Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇರಾನ್ : ಇರಾನ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ ತೀವ್ರಗೊಂಡಿದ್ದು, ಇದುವರೆಗೆ 35 ಜನ ಮೃತಪಟ್ಟಿದ್ದಾರೆ ಹಾಗೂ 1,200 ಮಂದಿ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇರಾನ್ನಲ್ಲಿ ಇತ್ತೀಚೆಗೆ ಆರ್ಥಿಕ ಸಮಸ್ಯೆಗಳು ಮತ್ತು ಆಡಳಿತದ ವಿರುದ್ಧ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದಿವೆ. ಈ ಪ್ರತಿಭಟನೆಗಳು 2019ರಷ್ಟು ತೀವ್ರವಾಗಿಲ್ಲದಿದ್ದರೂ, ದೇಶದಾದ್ಯಂತ ಹಲವು ನಗರಗಳಲ್ಲಿ ಹರಡಿವೆ, ಆರ್ಥಿಕ ಸಂಕಷ್ಟ ಮತ್ತು ಹಣದುಬ್ಬರ ಇದರ ಹಿಂದಿನ ಪ್ರಮುಖ ಕಾರಣಗಳು.
ದೇಶದಾದ್ಯಂತ ಹಲವು ನಗರಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಪ್ರತಿಭಟನೆಗಳನ್ನು ‘ಗಲಭೆಗಳು’ ಎಂದು ಕರೆದಿದ್ದು, ವಿದೇಶಿ ಶಕ್ತಿಗಳ ಕೈವಾಡದ ಆರೋಪ ಮಾಡಿದ್ದಾರೆ ಮತ್ತು ಕಠಿಣ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ.
https://www.newsics.com/2026/01/06/delcy-rodriguez-sworn-in-as-venezuelas-interim-president/