Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಗರದಲ್ಲಿ ಎಲೆಕ್ಟ್ರಿಕ್ ಬಸ್ಗಳಿಂದ ಆಕ್ಸಿಡೆಂಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬ್ರೇಕ್ ಡೌನ್, ಬ್ಯಾಟರಿ ಡೌನ್ ಸಮಸ್ಯೆಗಳಿಂದ ನಡುರೋಡಲ್ಲಿ ಬಸ್ಗಳು ಕೆಟ್ಟು ನಿಲ್ಲುತ್ತಿದ್ದು, ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ.. ಈ ಹಿನ್ನಲೆಯಲ್ಲಿ ಕಳಪೆ ಸೇವೆ ಮತ್ತು ಒಪ್ಪಂದ ಉಲ್ಲಂಘನೆಗಾಗಿ ಬಿಎಂಟಿಸಿ ನಾಲ್ಕು ಖಾಸಗಿ ಕಂಪನಿಗಳಿಗೆ 25 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಿದೆ.
ಇದೀಗ ಇವಿ ಬಸ್ ಚಾಲಕರಿಗೆ ಬಿಎಂಟಿಸಿಯೇ ತರಬೇತಿ ನೀಡುತ್ತಿದ್ದು, ವೇತನ ಪಾವತಿಗೆ ನಿರ್ದಿಷ್ಟ ದಿನಾಂಕವನ್ನೂ ನಿಗದಿಮಾಡಿದೆ.
ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್ ಗೆ 9.80 ಕೋಟಿ ರೂ. ದಂಡ, ಸ್ವಿಚ್ ಮೊಬಿಲಿಟಿ ಸಂಸ್ಥೆಗೆ 3 ಕೋಟಿ ರೂ. ದಂಡ ವಿಧಿಸಿದ ಬಿಎಂಟಿಸಿ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ಗೆ 11.99 ಕೋಟಿ ರೂ. ಓಎಚ್‌ಎಂ ಗ್ಲೋಬಲ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್‌ಗೆ 67 ಲಕ್ಷ ರೂ. ದಂಡ ಹಾಕಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.