Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > New Trend ಈ ರೆಸ್ಟೋರೆಂಟ್‌ಗೆ ಒಬ್ಬರೇ ಹೋಗುವಂತಿಲ್ಲ! ಹೋದರೂ ಊಟ ಸಿಗಲ್ಲ! ಏನಿದು ಹೊನ್ಬಾಪ್?
ಪ್ರಮುಖಲೈಫ್‌ಸ್ಟೈಲ್ವಿದೇಶ

New Trend ಈ ರೆಸ್ಟೋರೆಂಟ್‌ಗೆ ಒಬ್ಬರೇ ಹೋಗುವಂತಿಲ್ಲ! ಹೋದರೂ ಊಟ ಸಿಗಲ್ಲ! ಏನಿದು ಹೊನ್ಬಾಪ್?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸೋಲ್:‌ ಈ ಹೋಟೆಲ್‌ಗೆ ಒಬ್ಬರೇ ಹೋಗುವಂತಿಲ್ಲ. ಹೋದರೂ ನಿಮಗೆ ಊಟೋಪಹಾರ ಏನೂ ಸಿಗುವುದಿಲ್ಲ. ಊಟ ಬೇಕೇ ಬೇಕು ಎನ್ನುವುದಾದರೆ ಒಬ್ಬರೇ ಹೋದರೂ ಎರಡು ಊಟ ಆರ್ಡರ್ ಮಾಡಬೇಕು!

ವಿಚಿತ್ರವೆನಿಸಿದರೂ ಇದು ಸತ್ಯ. ದಕ್ಷಿಣ ಕೊರಿಯಾದ ಯೋಸು ನಗರದ ರೆಸ್ಟೋರೆಂಟೊಂದು ಒಬ್ಬರೇ ಊಟಕ್ಕೆ ಬರುವ ಗ್ರಾಹಕರನ್ನು ನಿರಾಕರಿಸಿದೆ. ಇದಕ್ಕೆ ಹೋಟೆಲ್ ನೀಡಿರುವ ಕಾರಣ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಇದೇನಪ್ಪಾ ಹೊಸ ನಿಯಮ ಎಂದರೆ, ಈ ರೆಸ್ಟೋರೆಂಟ್‌ ಉಪಾಹಾರ ಸೇವಿಸಲು ಒಬ್ಬರೇ ಬಂದವರಿಗೆ ಇಬ್ಬರ ಊಟದ ಹಣ ಪಾವತಿಸಲು, ಇಬ್ಬರ ಊಟ ಆರ್ಡರ್ ಮಾಡಲು, ಸ್ನೇಹಿತರನ್ನು ಕರೆತರಲು ಅಥವಾ ಪತ್ನಿ ಜತೆ ಬರಲು ಸೂಚಿಸಿದೆ. ಅಲ್ಲದೆ, ‘ನಾವು ಒಂಟಿತನವನ್ನು ಮಾರಾಟ ಮಾಡುವುದಿಲ್ಲʼ ಎಂದು ಹೇಳಿ ವಿವಾದ ಸೃಷ್ಟಿಸಿದೆ.

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ‘ಹೊನ್ಬಾಪ್’ (ಒಬ್ಬರೇ ಊಟ ಮಾಡುವುದು) ಎಂಬ ಪರಿಪಾಠ ಜನಪ್ರಿಯವಾಗಿದೆ. ಜನರು ಒಬ್ಬರೇ ಊಟ ಮಾಡುವ ಸ್ವಾತಂತ್ರ್ಯವನ್ನು ಆನಂದಿಸುತ್ತಿದ್ದಾರೆ. ಆದರೆ, ಸಂಪ್ರದಾಯವಾದಿಯಾಗಿರುವ ಕೆಲವು ರೆಸ್ಟೋರೆಂಟ್‌ಗಳು ಈ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟಪಡುತ್ತಿವೆ. ಈ ರೆಸ್ಟೋರೆಂಟ್‌ನ ನಿರ್ಧಾರವು, ಒಬ್ಬರೇ ಊಟ ಮಾಡುವುದನ್ನು ಒಂಟಿತನಕ್ಕೆ ಸಮನಾಗಿ ನೋಡಿದೆ.

