Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಿಗಾಲದಲ್ಲಿ ಮಾಂಸಹಾರ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಚಳಿಗಾಲ ಬಂದೊಡನೆ ನಾನ್-ವೆಜ್ ಪ್ರಿಯರಿಗೆ ರುಚಿಕರವಾದ ಕಾಲು ಸೂಪ್, ಮಟನ್ ಕರಿ, ಚಿಕನ್ ಬಿರಿಯಾನಿ ಸವಿಯುವ ಆಸೆ ಹೆಚ್ಚಾಗುತ್ತದೆ. ಆದರೆ ಈ ಬಾರಿ ದೊಡ್ಡ ಶಾಕ್ ಸಿಕ್ಕಿದೆ. ಮಟನ್, ಚಿಕನ್ , ಮೊಟ್ಟೆ ದರ ದಿನೇ ದಿನೇ ಹೆಚ್ಚಾಗುತ್ತಿದೆ. ಅಂಗಡಿಯಲ್ಲಿ ನಾನ್ ವೆಜ್ ಬೆಲೆ ಕೇಳಿದ್ರೆನೇ ಮಾಂಸಹಾರ ಪ್ರಿಯರಿಗೆ ದೊಡ್ಡ ಆಘಾತವಾಗುತ್ತಿದೆ. ಚಿಕನ್, ಮಟನ್, ಕೊನೆ ಪಕ್ಷ ಮೊಟ್ಟೆ ತಿನ್ನಬೇಕು ಅಂದ್ರೂ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಈ ವರ್ಷದ ಆರಂಭದಲ್ಲಿ ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ.
ಕಳೆದ ಕೆಲವು ದಿನಗಳಲ್ಲಿ 200 -250 ರವರೆಗೆ ಇದ್ದ ಒಂದು ಕೆಜಿ ಕೋಳಿ ಮಾಂಸದ ಬೆಲೆ ಇದ್ದಕ್ಕಿದ್ದಂತೆ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಒಂದು ಕೆಜಿ ಕೋಳಿ ಮಾಂಸದ ಬೆಲೆ ಟ್ರಿಪಲ್ ಸೆಂಚುರಿಯನ್ನು ತಲುಪಿದ್ದು, 300 ರೂ.ಗೆ ಏರುತ್ತಿದೆ.
ಕೋಳಿ ಮಾಂಸ ಮಾತ್ರವಲ್ಲ.. ಕೋಳಿ ಮೊಟ್ಟೆಯ ಬೆಲೆಯೂ ಗ್ರಾಹಕರನ್ನು ಬೆಚ್ಚಿಬೀಳಿಸುತ್ತಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 8 ರೂ. ಇದೆ. ಕೋಳಿ ಮಾಂಸ ಮತ್ತು ಮೊಟ್ಟೆಗಳ ಬೆಲೆ ಏರಿಕೆಯನ್ನು ನೋಡಿ, ಬೆಲೆಗಳು ಇಷ್ಟೊಂದು ಹೆಚ್ಚಾದರೆ, ಅದನ್ನು ಯಾರು ತಿನ್ನುತ್ತಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಒಂದು ಕೆಜಿ ಬ್ರಾಯ್ಲರ್ ಕೋಳಿ ಮಾಂಸದ ಬೆಲೆ 300 ರೂ.ಗಳಿದ್ದರೆ, ಒಂದು ಕೆಜಿ ಜೀವಂತ ಕೋಳಿ ಮಾಂಸದ ಬೆಲೆ 170 ರೂ.ಗಳಾಗಿದೆ.
https://www.newsics.com/2026/01/05/do-you-take-a-bath-with-the-geyser-on/