Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಹಿಳೆಯೊಬ್ಬರು ಬಸ್ ನಲ್ಲಿ ಟಿಕೆಟ್ ಖರೀದಿ ಮಾಡಿದ ಬಳಿಕ ಪೇಮೆಂಟ್ ಮಾಡುವ ವೇಳೆ ಗೂಗಲ್ ಪೇ ಕೈಕೊಟ್ಟಿದೆ. ಇದಕ್ಕೆ ಕೆಎಸ್ಆರ್ಟಿಸಿ ಕಂಡಕ್ಟರ್ ಮಹಿಳಾ ಪ್ರಯಾಣಿಕರನ್ನು ನಡುರಾತ್ರಿಯಲ್ಲಿ ಪರಿಗಣಿಸದೆ ನಿರ್ದಾಕ್ಷಿಣ್ಯವಾಗಿ ಆಕೆಯನ್ನು ಅರ್ಥ ದಾರಿಯಲ್ಲಿ ಕೆಳಗಿಳಿಸಿದ್ದಾನೆ.
ಕೊಟ್ಟಾಯಂವಿಲಾ ಮೂಲದ ದಿವ್ಯಾ (28) ಅವರನ್ನು ಬಸ್ ಕಂಡಕ್ಟರ್ ಬಸ್ನಿಂದ ಹೊರಗೆಸೆದಿದ್ದಾರೆ.
ದೂರುದಾರರಾದ ದಿವ್ಯಾ ವೆಲ್ಲರದ ಮೂಲದವರಾಗಿದ್ದು, ಕುನ್ನತುಕಲ್ನಲ್ಲಿರುವ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿದ್ದಾರೆ.ದಿವ್ಯಾ ಸಾಮಾನ್ಯವಾಗಿ ತನ್ನ ಕೆಲಸ ಮುಗಿಸಿ ರಾತ್ರಿ 9.45 ರ ಸುಮಾರಿಗೆ ನೆಯ್ಯಟ್ಟಿಂಕರದಿಂದ ಕೊನೆಯ ಬಸ್ನಲ್ಲಿ ಮನೆಗೆ ಪ್ರಯಾಣಿಸುತ್ತಾರೆ. ಅವರಿಗೆ ಆರೋಗ್ಯ ಸಮಸ್ಯೆಗಳಿರುವುದರಿಂದ, ಘಟನೆಯ ದಿನ ರಾತ್ರಿ 8.30 ರ ಸುಮಾರಿಗೆ ಮನೆಗೆ ಹೊರಟು ಕೂನಂಬನೈನಿಂದ ಬಸ್ ಹತ್ತಿದ್ದರು. ಈ ವೇಳೆ ನಾನು ಪರ್ಸ್ ಮರೆತುಹೋಗಿದ್ದೆ. ಆದರೆ, ಗೂಗಲ್ ಪೇ ಬಳಸಿ ಟಿಕೆಟ್ ಖರೀದಿ ಮಾಡಬಹುದು ಎನ್ನುವ ಕಾರಣಕ್ಕೆ ಬಸ್ ಹತ್ತಿದ್ದೆ ಎಂದಿದ್ದಾರೆ.
ಕೇವಲ 18 ರೂಪಾಯಿ ಟಿಕೆಟ್ಅನ್ನು ಯುವತಿ ಖರೀದಿ ಮಾಡಿದ್ದಳು. ಆದರೆ, ಈ ಹಣವನ್ನು ಗೂಗಲ್ ಪೇ ಮೂಲಕ ಪಾವತಿ ಮಾಡಲು ಆಗಿರಲಿಲ್ಲ. ಇದರಿಂದಾಗಿ ಕಂಡಕ್ಟರ್ ಯುವತಿಯನ್ನು ಅಲ್ಲಿಯೇ ಬಸ್ನಿಂದ ಹೊರಹಾಕಿದ್ದಾನೆ. ಬಳಿಕ ಯುವತಿ ರಾತ್ರಿಯ ವೇಳೆ ಎರಡೂವರೆ ಕಿಲೋಮೀಟರ್ ನಡೆದು ಮನೆ ತಲುಪಿದ್ದಾರೆ. ಆ ಬಳಿಕ ಈಕೆ ಈ ವಿಚಾರವಾಗಿ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಿದ್ದಾಳೆ.
https://www.newsics.com/2025/12/31/iranian-president-hits-back-at-trumps-warning/