Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಳಿ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.ಐಎಂಡಿ ಪ್ರಕಾರ, ಬೆಂಗಳೂರು ಸೇರಿದಂತೆ ಮುಂದಿನ ಎರಡು ಮೂರು ವಾರಗಳಲ್ಲಿ ಶೀತ ವಾತಾವರಣ ಮರಳುವ ಸಾಧ್ಯತೆಯಿದೆ.
ಬಂಗಾಳಕೊಲ್ಲಿಯಿಂದ ಬೀಸುವ ಪೂರ್ವ ಮಾರುತಗಳು ತಾತ್ಕಾಲಿಕ ತಾಪಮಾನ ಏರಿಕೆಗೆ ಕಾರಣವೆಂದು ಹೇಳಲಾಗಿದ್ದು, ಇದು ಪ್ರದೇಶದ ಮೇಲೆ ತೇವಾಂಶ ಮತ್ತು ಮೋಡ ಕವಿದ ವಾತಾವರಣವನ್ನು ಹೆಚ್ಚಿಸಿದೆ.
ಕರ್ನಾಟಕದ ಮಧ್ಯ ಮತ್ತು ಉತ್ತರ ಜಿಲ್ಲೆಗಳು ತಡರಾತ್ರಿ ಮತ್ತು ಮುಂಜಾನೆ ತೀವ್ರ ಶೀತ ಪರಿಸ್ಥಿತಿ ಮತ್ತು ದಟ್ಟವಾದ ಮಂಜನ್ನು ಎದುರಿಸುತ್ತಲೇ ಇದ್ದಾವೆ. ಈ ಮಧ್ಯೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಕಳೆದ ಎರಡು ದಿನಗಳಿಂದ ಪ್ರತ್ಯೇಕ ಮಳೆಯನ್ನು ವರದಿ ಮಾಡಿದೆ.
ಜನವರಿ ಅಂತ್ಯದವರೆಗೆ ಚಳಿಗಾಲ ಮುಂದುವರಿಯುತ್ತವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಜನವರಿ 5 ಅಥವಾ 6 ರ ನಂತರ ಬೆಂಗಳೂರಿನಲ್ಲಿ ರಾತ್ರಿ ತಾಪಮಾನವು ಮತ್ತೆ ಕಡಿಮೆಯಾಗುವ ನಿರೀಕ್ಷೆಯಿದೆ.