Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Mobile Camera ಹಳೆಯ ಫೋನ್‌ನಿಂದ ಮಾಡಿ ಮನೆಗೆ ಸೆಕ್ಯುರಿಟಿ ಕ್ಯಾಮೆರಾ
ಲೈಫ್‌ಸ್ಟೈಲ್

Mobile Camera ಹಳೆಯ ಫೋನ್‌ನಿಂದ ಮಾಡಿ ಮನೆಗೆ ಸೆಕ್ಯುರಿಟಿ ಕ್ಯಾಮೆರಾ

Share
2 Min Read
SHARE

 

ಮಾರುಕಟ್ಟೆಯಲ್ಲಿ ಇಂದು ದಿನಕ್ಕೊಂದರಂತೆ ಹೊಸ ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿವೆ. ಹೀಗಾಗಿ ಜನರು ತಮ್ಮಲ್ಲಿರುವ ಹಳೆಯ ಮೊಬೈಲ್ ಅನ್ನು ಮೂಲೆಗೆ ಬಿಸಾಕಿ ಆಕರ್ಷಕ ಫೀಚರ್ಗಳುಳ್ಳ ಹೊಸ ಸ್ಮಾರ್ಟ್ಫೋನ್ ಖರೀದಿ ಮಾಡುತ್ತಿದ್ದಾರೆ. ಆದರೆ, ಹೀಗೆ ಹೊಸ ಫೋನ್ ಕೊಂಡು ಕೊಂಡ ತಕ್ಷಣ ಹಳೆಯ ಫೋನ್ಗಳನ್ನು ಮೂಲೆಗೆ ಎಸೆಯುವ ಅಗತ್ಯವಿಲ್ಲ. ಏಕೆಂದರೆ, ಹಳೆಯ ಮೊಬೈಲ್ಫೋನ್ಸಹ ನಿಮ್ಮ ಮನೆಯ ಸಿಸಿಟಿವಿ ಕ್ಯಾಮರಾ ಆಗಿ ಬಳಸಬಹುದು. ಹೇಗೆ?, ಇಲ್ಲಿದೆ ನೋಡಿ ಟ್ರಿಕ್.

ಹಳೆಯ ಫೋನ್, ಅದರ ಕ್ಯಾಮೆರಾ ಮತ್ತು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ನೊಂದಿಗೆ, ನಿಮ್ಮ ಮನೆಯನ್ನು ಮೇಲ್ವಿಚಾರಣೆ ಮಾಡಲು, ನಿಮ್ಮ ಮಕ್ಕಳನ್ನು ಪರಿಶೀಲಿಸಲು ಅಥವಾ ಸಾಕುಪ್ರಾಣಿಗಳ ಮೇಲೆ ಕಣ್ಣಿಡಲು ಪರಿಣಾಮಕಾರಿ ಭದ್ರತಾ ವ್ಯವಸ್ಥೆಯನ್ನು ರಚಿಸಬಹುದು.ಇದೇನು ರಾಕೆಟ್‌ ಸೈನ್ಸ್‌ ಅಲ್ಲ, ಇದನ್ನು ಮಾಡಲು ದೊಡ್ಡ ದೊಡ್ಡ ಟೂಲ್‌ಗಳು ಕೂಡ ಬೇಡ. ತುಂಬಾ ಸಿಂಪಲ್‌ ಆಗಿ ನಿಮ್ಮ ಹಳೆಯ ಫೋನ್‌ ಅನ್ನು ಭದ್ರತಾ ಕ್ಯಾಮೆರಾವಾಗಿ ಪರಿವರ್ತಿಸಬಹುದು.

 

ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ : ನೀವಿಲ್ಲಿ ಮೊದಲಿಗೆ ಥರ್ಡ್‌ ಪಾರ್ಟಿ ಸೆಕ್ಯುರಿಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಎರಡು ಸ್ಮಾರ್ಟ್‌ ಫೋನ್‌ : ನಿಮಗೆ ಇಲ್ಲಿ ಎರಡು ಮೊಬೈಲ್ ಸಾಧನಗಳು ಬೇಕಾಗುತ್ತವೆ. ಹಳೆಯ ಫೋನ್ ಕ್ಯಾಮೆರಾವಾಗಿ ಮತ್ತು ಇನ್ನೊಂದು ಅದನ್ನು ಕಂಟ್ರೋಲ್‌ ಮಾಡಲು ಬೇಕು.

