Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಾಜಿ ಶಾಸಕ, ಬಿಜೆಪಿ ನಾಯಕ ಶೀತಲ್ ಅಂಗುರ್ ಅವರ ಸೋದರಳಿಯನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಲಂಧರ್ನಲ್ಲಿ ನಡೆದಿದೆ.
ಮೃತ ಬಾಲಕನಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಬಸ್ತಿ ದನಿಷ್ಮಂದನ್ ಪ್ರದೇಶದ ಶಿವಾಜಿ ನಗರದಲ್ಲಿ ನಡೆದ ವಾಗ್ವಾದದ ಬಳಿಕ ವಿಕಾಸ್ ಎಂಬುವವನ ಮೇಲೆ ಮೂವರು ಯುವಕರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ದಾಳಿಕೋರರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುತ್ತಿದ್ದಂತೆ ಎದೆಗೆ ಹರಿತವಾದ ಆಯುಧದಿಂದ ಆರೋಪಿಗಳು ತಿವಿದಿದ್ದಾರೆ.
ಗಾಯಗಳ ಹೊರತಾಗಿಯೂ, ವಿಕಾಸ್ ಹತ್ತಿರದ ಮನೆಯನ್ನು ತಲುಪಿ ಒಬ್ಬ ಮಹಿಳೆಯ ಬಳಿ ನೀರು ಕೇಳಿದ್ದ. ಆಕೆ ಹಿಂದಿರುಗುವ ಮೊದಲೇ ಆತ ಕುಸಿದುಬಿದ್ದಿದ್ದ. ಕೂಡಲೇ ಆಕೆ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿದ್ದಳು, ಬಳಿಕ ಪೊಲೀಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಲಾಯಿತು. ಕೂಡಲೇ ಆಸ್ಪತ್ರೆಗೆ ಕಳುಹಿಸಲಾಯಿತು ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆಂದು ಹೇಳಿದ್ದಾರೆ.