Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುರಿದು ಬಿದ್ದಿದ್ದು ಅಧಿಕೃತವಾಗಿದೆ. ಇದರ ಬೆನ್ನಲ್ಲಿಯೇ ಟೀಮ್ ಇಂಡಿಯಾದ 10 ಆಟಗಾರ್ತಿಯರು ಪಲಾಶ್ ಮಚ್ಚಲ್ ವಿರುದ್ಧ ಮಹಾ ನಿರ್ಧಾರ ತೆಗೆದುಕೊಂಡಿದ್ದಾರೆ.
ವರದಿಯ ಪ್ರಕಾರ, ಭಾರತೀಯ ಮಹಿಳಾ ತಂಡದ 10 ಆಟಗಾರ್ತಿಯರು ಪಲಾಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಅವರೆಲ್ಲರೂ ಸ್ಮೃತಿ ಮಂಧಾನಾಗೆ ತುಂಬಾ ಆಪ್ತರು ಎಂದು ಪರಿಗಣಿಸಲಾಗಿದೆ. ಈ ಆಟಗಾರ್ತಿಯರಲ್ಲಿ ಸ್ಮೃತಿ ಮಂಧಾನ (ಸ್ವತಃ), ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಶಿಫಾಲಿ ವರ್ಮಾ (ಶಿವಾಲಿ ಶಿಂಧೆ), ಯಸ್ತಿಕಾ ಭಾಟಿಯಾ, ರಿಚಾ ಘೋಷ್, ದೀಪ್ತಿ ಶರ್ಮಾ ಸೇರಿದ್ದಾರೆ.
“ಟೀಮ್ ಸ್ಮೃತಿ” ಸೋಶಿಯಲ್ ಮೀಡಿಯಾದಲ್ಲಿ ಪಲಾಶ್ ಮುಚ್ಚಲ್ ಅವರನ್ನು ಅನ್‌ಫಾಲೋ ಮಾಡುವ ಮೂಲಕ ಏಕತೆಯನ್ನು ಪ್ರದರ್ಶಿಸಿದೆ ಮತ್ತು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಪಲಾಶ್ ಇನ್ನೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಈಗ ಸ್ಮೃತಿ ತನ್ನ ಜೀವನದಲ್ಲಿ ಎಲ್ಲವನ್ನೂ ಮರೆತು ಮುಂದೆ ಸಾಗಲು ನಿರ್ಧಾರ ಮಾಡಿದ್ದಾರೆ.