Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಂಬೈ: ಮಗಳ ಪ್ರೀತಿ ನಿರಾಕರಿಸಿದ ಕುಟುಂಬವೊಂದು ಆಕೆಯ ಪ್ರಿಯಕರನನ್ನೇ ಕೊಂದು ಹಾಕಿದ್ದು, ಇದಕ್ಕೆ ಆಕ್ರೋಶಗೊಂಡ ಯುವತಿ ಪ್ರತ್ಯುತ್ತರವಾಗಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು.
ಹೀಗಾಗಿ ಗೆಳೆಯನ ಶವದ ಜತೆಯೇ ಮದುವೆಯಾಗಿ, ಅವರ ಮನೆಗೆ ಸೊಸೆಯಾಗಿ ಹೋಗಿದ್ದ ಆಂಚಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಕುಟುಂಬವೇ ನಮಗೆ ದ್ರೋಹ ಬಗೆದಿದೆ, ನನ್ನ ಕುಟುಂಬ ಸದಸ್ಯರು ಸಕ್ಷಮ್ ಜತೆ ಸಮಯ ಕಳೆಯುತ್ತಿದ್ದರು, ಅವನೊಂದಿಗೆ ಚೆನ್ನಾಗಿಯೇ ವರ್ತಿಸುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು ಎಲ್ಲವೂ ಚೆನ್ನಾಗಿದೆ ಎಂದು ಅವನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಈ ರೀತಿ ನಡೆಯುತ್ತೆ ಎನ್ನುವ ಕಲ್ಪನೆಯೂ ನಮಗಿರಲಿಲ್ಲ ಎಂದು ಆಂಚಲ್ ಕಣ್ಣೀರಿಟ್ಟಿದ್ದಾರೆ. ಇದೀಗ ಆಂಚಲ್ ಕುಟುಂಬ ಸದಸ್ಯರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.
ಇನ್ನು ಇದೇ ವೇಳೆ ಸಕ್ಷಮ್ ಕೊಲೆ ಹಿಂದೆ ಇಬ್ಬರು ಪೊಲೀಸರ ಪಾತ್ರವಿದೆ ಎಂದೂ ಆರೋಪಿಸಿರುವ ಅಂಚಲ್, ಧೀರಜ್ ಕೋಮಲ್ವಾರ್ ಮತ್ತು ಮಹಿತ್ ಅಸರ್ವರ್ ಎಂಬ ಇಬ್ಬರು ಪೊಲೀಸರು ತನ್ನ ಸಹೋದರರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಿರಿಯ ಸಹೋದರ ಪೊಲೀಸ್ ಠಾಣೆಗೆ ಕರೆದೊಯ್ದು ಸಕ್ಷಮ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಕೇಳಿಕೊಂಡಿದ್ದ.
ಅದೇ ದಿನ ಪೊಲೀಸರು ನನ್ನ ಸಹೋದರರನ್ನು ಸಕ್ಷಮ್ ಕೊಲ್ಲಲು ಪ್ರಚೋದಿಸಿದ್ದರು. ನಿನ್ನ ಸಹೋದರಿಯ ಪ್ರಿಯಕರನನ್ನು ಏಕೆ ಕೊಲ್ಲಬಾರದು ಎಂದು ಹೇಳಿದ್ದರು. ಇದಕ್ಕೆ ನನ್ನ ಸಹೋದರರೂ ಕೂಡ ಸಂಜೆಯೊಳಗೆ ಆತನ ಕತೆ ಮುಗಿಸುತ್ತೇವೆ ಎಂದು ಹೇಳಿದ್ದರು ಎಂದಿದ್ದಾರೆ.
ಬಳಿಕ ಗುರುವಾರ ಸಂಜೆ, ಅಂಚಲ್ ಸಹೋದರರಾದ ಹಿಮೇಶ್ ಮಾಮಿದ್ವರ್ ಈ ವಿಚಾರವಾಗಿ ಜಗಳ ತೆಗೆದಿದ್ದಾರೆ. ಸಕ್ಷಮ್ ಜೊತೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಹಿಮೇಶ್ ಸಕ್ಷಮ್ಗೆ ಗುಂಡು ಹಾರಿಸಿ ಆತನ ಪಕ್ಕೆಲುಬುಗಳಿಗೆ ಹೊಡೆದಿದ್ದಾನೆ. ನಂತರ ಅವನು ಅವರ ತಲೆಗೆ ಟೈಲ್ನಿಂದ ಹೊಡೆದಾಗ ಸಕ್ಷಮ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.