ಫೋನ್‌ನಲ್ಲಿ ಮೊದಲಿಗೆ ಕ್ಯಾಮೆರಾ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿ. Android ಮತ್ತು iOS ಗಾಗಿ ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ. ಫೋನ್-ಟು-ಸೆಕ್ಯುರಿಟಿ-ಕ್ಯಾಮೆರಾ ಅಪ್ಲಿಕೇಶನ್‌ಗಳು ಸಾಮಾನ್ಯವಾಗಿ ರಿಮೋಟ್ ರೆಕಾರ್ಡಿಂಗ್ ಮತ್ತು ಸ್ಟ್ರೀಮಿಂಗ್, ಸ್ಥಳೀಯವಾಗಿ ದೃಶ್ಯಗಳ ಸಂಗ್ರಹಣೆ, ದ್ವಿಮುಖ ಆಡಿಯೊ ಸಂವಹನ ಮತ್ತು ಚಲನೆಯ ಪತ್ತೆ ಸಾಮರ್ಥ್ಯಗಳಂತಹ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ. ಆದಷ್ಟು ಡೆವಲಪರ್‌ಗಳಿಂದ ಉತ್ತಮ ರೇಟಿಂಗ್ ಹೊಂದಿರುವ ಭದ್ರತಾ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಆರಿಸಿ, ನಂತರ ಅದನ್ನು ಹಳೆಯ ಫೋನ್‌ನಲ್ಲಿ ಮತ್ತು ನಿಮ್ಮ ಹೊಸ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ.

 

ಎರಡೂ ಫೋನ್‌ಗಳಲ್ಲಿ ಅದನ್ನು ಇನ್‌ಸ್ಟಾಲ್‌ ಮಾಡಿದ ನಂತರ, ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ನಿಮ್ಮ ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ. ಎರಡೂ ಫೋನ್‌ನಲ್ಲಿ ನಿಮ್ಮ ಖಾತೆ ಒಂದೇ ಇರಬೇಕು. ಇಲ್ಲದಿದ್ದರೆ, ಅವುಗಳು ಪರಸ್ಪರ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಆಮೇಲೆ ಅಪ್ಲಿಕೇಶನ್‌ನಲ್ಲಿ ಜೋಡಿಸುವ ವಿಧಾನವನ್ನು ಅನುಸರಿಸಿ. ಈ ಸ್ಟೆಪ್‌ ಫಾಲೋ ಮಾಡುತ್ತಾ ಹೋದ್ರೆ ಫೋನ್‌ನಲ್ಲೇ ಕ್ಯಾಮೆರಾ ಸಿದ್ಧಗೊಳ್ಳುತ್ತದೆ.

 

ನೀವು ಕ್ಯಾಮರಾವನ್ನು ನಿಮ್ಮ ಮನೆಯ ಯಾವ ಜಾಗದಲ್ಲಿ ಇಡಬೇಕು ಎಂದು ಬಯಸುತ್ತೀರಿ? ಹೆಚ್ಚಿನವರು ತಮ್ಮ ಬೆಲೆಬಾಳುವ ವಸ್ತುಗಳನ್ನಿಟ್ಟಿರುವ ರೂಮ್ ಗಳಲ್ಲಿ ಫಿಕ್ಸ್ ಮಾಡಲು ಇಚ್ಛಿಸುತ್ತಾರೆ. ಒಟ್ಟಾರೆ ಒಂದೇ ಜಾಗದಿಂದ ಹೆಚ್ಚು ಪ್ರದೇಶ ಕಾಣುವಂತೆ ಫಿಕ್ಸ್ ಮಾಡುವುದು ಎಲ್ಲರ ಉದ್ದೇಶವಾಗಿರುತ್ತದೆ. ಅಥವಾ ಮುಖ್ಯದ್ವಾರದ ಬಳಿ ಕೂಡ ಫಿಕ್ಸ್ ಮಾಡಬಹುದು.

TAGGED:#home #security #camera #old #phone
Share This Article
Facebook Twitter Copy Link Print
Previous Article ಚಿಕ್ಕ ಮಕ್ಕಳನ್ನ ಕಿಡ್ನ್ಯಾಪ್ ಮಾಡಿ ಮನಬಂದಂತೆ ಥಳಿಸಿದ ಅಪ್ರಾಪ್ತ ಬಾಲಕರು : ವೈರಲ್ ವಿಡಿಯೋ ನೋಡಿ
Next Article ಇನ್ಮುಂದೆ ಪಾರಿವಾಳಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಾಳು ಹಾಕುವಂತಿಲ್ಲ: ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯ

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?