ಅದಕ್ಕೆ, ಅವರು ತಮ್ಮ ಗ್ರಾಹಕರಿಗೆ ‘ನಾವು ಒಂಟಿತನವನ್ನು ಮಾರಾಟ ಮಾಡುವುದಿಲ್ಲ. ದಯವಿಟ್ಟು ಒಬ್ಬರೇ ಬರಬೇಡಿ’ ಎಂದು ರೆಸ್ಟೋರೆಂಟ್ ತನ್ನ ಸೂಚನಾ ಫಲಕದಲ್ಲಿ ಬರೆದುಕೊಂಡಿದೆ. ಒಂಟಿಯಾಗಿ ಊಟಕ್ಕೆ ಹೋಗಲು ಬಯಸುವವರನ್ನು ರೆಸ್ಟೋರೆಂಟ್‌ನಿಂದ ನಿಷೇಧಿಸಿದ್ದಾರೆ.

ಈ ವಿದ್ಯಮಾನ ದಕ್ಷಿಣ ಕೊರಿಯಾದಲ್ಲಿ ಏಕ ವ್ಯಕ್ತಿ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದಿದೆ. ಅಂಕಿ ಅಂಶಗಳ ಪ್ರಕಾರ, ಶೇ. 29ರಷ್ಟು ಕುಟುಂಬಗಳು ಒಬ್ಬರೇ ಸದಸ್ಯರನ್ನು ಹೊಂದಿವೆ ಎಂದು ವರದಿಯಾಗಿದೆ.

ಆದರೆ ಈ ಹಳೆಯ ಮನಸ್ಥಿತಿಗೆ ಹಲವರು ನಾನಾ ರೀತಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ರೆಸ್ಟೋರೆಂಟ್ ಮಾಲೀಕರ ಮನಸ್ಥಿತಿಯನ್ನು ಹಳೆಯದು ಎಂದು ಟೀಕಿಸಿದ್ದಾರೆ. ‘ಒಬ್ಬರೇ ಊಟ ಮಾಡುವುದನ್ನು ಒಂಟಿತನಕ್ಕೆ ಏಕೆ ಹೋಲಿಸಬೇಕು?’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ‘ಈ ರೆಸ್ಟೋರೆಂಟ್ ತನ್ನ ಗ್ರಾಹಕರನ್ನು ಗೌರವಿಸುವುದಿಲ್ಲ’ ಎಂದು ಇನ್ನೋರ್ವ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕೆಲವರು ಮಾಲೀಕರ ನಿರ್ಧಾರವನ್ನು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ‘ಮಾಲೀಕರು ಆರ್ಥಿಕ ನಷ್ಟವನ್ನು ಭರಿಸಲು ಸಿದ್ಧರಿದ್ದರೆ, ಅದು ಅವರ ಆಯ್ಕೆ ಮತ್ತು ಅದನ್ನು ಗೌರವಿಸಬೇಕು’ ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ಹಿಂದೆಯೂ ಸಹ ಇದೇ ವರ್ಷದ ಆರಂಭದಲ್ಲಿ ಇಂತಹುದ್ದೇ ಘಟನೆ ನಡೆದಿದ್ದು, ಒಬ್ಬರೇ ಬಂದ ಗ್ರಾಹಕರಿಗೆ ಸಿಬ್ಬಂದಿ ಅವಾಚ್ಯ ಶಬ್ದಗಳನ್ನು ಬಳಸಿದ್ದರು. ‘ಬೇಗ ಊಟ ಮಾಡಿ, ಬೇರೆ ಜನ ಬರ್ತಿದ್ದಾರೆ’ ಎಂದು ಹೇಳಿದ್ದರೆನ್ನಲಾಗಿದೆ.

ಈ ಮಧ್ಯೆ ಮತ್ತೆ ಮರುಕಳಿಸಿದ್ದು, ಗ್ರಾಹಕರ ಆಯ್ಕೆಯನ್ನು ಗೌರವಿಸದೆ ತಮ್ಮ ಸಂಪ್ರದಾಯ ಹಾಗೂ ತಮ್ಮ ಸಿದ್ಧಾಂತ ಹೇರುತ್ತಿರುವುದು ಭಾರೀ ಚರ್ಚೆ ಹುಟ್ಟುಹಾಕಿದೆ.

TAGGED:You can't go to this restaurant alone! What is honbap?
Share This Article
Facebook Twitter Copy Link Print
Previous Article ಸಿಎಂ ಸ್ಥಾನಕ್ಕಾಗಿ ಕಿತ್ತಾಟ: ಸಿದ್ದರಾಮಯ್ಯರ ಮುಂದಿನ ನಡೆ ಏನು?
Next Article Karnataka politics ಸಿದ್ದರಾಮಯ್ಯ ನಡೆಗೆ ರಾಹುಲ್ ಅಸಮಾಧಾನಗೊಂಡ್ರಾ? ಸಿಎಂ ಸ್ಥಾನ ಬಿಟ್ಟುಕೊಡಬೇಕಾಗತ್ತಾ?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?