Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತೆಲುಗು ಚಿತ್ರರಂಗದ ಸ್ಟಾರ್ ನಟಿ ನಿಧಿ ಅಗರ್ವಾಲ್ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತೀವ ಮುಜುಗರ ಹಾಗೂ ಆತಂಕ ಎದುರಿಸಿದ ಘಟನೆ ನಡೆದಿದೆ. ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ ಚಿತ್ರದ ‘ಸಹಾನ ಸಹಾನ’ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದೆ.
ಹೈದರಾಬಾದ್‌ನ ಲೂಲೂ ಮಾಲ್‌ನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ ಚಿತ್ರದ ‘ಸಹಾನ ಸಹಾನ’ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಟಿ ನಿಧಿ ಅಗರ್ವಾಲ್ ಹಾಗೂ ನಿರ್ದೇಶಕ ಮಾರುತಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ನಿಧಿ ಅವರು ಹೊರಬರುವಾಗ ನೂರಾರು ಅಭಿಮಾನಿಗಳು ಮತ್ತು ಜನರು ಏಕಾಏಕಿ ಅವರನ್ನು ಸುತ್ತುವರೆದಿದ್ದಾರೆ. ಸೆಲ್ಫಿ ಹಾಗೂ ಹತ್ತಿರದಿಂದ ನೋಡುವ ಹಪಾಹಪಿಯಿಂದ ಜನರು ನಟಿಯ ಮೇಲೆ ಮುಗಿಬಿದ್ದಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಬೌನ್ಸರ್‌ಗಳು ಹರಸಾಹಸ ಪಟ್ಟು ನಿಧಿ ಅವರನ್ನು ಗುಂಪಿನಿಂದ ಹೊರತಂದು ಕಾರಿನವರೆಗೆ ಕರೆದೊಯ್ದರು. ಕಾರು ಹತ್ತಿದ ನಂತರ ನಿಧಿ ಅವರು ದೀರ್ಘವಾಗಿ ನಿಟ್ಟುಸಿರು ಬಿಟ್ಟಿದ್ದು, ಅವರ ಮುಖದಲ್ಲಿನ ಆತಂಕ ಎದ್ದು ಕಾಣುತ್ತಿತ್ತು. ಈ ವೇಳೆ ನಟಿ ತಮ್ಮ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಾ ಬಹಳ ಅಸಮಾಧಾನದಿಂದಲೇ ಅಲ್ಲಿಂದ ನಿರ್ಗಮಿಸಿದ್ದಾರೆ.