Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪುರುಷರ ತಂಡಕ್ಕಿಂತ ಮೊದಲು ಆರ್‌ಸಿಬಿ ಮಹಿಳೆಯರ ತಂಡ ನಮ್ಮ ಬೆಂಗಳೂರಿಗೆ ಕಪ್ ತಂದಿದ್ದು ಸಂಭ್ರಮ ತಂದಿತ್ತು. ಹೀಗಿದ್ದಾಗ 2025 ಐಪಿಎಲ್ ಗೆದ್ದು ಪುರುಷರ ತಂಡ ಕೂಡ ಬೆಂಗಳೂರಿಗೆ ಕಪ್ ತಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಮಹಿಳೆಯರ ಪ್ರಿಮಿಯರ್ ಲೀಗ್ ಶುರುವಾಗಲಿದೆ. ಇಷ್ಟೆಲ್ಲದರ ನಡುವೆ ಆರ್‌ಸಿಬಿ ಮಹಿಳಾ ತಂಡದಿಂದ ಎಲ್ಲಿಸ್ ಪೆರ‍್ರಿ ಹೊರ ಬಿದ್ದಿದ್ದಾರೆ.
2026ರ ಜ.9ರಿಂದ ಫೆ.5ರವರೆಗೆ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯ ನಡೆಯಲಿದ್ದು, ಈ ಟೂರ್ನಿಯಲ್ಲಿ ಆರ್‌ಸಿಬಿಯ ಎಲ್ಲಿಸ್ ಪೆರ‍್ರಿ , ಯುಪಿ ವಾರಿಯರ್ಸ್‌ನ ತಾರಾ ನರ‍್ರಿಸ್ ಹಾಗೂ ದೆಹಲಿ ಕ್ಯಾಪಿಟಲ್ಸ್‌ನ ಅನ್ನಾಬೆಲ್ ಸದರ್ಲ್ಯಾಂಡ್ ಹೊರಗುಳಿದಿದ್ದಾರೆ ಎಂದು WPL ಎಕ್ಸ್‌ನಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ಆಸ್ಟ್ರೇಲಿಯಾದ ಆಲ್ ರೌಂಡರ್‌ಗಳಾದ ಎಲ್ಲಿಸ್ ಪೆರ‍್ರಿ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ವೈಯಕ್ತಿಕ ಕಾರಣಗಳಿಂದ WPL 2026ರ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಆರ್‌ಸಿಬಿ ತಂಡ ಪೆರ‍್ರಿ ಬದಲಾಗಿ ಸಯಾಲಿ ಸತ್‌ಘರೆ ಅವರನ್ನು, ದೆಹಲಿ ಕ್ಯಾಪಿಟಲ್ಸ್ ತಂಡವು ಸದರ್ಲ್ಯಾಂಡ್ ಬದಲಾಗಿ ಅಲಾನಾ ಕಿಂಗ್ ಅವರನ್ನು ಹೆಸರಿಸಿದೆ.
2026ರ ಜ.18ರಿಂದ ಫೆ.1ರವರೆಗೆ ನೇಪಾಳದಲ್ಲಿ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಅರ್ಹತಾ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಯುಎಸ್ ನ್ಯಾಷನಲ್ ಟೀಮ್‌ಗೆ ತಾರಾ ನರ‍್ರಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಜ.9ರಿಂದ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ತಾರಾ ನರ‍್ರಿಸ್ ಅವರು ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಯುಪಿ ವಾರಿಯರ್ಸ್ ತಂಡವು ಆಸ್ಟ್ರೇಲಿಯಾದ ಆಲ್ ರೌಂಡರ್ ಚಾರ್ಲಿ ನಾಟ್ ಅವರನ್ನು ಬದಲಿಯಾಗಿ ಆಯ್ಕೆಮಾಡಿಕೊಂಡಿದೆ.
https://www.newsics.com/2025/12/31/these-rules-will-change-from-tomorrow/