Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವೆಲ್ಲಿಂಗ್ಟನ್: ಜಗತ್ತಿನ ಅತ್ಯಂತ ಶಾಂತಿಪ್ರಿಯ ರಾಷ್ಟ್ರವೆಂದೇ ಕರೆಯಲಾಗುವ ನ್ಯೂಜಿಲೆಂಡ್ ಇದೀಗ ಅಕ್ಷರಶಃ ಯುದ್ಧ ಸಾರಿದೆ.
ಭಾರತ ಪಾಕಿಸ್ತಾನ ಯುದ್ಧ ಅಂತ್ಯವಾಗಿದ್ದು, ರಷ್ಯಾ ಉಕ್ರೇನ್ ಯುದ್ಧ ಕೂಡ ತಾರ್ಕಿಕ ಅಂತ್ಯದತ್ತ ಸಾಗಿದೆ. ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧಗಳ ನಡುವೆ ಇದೀಗ ಶಾಂತಿಪ್ರಿಯ ರಾಷ್ಟ್ರ ನ್ಯೂಜಿಲೆಂಡ್ ಕೂಡ ಯುದ್ಧ ಸಾರಿದೆ.
ತನ್ನ ನೆಲದ ಅಪರೂಪದ ಜೀವವೈವಿಧ್ಯದ ಮೇಲೆ ದಾಳಿ ಮಾಡಿದ ಆರೋಪದ ಮೇರೆಗೆ ದೇಶದಲ್ಲಿರುವ Stone Cold Killers ಗಳನ್ನು ನಿರ್ಮೂಲನೆ ಮಾಡುವುದಾಗಿ ನ್ಯೂಜಿಲೆಂಡ್ ಘೋಷಣೆ ಮಾಡಿದೆ.
ಹಲವಾರು ಪ್ರಭೇದಗಳಿಗೆ ನೆಲೆಯಾಗಿರುವ ನ್ಯೂಜಿಲೆಂಡ್ನ ವಿಶಿಷ್ಟ ಜೀವವೈವಿಧ್ಯತೆಯನ್ನು ಸಂರಕ್ಷಿಸಲು, ಅವುಗಳ ಸಂಖ್ಯೆಯನ್ನು ನಿಯಂತ್ರಿಸುವುದು ಅವಶ್ಯ ಎಂದು ಹೇಳಿರುವ ನ್ಯೂಜಿಲೆಂಡ್, ಈ ಯುದ್ಧ ಅನಿವಾರ್ಯ ಎಂದು ಹೇಳಿದೆ.
ನ್ಯೂಜಿಲೆಂಡ್ ಸರ್ಕಾರದ ಆಕ್ರೋಶಕ್ಕೆ ತುತ್ತಾಗಿರುವುದು ಅಲ್ಲಿನ ಕಾಡು ಬೆಕ್ಕುಗಳು. ಈ ಕಾಡು ಬೆಕ್ಕುಗಳು ನ್ಯೂಜಿಲೆಂಡ್ನ ಅಪರೂಪದ ಪ್ರಬೇದದ ಪ್ರಾಣಿಗಳನ್ನು ತಿಂದು ನಾಶಪಡಿಸುತ್ತಿವೆ ಎಂದು ಹೇಳಲಾಗಿದೆ. ಹೀಗಾಗಿ ಇವುಗಳನ್ನು Stone Cold Killers ಎಂದು ಕರೆಯಲಾಗುತ್ತಿದೆ.
ನ್ಯೂಜಿಲೆಂಡ್ ತನ್ನ ದುರ್ಬಲವಾದ ಸ್ಥಳೀಯ ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ 2050 ರ ವೇಳೆಗೆ ದೇಶಾದ್ಯಂತ ಕಾಡು ಬೆಕ್ಕುಗಳನ್ನು ನಿರ್ಮೂಲನೆ ಮಾಡಲು ಯೋಜಿಸುತ್ತಿದೆ ಎಂದು ಸಂರಕ್ಷಣಾ ಸಚಿವೆ ತಮಾ ಪೊಟಕಾ ತಿಳಿಸಿದ್ದಾರೆ.
ನ್ಯೂಜಿಲೆಂಡ್ನ ಕಾಡುಗಳಲ್ಲಿ ಮತ್ತು ಕಡಲಾಚೆಯ ದ್ವೀಪಗಳಲ್ಲಿ 2.5 ಮಿಲಿಯನ್ಗಿಂತಲೂ ಹೆಚ್ಚು (25 ಲಕ್ಷ) ಕಾಡು ಬೆಕ್ಕುಗಳು ವಾಸಿಸುತ್ತಿವೆ. ಅವು 1 ಮೀಟರ್ ಉದ್ದ (ಬಾಲ ಸೇರಿದಂತೆ) ಬೆಳೆಯುತ್ತವೆ ಮತ್ತು 7 ಕೆಜಿವರೆಗೆ ತೂಗುತ್ತವೆ.
https://x.com/444hu/status/1992975069916635317?t=QlChpfhLv8_6hnQMgc2GQw&s=19
WPL Auction 67 ಆಟಗಾರ್ತಿಯರು ಯಾವ ತಂಡ ಸೇರಿದರು? ಎಷ್ಟು ಮೊತ್ತಕ್ಕೆ ಮಾರಾಟವಾದರು?
Singles, be careful ಅವಿವಾಹಿತರೇ, ಮ್ಯಾಟ್ರಿಮೋನಿ ಸೈಟ್ನಲ್ಲಿ ಹುಷಾರಾಗಿರಿ- ಕೇಂದ್ರ ಸರ್ಕಾರ ಎಚ್ಚರಿಕೆ