Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್‌ ಕನಸು; ಕಿಚ್ಚನಿಂದ ಸಿಕ್ತು ಚಪ್ಪಾಳೆ, ಕಾರಣವೇನು ?
ಪ್ರಮುಖಮನರಂಜನೆ

ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್‌ ಕನಸು; ಕಿಚ್ಚನಿಂದ ಸಿಕ್ತು ಚಪ್ಪಾಳೆ, ಕಾರಣವೇನು ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ, ಮನೆಯಲ್ಲಿ ಕಿಚ್ಚ ಸುದೀಪ್ ಅವರು ಈ ಸೀಸನ್‌ನ ಕೊನೆಯ ಮತ್ತು ಅತ್ಯಂತ ಮಹತ್ವದ ‘ಕಿಚ್ಚನ ಚಪ್ಪಾಳೆ’ಯನ್ನು ಘೋಷಿಸಿದ್ದಾರೆ. ಮನೆಯೊಳಗಿನ ಬಹುಸಂಖ್ಯಾತ ಗುಂಪಿನ ವಿರುದ್ಧ ಏಕಾಂಗಿಯಾಗಿ ಹೋರಾಡಿ ತಮ್ಮ ಅಸ್ತಿತ್ವ ಉಳಿಸಿಕೊಂಡ ಅಶ್ವಿನಿ ಗೌಡ ಮತ್ತು ಧ್ರುವಂತ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಮನೆಯಲ್ಲಿ ಭಾರಿ ಸಂಘರ್ಷ ಬಿಗ್ ಬಾಸ್ ಮನೆಯಲ್ಲಿ ಅಂತಿಮ ವಾರದಲ್ಲಿ ಉಳಿದಿದ್ದ ಎಂಟು ಸ್ಪರ್ಧಿಗಳು ಅಕ್ಷರಶಃ ಎರಡು ತಂಡಗಳಾಗಿ ವಿಭಜನೆಯಾಗಿದ್ದರು. ಅಶ್ವಿನಿ ಗೌಡ ಮತ್ತು ಧ್ರುವಂತ್ ಕೇವಲ ಇಬ್ಬರೇ ಒಂದು ತಂಡವಾಗಿ ಗುರುತಿಸಿಕೊಂಡಿದ್ದರು.
ಇನ್ನೊಂದೆಡೆ ಗಿಲ್ಲಿ ನಟ, ಕಾವ್ಯಾ ಶೈವ, ಮ್ಯೂಟೆಂಟ್ ರಘು, ರಾಶಿಕಾ, ಧನುಷ್ ಗೌಡ ಮತ್ತು ರಕ್ಷಿತಾ ಶೆಟ್ಟಿ ಸೇರಿ ಆರು ಜನರ ಒಂದು ಬಲಿಷ್ಠ ಗುಂಪಾಗಿದ್ದರು. ಇದಕ್ಕೆ ಕಾರಣ ಹೇಳಿದ ಗಿಲ್ಲಿ ನಟ, ಅವರನ್ನು ಕಂಡರೆ ಮನೆಯವರಿಗೆ ಯಾರಿಗೂ ಇಷ್ಟವಾಗುತ್ತಿರಲಿಲ್ಲ ಎಂದು ಸಮಜಾಯಿಷಿ ಕೊಡಲು ಮುಂದಾಗುತ್ತಾನೆ. ಆದರೆ, ಅದನ್ನು ಕಿಚ್ಚ ಸುದೀಪ್ ಒಪ್ಪಿಕೊಳ್ಳುವುದಿಲ್ಲ.
ಮನೆಯಲ್ಲಿ ಆರು ಜನರ ಗುಂಪು ಪ್ರತಿ ಬಾರಿಯೂ ತಮ್ಮನ್ನು ಕೆಳಗಿಟ್ಟು ಮಾತನಾಡುತ್ತಿದ್ದರು ಮತ್ತು ಹೀಯಾಳಿಸುತ್ತಿದ್ದರು ಎಂಬ ಗಂಭೀರ ಆರೋಪವನ್ನು ಅಶ್ವಿನಿ ಗೌಡ ಕಿಚ್ಚನ ಮುಂದೆ ವ್ಯಕ್ತಪಡಿಸಿದರು. “ಅವರ ಗುಂಪಿನಲ್ಲಿ ಸೇರಿ ಅವಮಾನಿಸಿಕೊಳ್ಳುವುದಕ್ಕಿಂತ ದೂರ ಉಳಿದು ನನ್ನ ವ್ಯಕ್ತಿತ್ವ ಉಳಿಸಿಕೊಳ್ಳುವುದು ನನಗೆ ಮುಖ್ಯವಾಗಿತ್ತು,” ಎಂದು ಅವರು ತಿಳಿಸಿದರು.
ಇದಕ್ಕೆ ಧ್ರುವಂತ್ ಕೂಡ ಧ್ವನಿಗೂಡಿಸಿ, ‘ನನ್ನ ಆಟವೇನು ಎಂಬುದು ನನಗೆ ಗೊತ್ತು, ಈ ಮನೆಗೆ ನನ್ನಿಂದ ಏನು ಕೊಡಬೇಕೋ ಅದನ್ನು ಕೊಡುತ್ತಿದ್ದೇನೆ. ಅವರ ಹಂಗು ನಮಗೆ ಬೇಕಿಲ್ಲ’ ಎಂದು ತಮ್ಮ ಗಟ್ಟಿತನವನ್ನು ಪ್ರದರ್ಶಿಸಿದರು.
ಇಡೀ ವಾರದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ ಸುದೀಪ್ ಅವರು ಈ ಇಬ್ಬರ ಹೋರಾಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ನನಗೆ ಈ ವಾರ ಕಂಡಿದ್ದು ಒಬ್ಬ ವ್ಯಕ್ತಿಯ ಹಠ ಮತ್ತು ಗುರಿ. ಎಲ್ಲಿ ಅವಮಾನಗಳಾಗುತ್ತವೆಯೋ ಅಲ್ಲಿಯೇ ಹೋರಾಡಿ, ಯಾವ ಬಾಯಿಗಳು ನಿಮ್ಮನ್ನು ತೆಗಳಿದ್ದವೋ ಅದೇ ಬಾಯಿಗಳಿಂದ ಹೊಗಳಿಸಿಕೊಳ್ಳುವುದೇ ನಿಜವಾದ ಗೆಲುವು,” ಎಂದು ನುಡಿದರು.

