Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪಲಾಶ್ ಮುಚ್ಚಲ್ ಅವರೊಂದಿಗಿನ ವಿವಾಹ ಮುಂದೂಡಲ್ಪಟ್ಟ ನಂತರ ಸ್ಮೃತಿ ಮಂಧಾನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೊದಲ ಬಾರಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಮಂಧಾನ ಅವರ ನಿಶ್ಚಿತಾರ್ಥದ ಉಂಗುರ ಕಾಣೆಯಾಗಿದ್ದು, ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಆದಾಗ್ಯೂ, ವಿವಾಹ ಮುಂದೂಡುವ ಮೊದಲು ಅಥವಾ ನಂತರ ವೀಡಿಯೊವನ್ನು ಚಿತ್ರೀಕರಿಸಲಾಗಿದೆಯೇ ಎಂಬುದನ್ನು ದೃಢೀಕರಿಸಲಾಗಿಲ್ಲ. ಇದು ಅಭಿಮಾನಿಗಳಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.
ಮಂಧಾನ ಶುಕ್ರವಾರ ಮೊದಲ ಬಾರಿಗೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ಪ್ರಮುಖ ಟೂತ್‌ಪೇಸ್ಟ್ ಬ್ರಾಂಡ್‌ನೊಂದಿನ ವೀಡಿಯೊ ಆಗಿದೆ. ಈ ವೇಳೆ ವೀಡಿಯೊ ನೋಡಿದ ಅಭಿಮಾನಿಗಳು ಸ್ಮೃತಿ ಬೆರಳಿನಿಂದ ನಿಶ್ಚಿತಾರ್ಥದ ಉಂಗುರ ಮಿಸ್ ಆಗಿರುವುದನ್ನು ಗಮನಿಸಿದ್ದಾರೆ.
ಈ ಜಾಹೀರಾತನ್ನು ನಿಶ್ಚಿತಾರ್ಥದ ಮೊದಲು ಅಥವಾ ನಂತರ ಚಿತ್ರೀಕರಿಸಲಾಗಿದೆಯೇ ಎಂಬುದು ತಿಳಿದಿಲ್ಲ. ಈ ನಡುವೆ ಸ್ಮೃತಿ ಮಂಧಾನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಚರ್ಚೆಯ ವಿಷಯವಾಗಿದೆ.
ಮದುವೆ ಮುಂದೂಡಲ್ಪಟ್ಟ ನಂತರ ಸ್ಮೃತಿ ಮಂಧಾನ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಮತ್ತೊಂದೆಡೆ ಪಾಲಕ್ ಮುಚ್ಚಲ್ ಅವರು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದರು. “ಕುಟುಂಬಗಳು ಬಹಳ ಕಷ್ಟದ ಸಮಯವನ್ನು ಎದುರಿಸಿವೆ ಅಂದುಕೊಂಡಿದ್ದೇನೆ. ಈ ಸಮಯದಲ್ಲಿ ನಾವು ಸಕಾರಾತ್ಮಕತೆಯನ್ನು ನಂಬಬೇಕು ಎಂದು ನಾನು ಪುನಃ ಹೇಳಲು ಬಯಸುತ್ತೇನೆ” ಎಂದಿದ್ದರು.
https://www.instagram.com/reel/DR4ITXkEuKv/?igsh=MThvdWgwcWljbGcwbg==