Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರ ಬೇಡಿಕೆಯೊಂದಕ್ಕೆ ಕೋರ್ಟ್ ಅಸ್ತು ಎಂದಿದೆ.
ಬುಧವಾರ (ಡಿ.3) ವಿಚಾರಣೆ ನಡೆದಿತ್ತು. ಪವಿತ್ರಾ ಗೌಡ, ದರ್ಶನ್ ಸೇರಿ ಹಲವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ಇದೇ ವೇಳೆ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ತನ್ನ ಬ್ಯಾರಕ್ ನಲ್ಲಿ ಟಿವಿ ಹಾಕಿಸಿ ಕೊಡಿ ಎಂದು ಮನವಿ ಮಾಡಿದ್ದರು.
ಜೈಲಿನಲ್ಲಿ ತೆಲೆಕೆಡುತ್ತಿದೆ, ಇರೋಕೆ ಆಗ್ತಾ ಇಲ್ಲ. ದಯವಿಟ್ಟು ಟಿವಿ ಕೊಡಿಸಿ ಎಂದು ದರ್ಶನ್ ಮನವಿ ಮಾಡಿದ್ದರು.
ಈ ಸಂಬಂಧ 57ನೇ ಸಿಸಿಹೆಚ್ ಕೋರ್ಟ್‌ನ ಜಡ್ಜ್ ಗುರುವಾರ (ಡಿ.4) ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದರ್ಶನ್ ಸೇರಿ ಇತರೆ ಆರೋಪಿಗಳ ಬ್ಯಾರಕ್ ನಲ್ಲಿ ಟಿವಿ ಅಳವಡಿಕೆ ಮಾಡಬೇಕೆಂದು ಜಡ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಟಿವಿ ಅಳವಡಿಕೆ ಮಾಡುವ ಸ್ಥಳದಲ್ಲಿ ಸಿಸಿಟಿಯನ್ನೂ ಅಳವಡಿಸಿಬೇಕೆಂದು ಈ ವೇಳೆ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.
ಇದಲ್ಲದೆ ಹತ್ಯೆಯಾದ ರೇಣುಕಾಸ್ವಾಮಿ ಪೋಷಕರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಪ್ರಕರಣದಲ್ಲಿ ರೇಣುಕಾಸ್ವಾಮಿ ತಂದೆ, ತಾಯಿ ಅವರನ್ನು ಪ್ರಕರಣ ಪರೋಕ್ಷ ಸಾಕ್ಷ್ಯಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಇನ್ನು ಏಳನೇ ಆರೋಪಿ ಪ್ರದೋಷ್‌ಗೆ ಮತ್ತೊಮ್ಮೆ ಜಾಮೀನು ಮಧ್ಯಂತರ ನೀಡಲಾಗಿದೆ. ಅವರ ತಂದೆಯ ಕಾರ್ಯದಲ್ಲಿ ಭಾಗಿಯಾಗಲು ಡಿಸೆಂಬರ್ 7ರವರೆಗೆ ಜಾಮೀನು ನೀಡಲಾಗಿದೆ.
ಡಿಸೆಂಬರ್ 17 ರಿಂದ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತ ಹಂತವಾಗಿ ನಡೆಯಲಿದೆ. ಎಲ್ಲ ಪ್ರಮುಖ ಸಾಕ್ಷ್ಯಗಳು ನ್ಯಾಯಧೀಶರ ಮುಂದೆ ಬರಲಿದ್ದು, ರೇಣುಕಾಸ್ವಾಮಿ ತಂದೆ ತಾಯಿಗಳು ಸಾಕ್ಷಿ ಹೇಳಲಿದ್ದಾರೆ.