ಈ ಸೀಸನ್‌ನ ಕೊನೆಯ ಕಿಚ್ಚನ ಚಪ್ಪಾಳೆಯನ್ನು ನಾನು ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ನೀಡುತ್ತಿದ್ದೇನೆ’ ಎನ್ನುತ್ತಾ ಸುದೀಪ್ ಚಪ್ಪಾಳೆ ತಟ್ಟಿದಾಗ ಇಡೀ ವೇದಿಕೆ ಸಂಭ್ರಮದಿಂದ ಮಿಂಚಿತು. ಈ ಬೆಳವಣಿಗೆಯು ಅಶ್ವಿನಿ ಮತ್ತು ಧ್ರುವಂತ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು, ಫಿನಾಲೆ ರೇಸ್‌ನಲ್ಲಿ ಇವರು ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ.

https://www.instagram.com/reel/DTUtbBpj0SG/?igsh=MWd2YWZ4NW5vZ2xndw==

ಮನೆಯ ಅಡಿಪಾಯ ತೆಗೆಯುವಾಗ ನಿಧಿ ಪತ್ತೆ;ಎಷ್ಟು ಕೆಜಿ?

TAGGED:Ashwini GowdaDhruvanth's dream finally came true; applause from the audiencewhat is the reason?
Share This Article
Facebook Twitter Copy Link Print
Previous Article ಮನೆಯ ಅಡಿಪಾಯ ತೆಗೆಯುವಾಗ ನಿಧಿ ಪತ್ತೆ;ಎಷ್ಟು ಕೆಜಿ?
Next Article ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ; ಭವಿಷ್ಯ ನುಡಿದ ಕೋಡಿ ಶ್ರೀ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?