Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚೊಚ್ಚಲ ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಆತಂಕದಲ್ಲಿ, ಪತಿಯೊಬ್ಬ ಆಕೆಯನ್ನೇ ಮನೆಯಲ್ಲೇ ಮರೆತು ಲಗೇಜ್ ಸಮೇತ ಕಾರಿನಲ್ಲಿ ಒಬ್ಬನೇ ಹೊರಟು ಹೋದ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ತಡರಾತ್ರಿ ಗರ್ಭಿಣಿ ಮಹಿಳೆ ಪಾರ್ಕಿಂಗ್ ಮಾಡಿದ ಕಾರಿನ ಸಮೀಪ ನಿಂತುಕೊಂಡಿದ್ದಾರೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಕೆ ತನ್ನ ಗಂಡನ ಬಳಿ ಬೇಗ ಬೇಗ ಸಿದ್ಧಗೊಳ್ಳುವಂತೆ ಹೇಳುವುದನ್ನು ಕಾಣಬಹುದು. ಇದಾಗಿ ಸೆಕೆಂಡ್‌ನಲ್ಲಿ ಆಕೆಯ ಪತಿ ಮನೆಯಿಂದ ಎರಡು ಟ್ರಾಲಿ ಬ್ಯಾಗ್ ಹಾಗೂ ಸಣ್ಣ ಬ್ಯಾಗ್‌ಗಳನ್ನು ಹಿಡಿದುಕೊಂಡು ಬಂದು ಕಾರಿನ ಹಿಂಭಾಗಕ್ಕೆ ಹಾಕಿದ್ದಾನೆ. ನಂತರ ಕಾರಿನ ಡಿಕ್ಕಿಯ ಬಾಗಿಲು ದಢಾರ್ ಎಂದು ಹಾಕಿದ ಆತ ಕಾರಿನೊಳಗೆ ಹೆಂಡ್ತಿ ಕೂತಿದ್ದಾಳೋ ಇಲ್ಲವೋ ಎಂಬುದನ್ನು ಕೂಡ ಗಮನಿಸದೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹೆಂಡ್ತಿಯನ್ನು ಅಲ್ಲೇ ಬಿಟ್ಟು ಸೀದಾ ಹೋಗಿ ಡ್ರೈವಿಂಗ್ ಸೀಟಿನಲ್ಲಿ ಕುಳಿತು ಗಾಡಿ ಓಡಿಸಿ ಹೊರಟು ಹೋಗಿದ್ದಾನೆ.
ವೀಡಿಯೋದಲ್ಲಿ ಗರ್ಭಿಣಿ ಕಾರಿಗೆ ಏರುವುದಕ್ಕೆ ಮುಂಭಾಗದ ಸೀಟಿನತ್ತ ಹೋಗುವುದನ್ನು ಕೂಡ ನೋಡಬಹುದು. ಆದರೆ ಪತಿ ಅತ್ತಿತ್ತ ನೋಡದೇ ಸೀದಾ ಹೊರಟು ಹೋಗಿದ್ದಾನೆ.
ಆದರೆ ಇತ್ತಾ ಗಂಡನ ಈ ಅವತಾರ ನೋಡಿ ಆಕೆ ಶಾಕ್ ಆಗಿದ್ದಾಳೆ. ಅತ್ತ ನಾಯಿಯೊಂದು ಆ ಕಾರನ್ನು ಓಡಿಸಿಕೊಂಡು ಹೋಗವುದನ್ನು ಕೂಡ ನೋಡಬಹುದು. ಆದರೆ ನಂತರ ಆ ಮಹಿಳೆಯನ್ನು ನೆರೆಮನೆಯವರು ಆಸ್ಪತ್ರೆಗೆ ಸೇರಿಸಿದ್ದು, ಆಕೆ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ.
https://www.instagram.com/reel/DRXlB4NEltx/?igsh=MWE3MnUwZmlreWxtOA==