Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸೈಬರ್ ಖದೀಮರು 80 ವರ್ಷದ ಮಹಿಳೆಗೆ ಬರೋಬ್ಬರಿ 1.08 ಕೋಟಿ ಪಂಗನಾಮ ಹಾಕಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ‘ವಿಜಯ್ ಖನ್ನಾ’ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಆಧಾರ್ ಕಾರ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಳಸಲಾಗಿದೆ ಎಂದು ನಂಬಿಸಿದ್ದಾನೆ. ಅದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಂದ್ ಮಾಡ್ತಿದ್ದೇವೆ ಎಂದು ಬೆದರಿಸಿದ್ದಾನೆ.
ಇದರಿಂದ ವೃದ್ಧೆ ಗಾಬರಿಯಾಗಿದ್ದಾಳೆ. ನಂತರ ನೀವು ಮಹಿಳೆ ಆಗಿರೋದ್ರಿಂದ ನಾವು ನಿಮ್ಮನ್ನು ವಿಚಾರಣೆ ಮಾಡಲ್ಲ. ನಮ್ಮ ಹಿರಿಯ ಮಹಿಳಾ ಅಧಿಕಾರಿ ತನಿಖೆ ಮಾಡಲಿದ್ದಾರೆ ಎಂದು ಕರೆ ವರ್ಗಾಯಿಸಿದ್ದಾನೆ. ರಶ್ಮಿ ಶುಕ್ಲಾ ಎಂಬ ಹೆಸರಿನ ಮಹಿಳೆಗೆ ವರ್ಗಾಯಿಸುತ್ತಿದ್ದೇನೆ ಎಂದಿದ್ದಾನೆ. ಅಲ್ಲಿಂದ ವೃದ್ಧೆಯ ಬಳಿ ಹಣ ಪೀಕುವ ಕೆಲಸ ಆಗಿದೆ.
ಫೋನ್ ಕರೆ ವರ್ಗಾವಣೆ ಆಗ್ತಿದ್ದಂತೆಯೇ, ವಂಚಕರು ವೃದ್ಧೆಗೆ ಬೆದರಿಕೆ ಹಾಕಿದ್ದಾರೆ. ನೀವು ಈಗ ಡಿಜಿಟಲ್ ಅರೆಸ್ಟ್ ಆಗಿದ್ದೀರಿ. ತನಿಖೆಗೆ ಸಹಕರಿಸಬೇಕು ಎಂದಿದ್ದಾರೆ. ಅಂತೆಯೇ ಬಂಧನಕ್ಕೆ ಸಂಬಂಧಿಸಿ ನಕಲಿ ವಾರೆಂಟ್ ಕೂಡ ವೃದ್ಧೆಯ ಫೋನ್ಗೆ ಕಳುಹಿಸಿದ್ದಾರೆ. ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆ ಅಂತಾ ಮಾನಸಿಕ ಹಿಂಸೆ ನೀಡಿ ವಿವಿಧ ಖಾತೆಗಳಿಗೆ 1.08 ಕೋಟಿ ಹಣ ವರ್ಗಾಯಿಸಿಕೊಂಡು ಲಪಟಾಯಿಸಿದ್ದಾರೆ.
ಇದೀಗ ಕೇಂದ್ರ ಸೈಬರ್ ಸೆಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
https://www.newsics.com/2025/11/24/big-shock-for-lpg-consumers-gas-prices-are-rising/