Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯುವಕನೋರ್ವ ರಸ್ತೆಯಲ್ಲಿ ಬಿದ್ದಿದ್ದ ಕಲ್ಲೊಂದಕ್ಕೆ ಸುಂದರ ಗಡಿಯಾರದ ರೂಪ ನೀಡಿ 5000 ಸಾವಿರ ರೂಪಾಯಿಗೆ ಅದನ್ನು ಮಾರಾಟ ಮಾಡಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಭಾರಿ ವೈರಲ್ ಆಗ್ತಿದೆ.
ವೈರಲ್ ಅದ ವೀಡಿಯೋದಲ್ಲಿ, ವೀಡಿಯೋದ ಆರಂಭದಲ್ಲಿ ಈ ಹುಡುಗ ಕಲ್ಲೊಂದರಿಂದ ಹಣ ಹೇಗೆ ಸಂಪಾದನೆ ಮಾಡಬಹುದು ಎಂಬುದನ್ನು ನಾನು ತೋರಿಸಿಕೊಡುತ್ತೇನೆ ಎಂದು ಹೇಳುತ್ತಾನೆ. ನಂತರ ಕುಕ್ಕಿಂಗ್ ವಿಡಿಯೋದವರು ಮಾಡುವಂತೆ ಎಲ್ಲಕ್ಕಿಂತ ಮೊದಲು ರಸ್ತೆಯಲ್ಲಿ ಬಿದ್ದಿದ್ದ ಕಲ್ಲೊಂದನ್ನು ಹೆಕ್ಕಿಕೊಂಡು ಬ್ಯಾಗ್‌ನಲ್ಲಿ ತುಂಬಿಸಿ ತಂದೆ ನಂತರ ಅದನ್ನು ಕಲ್ಲು ಕತ್ತರಿಸುವ ವ್ಯಕ್ತಿಯ ಬಳಿ ತೆಗೆದುಕೊಂಡು ಹೋಗಿ ಅವರ ಕೈನಲ್ಲಿ ಅದಕ್ಕೊಂದು ಆಕಾರ ಕೊಡಿಸಿದೆ. ನನಗೆ ಹೇಗೆ ಬೇಕು ಹಾಗೆ ಆಕಾರದಲ್ಲಿ ಅದಕ್ಕೊಂದು ರೂಪ ಕೊಡಿಸಿದೆ. ಆ ಕಲ್ಲಿನ ಮಧ್ಯೆ ಗಡಿಯಾರ ಕೆಲಸ ಮಾಡುವ ಯಂತ್ರವನ್ನು ಕೂರಿಸುವುದಕ್ಕೆ ಒಂದು ವೃತ್ತಕಾರದ ತೂತನ್ನು ಕೊರೆಸಿದೆ. ನಂತರ ಕಲ್ಲನ್ನು ಮೃದುವಾಗಿಸುವ ಪೇಂಟ್ ಒಂದನ್ನು ತಂದು ಇಡೀ ಕಲ್ಲಿಗೆ ಪೇಂಟ್ ಮಾಡಿ ಬಿಸಿಲಿನಲ್ಲಿ ಒಣಗುವುದಕ್ಕೆ ಇರಿಸಿದೆ. ಇದರಿಂದ ಕಲ್ಲು ಫುಲ್ ಫಳ ಫಳ ಹೊಳೆಯುವುದಕ್ಕೆ ಶುರು ಆಯ್ತು. ನಂತರ ಗಡಿಯಾರವನ್ನು ಕೂರಿಸಿದೆ. ಈಗ ಕಲ್ಲಿನ ಮೇಲೆ ನಿಜವಾದ ಗಡಿಯಾದ ನಡೆಯುವುದಕ್ಕೆ ಶುರು ಆಯ್ತು.
ನಂತರ ಅದನ್ನು ತೆಗೆದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಾರಾಟಕ್ಕೆ ತೆಗೆದುಕೊಂಡು ಹೋದೆ. ಅನೇಕರು ಅದರ ಹಿಂಭಾಗ ನೋಡಿ ಅದನ್ನು ಖರೀದಿಸುವುದಕ್ಕೆ ನಿರಾಕರಿಸಿ ಹೊರಟು ಹೋದರು. ನಂತರ ಒಬ್ಬರು ಶ್ರೀಮಂತ ವ್ಯಕ್ತಿ ಕಾಣಿಸಿದರು. ಅವರು ಬೆಲೆ ಎಷ್ಟು ಕೇಳಿದರು. ನಾನು 5000 ರೂಪಾಯಿ ಎಂದು ಹೇಳಿದೆ. ಅವರು ಖರೀದಿಸುವುದಿಲ್ಲ ಎಂದು ನಾನು ಭಾವಿಸಿದೆ. ಆದರೆ ಅವರಿಗೆ ಆ ಗಾಡಿಯಾರ ಬಹಳ ಇಷ್ಟ ಆಯ್ತು ಅವರು ಮರುಮಾತನಾಡದೇ 5 ಸಾವಿರ ರೂಪಾಯಿ ನೀಡಿ ಆ ಗಡಿಯಾರವನ್ನು ಖರೀದಿ ಮಾಡಿದರು ಎಂದು ಆ ಹುಡುಗ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
https://www.instagram.com/reel/DRr5JeJDDXl/?igsh=MTYwb2N4cHN5MGpleQ==
ಸಿಎಂ ಆಗಲು 500 ಕೋಟಿ ರೂ…: ನವಜೋತ್ ಕೌರ್ ಸಿಧು ಕಾಂಗ್ರೆಸ್‌ನಿಂದ ಅಮಾನತು