Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಇತ್ತೀಚೆಗೆ ಜೈಲಿನಲ್ಲೇ ಸಹಚರರ ಜೊತ್ತೆ ಗಲಾಟೆ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದೀಗ ಹಲ್ಲೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದರ್ಶನ್ ಕಾಲಿಂದ ಒದ್ದಿದ್ದಾರಾ ಇಲ್ವಾ ಅಂತಾ ಪ್ರಾಥಮಿಕ ತನಿಖೆಯನ್ನೇ ನಡೆಸಲಾಗಿತ್ತು.
ಸದ್ಯ ತನಿಖಾ ಪ್ರಾಥಮಿಕ ರಿಪೋರ್ಟ್ ಕಾರಾಗೃಹ ಇಲಾಖೆ ಮುಖ್ಯಸ್ಥ ದಯಾನಂದ್ ರಿಗೆ ಸಲ್ಲಿಕೆ ಮಾಡಿದ್ದಾರೆ.ಮಾಧ್ಯಮಗಳಲ್ಲಿ ವರದಿ ಬಂದ ಬೆನ್ನಲ್ಲೇ ದರ್ಶನ್ ಬ್ಯಾರಕ್ ಬಳಿ ಭದ್ರತೆಗಿದ್ದವರ ವಿಚಾರಣೆ ನಡೆಸಲಾಗಿತ್ತು. ಮೂರು ಪಾಳಿಯಲ್ಲಿರೋ ಆರು ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಸಿಬ್ಬಂದಿ, ನಾವು ಭದ್ರತೆಗಿದ್ದ ವೇಳೆ ಯಾವುದೇ ಗಲಾಟೆ, ಹಲ್ಲೆ ಏನೂ ನಡೆದಿಲ್ಲ. ನಮ್ಮ ಗಮನಕ್ಕೂ ಇಲ್ಲ. ಗಲಾಟೆ ಆದ ಬಗ್ಗೆಯೂ ನಮಗೆ ಯಾವುದೇ ದೂರನ್ನ ಬ್ಯಾರಕ್ ನಲ್ಲಿದ್ದವ್ರು ಕೊಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ದೆ ದರ್ಶನ್ ಮತ್ತು ಟೀಂ ನಾರ್ಮಲ್ ರೀತಿಯೇ ಬ್ಯಾರಕ್ ನಲ್ಲಿ ಇದ್ದಾರೆ.
ದರ್ಶನ್ ಬ್ಯಾರಕ್ ನಲ್ಲಿದ್ದ ಜೊತೆಗಾರರು ಸಹ ಸಿಬ್ಬಂದಿ ಬಳಿ ತುಟಿಕ್ ಪಿಟಿಕ್ ಅಂತಿಲ್ಲ. ಡೆವಿಲ್ ಸಿನಿಮಾ ಸಕ್ಸಸ್ ಬಗ್ಗೆ ತಮ್ಮ ಬಳಿಕ ದರ್ಶನ್ ಮಾತಾಡಿದ್ರು ಅಷ್ಟೇ ಎಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಈ ಮೂಲಕ ಸಿಬ್ಬಂದಿ ಹೇಳಿಕೆ ಆಧರಿಸಿ ನಟ ದರ್ಶನ್ ಬ್ಯಾರಕ್ ನಲ್ಲಿ ಯಾವುದೇ ಗಲಾಟೆ ಆಗಿಲ್ಲ ಎಂದು ಎಡಿಜಿಪಿ ದಯಾನಂದ್ ರಿಗೆ ಅಂಶುಕುಮಾರ್ ಪ್ರಾಥಮಿಕ ವರದಿ ಕೊಟ್ಟಿದ್ದಾರೆ.