ್ಮ ಮಾವನಿಂದ ಶುಭ ಸುದ್ಧಿ ಲಭಿಸುವ ಸಾಧ್ಯತೆ ಇದೆ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಗತಿಯನ್ನು ಗಳಿಸುವಿರಿ ಮತ್ತು ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವವು.
ಕನ್ಯಾ
ಕನ್ಯಾ ರಾಶಿಗೆ ಸೇರಿದ ಜನರಿಗೆ ಬಹಳ ಲಾಭದಾಯಕವಾದ ದಿನವಾಗಿರುವುದು. ದಿನದ ಆರಂಭವು ಶುಭ ಸಮಾಚಾರದೊಂದಿಗೆ ಪ್ರಾರಂಭವಾಗಲಿದೆ. ಮನೆಯವರ ಸಂಪೂರ್ಣ ಬೆಂಬಲದಿಂದ ಭಾನುವಾರದ ದಿನ ನಿಮಗೆ ಸುಖಮಯವಾಗಿರುವುದು. ಹೊರಗೆ ಸುತ್ತಾಡಲು ತೆರಳಲು ಉತ್ತಮ ದಿನವಾಗಿರಲಿದೆ. ನಿಮ್ಮ ಕಠಿಣ ಪರಿಶ್ರಮದಿಂದ ನಿಮ್ಮ ಆದಾಯ ಹೆಚ್ಚಾಗುವುದರೊಂದಿಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ವೃದ್ಧಿಯಾಗುವುದು. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಲಾಭ ಗಳಿಸಲು ಉತ್ತಮ ಅವಕಾಶಗಳನ್ನು ಪಡೆಯುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳುವುದು.
ತುಲಾ
ತುಲಾ ರಾಶಿಗೆ ಸೇರಿದ ಜನರಿಗೆ ಭಾನುವಾರದ ದಿನ ಅದೃಷ್ಟಶಾಲಿಯಾಗಿರುವುದು. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ದೊರಕುವುದರಿಂದ ನಿಮ್ಮ ಆದಾಯ ಕೂಡ ವೃದ್ಧಿಯಾಗಲಿದೆ. ವ್ಯಾಪಾರ, ವ್ಯವಹಾರ ಮಾಡುವ ಜನರಿಗೆ ಲಾಭ ದೊರಕಲಿದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಇನ್ನಷ್ಟು ಬಲಗೊಳ್ಳುವುದು. ನೀವು ಸ್ನೇಹಿತರ ಬೆಂಬಲ ಕೂಡ ಗಳಿಸುವಿರಿ. ಜತೆಗೆ ನಿಮ್ಮ ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಸಂಬಂಧಿಕರನ್ನು ಭೇಟಿಯಾಗುವುದರಿಂದ ಸಾಕಷ್ಟು ಸಹಾಯ ಕೂಡ ದೊರಕುವುದು. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಪಡೆಯುವುದರ ಜತೆಗೆ ನಿಮ್ಮಿಬ್ಬರ ನಡುವಿನ ಪ್ರೀತಿಯ ಸಂಬಂಧ ಇನ್ನಷ್ಟು ಬಲಗೊಳ್ಳುವುದು.
ಮಕರ
ಮಕರ ರಾಶಿಗೆ ಸೇರಿದ ಜನರಿಗೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಬಹಳ ಶುಭವಾಗಿರುವುದು. ಕೆಲಸ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಉತ್ತಮ ದಿನವಾಗಿರುವುದು. ನಿಮ್ಮ ಕೆಲಸಗಳೆಲ್ಲವೂ ಬಹಳ ಸುಲಭವಾಗಿ ಪೂರ್ಣಗೊಳ್ಳುವುದರೊಂದಿಗೆ ನಿಮ್ಮ ಆದಾಯವು ಕೂಡ ವೃದ್ಧಿಯಾಗುವುದು. ಅದೃಷ್ಟದ ಸಂಪೂರ್ಣ ಬೆಂಬಲದಿಂದ ಲಾಭಕ್ಕಾಗಿ ಉತ್ತಮ ಅವಕಾಶಗಳು ಪ್ರಾಪ್ತಿಯಾಗುವವು. ಹಾಗೆ ಯಾವುದಾದರೂ ಪಿತ್ರಾರ್ಜಿತ ಸಂಪತ್ತಿನಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗುವುದು. ಹಾಗಾಗಿ ನೀವು ಸಾಕಷ್ಟು ಸಂತೋಷದಿಂದಿರುವಿರಿ. ಹೊಸ ಜನರನ್ನು ಭೇಟಿಯಾಗುವ ಉತ್ತಮ ಅವಕಾಶ ಲಭಿಸಲಿದೆ. ಇದರಿಂದಾಗಿ ಸಾಕಷ್ಟು ಲಾಭವನ್ನು ಸಹ ಗಳಿಸುವಿರಿ.