Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಬೇಕು ಅಂತ ನಿರ್ಧಾರ ಮಾಡಿದಂತೆ ಇದೆ. ಪ್ರತಿ ವೀಕೆಂಡ್‌ನಲ್ಲೂ ಏನಾದರೂ ಒಂದು ಅಚ್ಚರಿ ಮನೆಯವರಿಗೆ ಎದುರಾಗಿದೆ. ಈ ವಾರ ಕೂಡ ಡಬಲ್ ಎಲಿಮಿನೇಷನ್ ಅಂತ ಪ್ರೋಮೋ ಬಿಟ್ಟು ವೀಕ್ಷಕರಿಗೆ ನಿದ್ದೆ ಕೆಡಿಸಿದ್ದರು. ಅದರಲ್ಲೂ ವೀಕ್ಷಕರ ಫೇವರಿಟ್ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಇಬ್ಬರೂ ಎಲಿಮಿನೇಟ್ ಆಗಿರೋದನ್ನು ರಿವೀಲ್ ಮಾಡಿದ್ದರು.
ಈ ವಾರವೂ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಹಲವರು ಸೇಫ್ ಆಗಿ ಕೊನೆಗೆ ರಜತ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಅಂತಿಮವಾಗಿ ಉಳಿದಿದ್ದರು. ಆಗ ಸುದೀಪ್ ಅವರು ಶಾಕ್ ನೀಡಿದರು. ಈ ಬಾರಿ ಮನೆಯಿಂದ ಒಬ್ಬರಲ್ಲ, ಇಬ್ಬರು ಹೊರಗೆ ಹೋಗುತ್ತಾರೆ ಎಂದರು. ರಜತ್ ಅವರನ್ನು ಮನೆಯಲ್ಲೇ ಉಳಿಸಿ, ಧ್ರುವಂತ್ ಮತ್ತು ರಕ್ಷಿತಾರನ್ನು ಎವಿಕ್ಟ್ ಎಂದು ಘೋಷಿಸಲಾಯ್ತು.
ಇದೀಗ ಮತ್ತೊಂದು ವಿಚಾರ ಬಹಳಷ್ಟು ಚರ್ಚೆಯಲ್ಲಿದು ಅದೇನೆಂದರೆ ಈ ವಾರ ಓಟಿಂಗ್ ಲೈನ್ ಓಪನ್ ಇರಲಿಲ್ಲ ಹೀಗಾಗಿ ಇವರ ಎಲಿಮಿನೇಷನ್ ಇರುದಿಲ್ಲ. ಬದಲಾಗಿ ರಕ್ಷಿತಾ ಹಾಗೂ ಧ್ರುವಂತ್ ಇಬ್ಬರನ್ನೂ ಎಲಿಮಿನೇಷನ್ ಹೆಸರಲ್ಲಿ ಅವರನ್ನು ಸೀಕ್ರೆಟ್ ರೂಂಗೆ ಕಳಿಸಲಾಗಿದೆ ಎನ್ನಲಾಗ್ತಿದೆ.
ಮತ್ತೆ ಯಾವಾಗ ಅವರಿಬ್ಬರು ಮನೆಯ ಒಳಗೆ ಹೋಗಲಿದ್ದಾರೆ ಎಂಬುದು ಪ್ರಶ್ನೆ. ಸುದೀಪ್ ಸಹ, ಈ ಬಗ್ಗೆ ಹೇಳಿದ್ದು, ಆ ಇಬ್ಬರೂ ಸಹ ಎಲ್ಲಿರಲಿದ್ದಾರೆ, ಅವರು ಏನೇನೋ ನೋಡಲಿದ್ದಾರೆ? ಎಂಬ ಕುತೂಹಲ ಇದೆ.